Site icon Vistara News

Actor Mohanlal: ಮೋಹನ್ ಲಾಲ್ ಅಭಿನಯದ ‘ಬರೋಜ್’ ರಿಲೀಸ್‌ ಡೇಟ್‌ ಅನೌನ್ಸ್‌!

Barroz Mohanlal

ಬೆಂಗಳೂರು: ಮಲಯಾಳಂ ನಟ-ನಿರ್ದೇಶಕ ಮೋಹನ್ ಲಾಲ್ (Actor Mohanlal) ತಮ್ಮ ಮುಂಬರುವ ಚಿತ್ರ `ಬರೋಜ್’ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಿದ್ದಾರೆ. ಹೊಚ್ಚ ಹೊಸ ಪೋಸ್ಟರ್ ಶೇರ್‌ ಮಾಡಿ ʻ “ಬರೋಜ್” 2024ರ ಮಾರ್ಚ್ 28ರಂದು ಚಿತ್ರಮಂದಿರಗಳಿಗೆ ಬರಲಿದೆʼʼಎಂದು ಹಂಚಿಕೊಂಡಿದ್ದಾರೆ. ಪೋಸ್ಟರ್ ಅನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮೋಹನ್‌ಲಾಲ್ ಅವರನ್ನು ಕಮೆಂಟ್‌ ಮೂಲಕ ಹೊಗಳಿದ್ದಾರೆ.

ʻಬರೋಜ್ʼ ಸಿನಿಮಾವನ್ನು ಮೋಹನ್ ಲಾಲ್‌ ಅವರೇ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. ಬರೋಜ್ 2018ರಲ್ಲಿ ಘೋಷಿಸಲಾಯಿತು. ಅಂತಿಮವಾಗಿ ಐದು ವರ್ಷಗಳ ನಂತರ ಸೆಟ್ಟೇರಿದೆ. ಮೈ ಡಿಯರ್ ಕುಟ್ಟಿಚತನ್ ಚಲನಚಿತ್ರ ನಿರ್ಮಾಪಕ ಜಿಜೋ ಪುನ್ನೂಸ್ ಆರಂಭದಲ್ಲಿ ಚಿತ್ರದ ನಿರ್ದೇಶಕ ಎಂದು ಹೇಳಲಾಗಿತ್ತು. 3ಡಿ ಫ್ಯಾಂಟಸಿ ಈ ಸಿನಿಮಾದ ಛಾಯಾಗ್ರಹಣವನ್ನು ಸಂತೋಷ್ ಶಿವನ್ ನಿರ್ವಹಿಸುತ್ತಿದ್ದರೆ, ಲಿಡಿಯನ್ ನಾದಸ್ವರನ್ ಮತ್ತು ಮಾರ್ಕ್ ಕಿಲಿಯನ್ ಸಂಗೀತ ಸಂಯೋಜಿಸಿದ್ದಾರೆ. ಇದನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಬರೋಜ್ ದೊಡ್ಡ ತೆರೆಗೆ ಬರಲಿದೆ.

ಡಂಕಿ, ಸಲಾರ್‌ ಜತೆ ಮೋಹನ್‌ ಲಾಲ್‌ ಪೈಪೋಟಿ

ಮೋಹನ್ ಲಾಲ್ ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

ಇದನ್ನೂ ಓದಿ: Actor Mohanlal: ಗಣೇಶ ಚತುರ್ಥಿಯಂದು ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಮೋಹನ್‌ಲಾಲ್‌!

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಮೋಹನ್‌ ಲಾಲ್‌

ಮೋಹನ್‌ಲಾಲ್‌ ಅಭಿನಯದ ‘ಮಲೈ ಕೋಟ್ಟ ವಾಲಿಬನ್’ (Malaikottai Vaaliban) ರಿಲೀಸ್ ದಿನಾಂಕ ಘೋಷಣೆ ಆಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ 2024ರ ಜನವರಿ 25ರಂದು ಸಿನಿಮಾ ರಿಲೀಸ್ ಆಗಲಿದೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Exit mobile version