ಬೆಂಗಳೂರು : ‘ಮಾರಿ -2’ ಖ್ಯಾತಿಯ ನಿರ್ದೇಶಕ ಬಾಲಾಜಿ ಮೋಹನ್ ಅವರು ”ನೋಡಿ ಸ್ವಾಮಿ ಇವನು ಇರೋದೆ ಹೀಗೆ” ಸಿನಿಮಾದಲ್ಲಿ ನಟಿಸಿರುವ ಕನ್ನಡತಿ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಅವರನ್ನು ವಿವಾಹವಾಗಿದ್ದಾರೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿವೆ. ಸದ್ದಿಲ್ಲದೇ ಬಾಲಾಜಿ ಮೋಹನ್ ಹಾಗೂ ಧನ್ಯಾ ಬಾಲಕೃಷ್ಣ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.
ಮೂಲತಃ ಬೆಂಗಳೂರಿನವರಾದ ನಟಿ ಧನ್ಯಾ ಬಾಲಕೃಷ್ಣ ಬಹುಭಾಷಾ ನಟಿಯಾಗಿದ್ದಾರೆ. ಕನ್ನಡದ ಚಿತ್ರಗಳಿಯೂ ಅಭಿನಯಿಸಿದ್ದಾರೆ. ತಮಿಳಿನ ʻಮಾರಿ -2ʼ ಖ್ಯಾತಿಯ ಬಾಲಾಜಿ ಜತೆ ಧನ್ಯಾ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಟಿ ಕಲ್ಪಿಕಾ ಗಣೇಶ್ ಯುಟ್ಯೂಬ್ ಸಂದರ್ಶನವೊಂದರಲ್ಲಿ ಧನ್ಯಾ ಹಾಗೂ ಬಾಲಾಜಿ ಮದುವೆ ಆಗಿರುವುದರ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ | Pathaan Film | ʻಪಠಾಣ್ʼ ಸಿನಿಮಾದ ಹಾಡುಗಳಲ್ಲಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಆದೇಶ
ಎಲ್ಲೆಡೆ ಚರ್ಚೆಗಳು ಆಗುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿದ ಬಾಲಾಜಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಅರ್ಜಿಯನ್ನು ವಿಚಾರಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮಮೂರ್ತಿ ನಿರ್ದೇಶಕ ಬಾಲಾಜಿ ಅವರ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಬಾಲಾಜಿ ಅವರು ಈಗಾಗಲೇ ಅರುಣಾ ಎಂಬುವರ ಜತೆ ಮದುವೆ ಆಗಿದ್ದು, ಒಂದೇ ವರ್ಷಕ್ಕೆ ಅವರ ದಾಂಪತ್ಯ ಜೀವನ ಮುರಿದುಬಿತ್ತು. ಜನವರಿ 23ರಂದು ಧನ್ಯಾ ಜನತೆ ಬಾಲಾಜಿ ಮದುವೆ ಆಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ | Pathaan Film | ʻಪಠಾಣ್ʼ ಸಿನಿಮಾದ ಹಾಡುಗಳಲ್ಲಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಆದೇಶ