Site icon Vistara News

Saravana Dhanapal | ಬಲೂನ್‌ ಮ್ಯಾನ್‌ ಖ್ಯಾತಿಯ ಕಲಾವಿದ ಶರವಣ ಧನಪಾಲ್ ಇನ್ನಿಲ್ಲ

Saravana Dhanapal 

ಬೆಂಗಳೂರು: ಬಲೂನ್ ಆ್ಯಕ್ಟ್‌ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದ ಕಲಾವಿದ ಶರವಣ ಧನಪಾಲ್ (Saravana Dhanapal) ವಿಧಿವಶರಾಗಿದ್ದಾರೆ. ಹಲವು ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮ ನೀಡುವ ಮೂಲಕ ಅವರು ಜನಪ್ರಿಯರಾಗಿದ್ದರು. ಕಿಡ್ನಿ ವೈಫಲ್ಯದಿಂದ ಅವರು ಬುಧವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶರವಣ ಧನಪಾಲ್ ವೇದಿಕೆ ಮೇಲೆ ಮಾಡುತ್ತಿದ್ದ ಮೋಡಿಗೆ ಡಾ. ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್ ಮುಂತಾದ ಸ್ಟಾರ್​ ಹೀರೋಗಳು ಕೂಡ ಫಿದಾ ಆಗಿದ್ದರು. ಹಲವು ದಿನಗಳಿಂದ ಶರವಣ ಧನಪಾಲ್​ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯದ ಬಳಿಕ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಶರವಣ (Saravana) ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಲಂನ ಬಡ ಕುಟುಂಬದಲ್ಲಿ ಜನಿಸಿದ್ದ ಶರವಣ ಸ್ವಂತ ಪ್ರತಿಭೆ ಮತ್ತು ಶ್ರಮದಿಂದ ಜೀವನದಲ್ಲಿ ಯಶಸ್ಸು ಕಂಡಿದ್ದರು. ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಲಕ್ಷಾಂತರ ವೀಕ್ಷಕರ ಮನ ಗೆದ್ದಿದ್ದರು.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಜತೆ ಶರವಣ ಧನಪಾಲ್​. 
 
Exit mobile version