Site icon Vistara News

Banaras Movie | ಜಮೀರ್‌ ಪುತ್ರ ಝೈದ್‌ ಖಾನ್‌ ಅಭಿನಯದ `ಬನಾರಸ್’ ಮೊದಲ ದಿನದ ಕಲೆಕ್ಷನ್‌ ಎಷ್ಟು?

Banaras Movie

ಬೆಂಗಳೂರು: ರಾಜಕಾರಣಿ ಜಮೀರ್ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ಅಭಿನಯಿಸಿರುವ ʻಬನಾರಸ್ʼ (Banaras Movie) ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್‌ 4ರ ಶುಕ್ರವಾರ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲನೇ ದಿನವೇ 3 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಎರಡನೇ ದಿನ ಆ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ.

ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಝೈದ್ ಖಾನ್ ನಟನೆಯನ್ನೂ ಕೂಡ ಪ್ರೇಕ್ಷಕರು ಹೊಗಳಿದ್ದಾರೆ. ಈ ಸಿನಿಮಾದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಜನೀಶ್‌ ಲೋಕನಾಥ್‌ ಹಾಡುಗಳು ಗಮನ ಸೆಳೆದಿವೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ.

ಇದನ್ನೂ ಓದಿ | Kannada New Film | `ಜುಗಲ್ ಬಂದಿ’ ಸಿನಿಮಾ ಮೊದಲ ಹಾಡು ಬಿಡುಗಡೆ: ಕನ್ನಡಕ್ಕೆ ಬಂದ ತಮಿಳು ಗಾಯಕಿ!

ಬನಾರಸ್ ಸಿನಿಮಾದ ಮಾಯಾಗಂಗೆ ಸಾಂಗ್ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಕನ್ನಡ ಹಾಗೂ ಮಲಯಾಳಂ ನಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸಹ ಜನರಿಗೆ ಬಹಳ ಇಷ್ಟವಾಗಿ, ಎಲ್ಲೆಡೆ ಈ ಹಾಡಿನ ಬಗ್ಗೆ ಚರ್ಚೆಯಾಗಿತ್ತು.

ಇದನ್ನೂ ಓದಿ | Banaras Movie | ʼಬನಾರಸ್ʼ ಟ್ರೈಲರ್‌ ಔಟ್‌; ನವೆಂಬರ್‌ 4ಕ್ಕೆ ಪಂಚ ಭಾಷೆಯಲ್ಲಿ ರಿಲೀಸ್‌

Exit mobile version