ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ. 27ರ ಬುಧವಾರ ಕನ್ನಡ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ (Bangalore Bandh) ಅವರ ಮುಂದೆ ಪ್ರತಿಭಟನೆ ನಡೆಸಲಿವೆ. ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ಶುಕ್ರವಾರ (ಸೆಪ್ಟೆಂಬರ್ 29) ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ (Vatal Nagaraj) ಅವರು ಕರೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗ ಸಾಥ್ ನೀಡಿದೆ. ನೆಲ, ಜಲ, ಭಾಷೆ ವಿಚಾರವಾಗಿ ಚಿತ್ರರಂಗದವರಿಂದ ಯಾವಾಗಲೂ ಬೆಂಬಲ ಇದ್ದೆ ಇರುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಮಾಧ್ಯಮದೊಂದಿಗೆ ಮಾತನಾಡಿ ʻʻಚಿತ್ರರಂಗದಿಂದ ನೆಲ ಜಲ ಭಾಷೆ ವಿಚಾರವಾಗಿ ಯಾವಾಗಲೂ ಬೆಂಬಲ ಇದ್ದೆ ಇರುತ್ತದೆ. ಶುಕ್ರವಾರದ ಬಂದ್‌ಗೆ ನಮ್ಮ ಬೆಂಬಲ ಇದೆ. ಆದರೆ ನಮ್ಮ ಹೋರಾಟ ಹೇಗೆ ಎಂಬುದರ ಬಗ್ಗೆ ಇವತ್ತು ಸಭೆ ಮಾಡುತ್ತೇವೆ. ಪ್ರತ್ಯೇಕವಾಗಿ ಭಾಗಿಯಾಗಬೇಕಾ..? ಕನ್ನಡ ಸಂಘಟನೆಗಳ ಜತೆಯೇ ಮಾಡಬೇಕಾ ಎವುದನ್ನು ಚರ್ಚೆ ಮಾಡುತ್ತೇವೆ. ಕಲಾವಿದರ ಭಾಗಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ. ಈಗಾಗಲೇ ಶಿವಣ್ಣ ಅವರನ್ನು ಸಂಪರ್ಕ ಮಾಡುತ್ತ ಇದ್ದೇವೆ. ಇವತ್ತಿನ ಸಭೆಯಲ್ಲಿ ಎಲ್ಲಾ ನಿರ್ಧಾರ ಆಗಲಿದೆʼ ʼಎಂದರು.
ಶುಕ್ರವಾರ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಕನ್ನಡದಲ್ಲಿ ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ರಿಲೀಸ್ ಆಗಲಿದೆ. ತಮಿಳಿನಲ್ಲಿ ‘ಚಂದ್ರಮುಖಿ 2’ ರಿಲೀಸ್ ಆಗುತ್ತಿದೆ. ಇದಲ್ಲದೆ, ‘ದಿ ವ್ಯಾಕ್ಸಿನ್ ವಾರ್’ ಕೂಡ ಅದೇ ದಿನ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Bangalore Bandh : ಶುಕ್ರವಾರ ಇಡೀ ಕರ್ನಾಟಕ ಬಂದ್; ಸೆಕ್ಷನ್ 144 ಹಾಕಿದ್ರೆ ಹುಷಾರ್ ಎಂದು ಗುಡುಗಿದ ವಾಟಾಳ್
ಶುಕ್ರವಾರ ಏನಿರುತ್ತೆ ಏನಿರಲ್ಲ: ವಾಟಾಳ್ ಕೊಟ್ಟ ಲಿಸ್ಟ್
- ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್, ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ ಗೂಡ್ಸ್ ವಾಹನ ಸೇವೆ ಇರುವುದಿಲ್ಲ
- ಶುಕ್ರವಾರ ಮಾಲ್, ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್ ಇರಲ್ಲ
- ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ, ಕೆ.ಆರ್ ಮಾರ್ಕೆಟ್ ಬಂದ್
- ಅಂಗಡಿ ಮಳಿಗೆಗಳು, ಕೈಗಾರಿಕೆಗಳು ಬಂದ್
ಕರಾವಳಿ, ಉತ್ತರ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಾವು ಅಷ್ಟಾಗಿ ತಟ್ಟುವುದಿಲ್ಲ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಹೆಚ್ಚು ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.