Site icon Vistara News

Banaras Movie | ʼಬನಾರಸ್ʼ ಟ್ರೈಲರ್‌ ಔಟ್‌; ನವೆಂಬರ್‌ 4ಕ್ಕೆ ಪಂಚ ಭಾಷೆಯಲ್ಲಿ ರಿಲೀಸ್‌

Banaras Movie

ಬೆಂಗಳೂರು: ರಾಜಕಾರಣಿ ಜಮೀರ್ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ಅಭಿನಯಿಸಿರುವ ʻಬನಾರಸ್ʼ (Banaras Movie) ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ʻಒಲವೇ ಮಂದಾರʼ ಸಿನಿಮಾದ ನಿರ್ದೇಶಕ ಜಯತೀರ್ಥ ಈ ಸಿನಿಮಾಗೆ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ʻಬನಾರಸ್ʼ (Banaras Movie) ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ.

ಟ್ರೈಲರ್‌ನಲ್ಲಿ ಮಾಸ್‌ ಡೈಲಾಗ್‌ಗಳು ಹೈಲೆಟ್ಸ್‌ ಆಗಿವೆ. ಥ್ರಿಲ್ಲರ್‌ ಕಥೆಯನ್ನು ಹೊಂದಿದೆ ಎಂಬ ಹಿಂಟ್‌ ಅನ್ನು ಚಿತ್ರತಂಡ ನೀಡಿದೆ. ಈ ಹಿಂದೆಯೂ ಜಯತೀರ್ಥ ನಿರ್ದೇಶನದ ʻಬೆಲ್‌ ಬಾಟಮ್‌ʼ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹರಿಪ್ರಿಯಾ ಹಾಗೂ ರಿಷಬ್‌ ಶೆಟ್ಟಿ ನಟನೆಯ ಈ ಸಿನಿಮಾ ಸಖತ್‌ ಸದ್ದು ಮಾಡಿತ್ತು. ಇದೀಗ ಮತ್ತೆ ಜಯತೀರ್ಥ ಬನಾರಸ್‌ ಸಿನಿಮಾ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ | Nani | ಫ್ರೆಂಡ್‌ಶಿಪ್‌ ಡೇಗೆ ನಾನಿ ನಟನೆಯ ದಸರಾ ಸಿನಿಮಾ ಪೋಸ್ಟರ್‌ ರಿವೀಲ್‌: ನಾನಿ ಜತೆ ಮಿಂಚಿದ ಕನ್ನಡದ ನಟ

ʻಬುಲೆಟ್ ಬಸ್ಯಾʼ ಕೊಂಚ ವಿಭಿನ್ನವಾಗಿಯೇ ಹಾಸ್ಯದ ರಸದೌತಣ ನೀಡಿತ್ತು. ʻಒಲವೇ ಮಂದಾರʼಕ್ಕೂ ಒಳ್ಳೇ ರೆಸ್ಪಾನ್ಸ್‌ ಸಿಕ್ಕಿತ್ತು. ಈ ಸಿನಿಮಾದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಜನೀಶ್‌ ಲೋಕನಾಥ್‌ ಹಾಡುಗಳು ಗಮನ ಸೆಳೆದಿವೆ. ಇದೀಗ ಸಿನಿಮಾ ಟ್ರೈಲರ್‌ ಪಂಚ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ನವೆಂಬರ್‌ 4ಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | PVR Cinemas | ಪಿವಿಆರ್‌ ಸಿನಿಮಾಸ್‌ನಿಂದ 100 ಹೊಸ ಸ್ಕ್ರೀನ್‌, 350 ಕೋಟಿ ರೂ. ಹೂಡಿಕೆ

Exit mobile version