Site icon Vistara News

BBK Season 10: 4ನೇ ಸ್ಪರ್ಧಿಯಾಗಿ ಆಯ್ಕೆಯಾದ ವಿನಯ್‌ ಗೌಡ, 5ನೇ ಸ್ಪರ್ಧಿ ಸಂತೋಷ್

thukali santhu

thukali santhu

ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ಕಲರ್‌ಫುಲ್‌ ಆರಂಭ ಸಿಕ್ಕಿದೆ. ಈ ಬಾರಿ ವೋಟಿಂಗ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿರುವುದು ವಿಶೇಷ. ನಾಲ್ಕನೇ ಪ್ರಬಲ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟವರು ವಿನಯ್‌ ಗೌಡ.‌ ಇನ್ನು 5ನೇ ಸ್ಪರ್ಧಿಯಾಗಿ ಅವಕಾಶ ಸಿಕ್ಕಿದ್ದು ಸಂತೋಷ್ ಅವರಿಗೆ.

ವಿನಯ್‌ ಗೌಡ ಪರಿಚಯ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸುಮಾರು 2 ವರ್ಷಗಳ ಕಾಲ ಪ್ರಸಾರವಾದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ವಿನಯ್‌ ಗೌಡ ಗಮನ ಸೆಳೆದರು. ಬಳಿಕ ʼಉಘೇ ಉಘೇ ಮಾದೇವ’, ‘ಜೈ ಹನುಮಾನ್’ ʼಯಡಿಯೂರು ಸಿದ್ಧಲಿಂಗೇಶ್ವರ’ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ. ‘‘ಬಿಗ್‌ಬಾಸ್‌ವರೆಗೂ ಒಂದು ಜರ್ನಿ ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ’’ ಅನ್ನೋದು ಅವರ ಮಾತು. ದೇಹದಂಡನೆಯನ್ನು ಪ್ರೀತಿಸುವ ವಿನಯ್‌, ಜಿಮ್‌ನಲ್ಲಿ ಮಾತ್ರವೇ ನನ್ನದು ‘ಮೀ ಟೈಮ್’ ಅನ್ನುತ್ತಾರೆ. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್‌ ಅವರಿಗೆ ಪತ್ನಿಯೇ ಸರ್ವಸ್ವ ಹದಿನಾಲ್ಕು ವರ್ಷದ ಮುದ್ದು ರಿಷಭ್‌ ಎಂದರೆ ಪಂಚಪ್ರಾಣ.

ಕಾಮಿಡಿ ಕಿಲಾಡಿ ಸಂತೋಷ್ ಪರಿಚಯ

5 ಸ್ಪರ್ಧಿಯಾಗಿ ಆಯ್ಕೆಯಾದ ಸಂತೋಷ್ ಪತ್ನಿ ಜತೆ ʼಜಯ ಜಯ ರಾಕೆಟ್‌ʼ ಹಾಡಿಗೆ ಹೆಜ್ಜೆ ಹಾಕುತ್ತಾ ಸ್ಟೇಜ್‌ಗೆ ಎಂಟ್ರಿ ಕೊಟ್ಟರು. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು. ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲರ್ಸ್‌​ ಕನ್ನಡ ವಾಹಿನಿ ಮಜಾಭಾರತ ಹಾಗೂ ಜೀ ಟಿವಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಸಂತೋಷ್ ಮನೆ ಮಾತಾಗಿದ್ದಾರೆ. ʼತುಕಾಲಿ ಸಂತುʼ ಎಂದೇ ಅವರು ಜನಪ್ರಿಯ. ಹೀಗೆ ಕರೆಸಿಕೊಳ್ಳಲು ಅವರಿಗೆ ಹೆಮ್ಮೆ ಇದೆಯಂತೆ. ಅವರು 93% ವೋಟ್‌ ಪಡೆದು ಆಯ್ಕೆಯಾದರು.

ಅನ್ಸೀನ್ಕಥೆಗಳು

ಬಿಗ್‌ಬಾಸ್‌ ಮನೆಯೆಂದರೇ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು ನೀವು ಜಿಯೋ ಸಿನಿಮಾದ 24 ಗಂಟೆ ಲೈವ್‌ನಲ್ಲಿ ಉಚಿತವಾಗಿ ನೋಡಬಹುದು. ಇಂಥಹ ರೋಚಕ ಕಥೆಗಳನ್ನು ‘ಅನ್‌ಸೀನ್‌ ಕಥೆಗಳು’ ನಿಮಗೆ ಕಟ್ಟಿಕೊಡುತ್ತದೆ.

ಲೈವ್ ಶಾರ್ಟ್ಸ್

ಬಿಗ್‌ಬಾಸ್‌ ಮನೆಯೊಳಗೆ ಅವತ್ತು ನಡೆದ ಮುಖ್ಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್‌’. ಲೈವ್‌ನಲ್ಲಿ ಮಿಸ್‌ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್‌ ಮೂಲಕ ಆಸ್ವಾದಿಸಬಹುದು.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ನಮ್ರತಾ ಗೌಡ

ಹೈಪ್ ಚಾಟ್

ಇದು ಬಿಗ್‌ಬಾಸ್‌ ಮನೆಯೊಳಗಿನ ಘಟನಾವಳಿಗೆಜಿಯೋ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಇಲ್ಲಿ ಪ್ರೇಕ್ಷಕರು ಚಾಟ್‌ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು. ಬಿಗ್‌ಬಾಸ್‌ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.

Exit mobile version