ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಕಲರ್‌ಫುಲ್ ಆರಂಭ ಸಿಕ್ಕಿದೆ. ಪ್ರೋಮೋ ಮೂಲಕವೇ ಆರಂಭದಲ್ಲಿ ಕುತೂಹಲ ಮೂಡಿಸಿದ್ದ ಈ ಬಾರಿಯ ಬಿಗ್‌ಬಾಸ್ ನಿರೀಕ್ಷೆಯಂತೆಯೇ ಹಲವು ಟ್ವಿಸ್ಟ್, ಟರ್ನ್‌ಗಳೊಂದಿಗೆ ಆರಂಭವಾಗಿದೆ. ಈ ಬಾರಿ 11ನೇ ಸ್ಪರ್ಧಿಯಾಗಿ ಮೈಖಲ್ ಅಜಯ್ ಮನೆಯೊಳಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಯಾರು ಈ ಮೈಖಲ್ ಅಜಯ್?
ನೈಜೇರಿಯಾ ಮೂಲದ ಮೈಖಲ್ ಅಜಯ್ ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆಯುತ್ತಾರೆ. ಅವರಿಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿರುವ ಅಜಯ್ ಸ್ನಾನಕ್ಕೆ ನಿಂತರೆ ತಲೆಕೂದಲು ನೆನೆಯಲಿಕ್ಕೆ ಅರ್ಧಗಂಟೆ ಬೇಕಂತೆ! ‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್, ‘ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು’ ಎನ್ನುತ್ತಾರೆ. ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ‘ಕನ್ನಡ ಇಂಡಸ್ಟ್ರಿಯಲ್ಲಿ ವಿಲನ್ ರೋಲ್ ಸಿಕ್ತು ಅಂದ್ರೆ ಚೆನ್ನಾಗಿರತ್ತೆ’ ಎನ್ನುವ ಅಜಯ್ ಬದುಕನ್ನು ಎಂದಿಗೂ ದೂಷಿಸುವುದಿಲ್ಲ ಎನ್ನುತ್ತಾರೆ. ‘ಹೀರೊ ನೋಡಿದ್ರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ; ವಿಲನ್ ರೋಲ್ ರಿಯಲಿಸ್ಟಿಕ್ ಆಗಿರುತ್ತದೆ’ ಎಂಬುದು ಅಜಯ್ ಮಾತು.
ವಿದೇಶದಲ್ಲಿದ್ದರೂ ಕನ್ನಡ ಮಾತನಾಡುತ್ತಿರವುದು ಅಜಯ್ ವಿಶೇಷತೆ. ನಟಿ ಶ್ರುತಿ ಕೂಡ ಇದನ್ನೇ ಹೇಳಿದ್ದಾರೆ. ‘ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ’ ಎಂಬ ಅಜಯ್ ಮನವಿಗೆ 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ವಿಶೇಷತೆ
ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.
ಬಿಗ್ ನ್ಯೂಸ್
ಬಿಗ್‌ಬಾಸ್ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್ ನ್ಯೂಸ್’ ನ್ಯೂಸ್ ಬುಲೆಟಿನ್ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.
ಅನ್‌ಸೀನ್ ಕಥೆಗಳು
ಬಿಗ್‌ಬಾಸ್ ಮನೆಯೆಂದರೇ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು ನೀವು ಜಿಯೋ ಸಿನಿಮಾದ 24 ಗಂಟೆ ಲೈವ್‌ನಲ್ಲಿ ಉಚಿತವಾಗಿ ನೋಡಬಹುದು. ಇಂಥಹ ರೋಚಕ ಕಥೆಗಳನ್ನು ‘ಅನ್‌ಸೀನ್ ಕಥೆಗಳು’ ನಿಮಗೆ ಕಟ್ಟಿಕೊಡುತ್ತದೆ.
ಲೈವ್ ಶಾರ್ಟ್ಸ್
ಬಿಗ್‌ಬಾಸ್ ಮನೆಯೊಳಗೆ ಅವತ್ತು ನಡೆದ ಮುಖ್ಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್’. ಲೈವ್‌ನಲ್ಲಿ ಮಿಸ್ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್ ಮೂಲಕ ಆಸ್ವಾದಿಸಬಹುದು.
ಹೈಪ್ ಚಾಟ್
ಇದು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗೆಜಿಯೋ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಇಲ್ಲಿ ಪ್ರೇಕ್ಷಕರು ಚಾಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.
ಬಿಗ್‌ಬಾಸ್ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.
ಇದನ್ನೂ ಓದಿ: BBK Season 10: ಜಿಯೋ ಸಿನಿಮಾದಲ್ಲಿ 24ಗಂಟೆ ಬಿಗ್ ಬಾಸ್ ಫ್ರೀಯಾಗಿ ನೋಡಿ; ವಿಶೇಷತೆಗಳೇನು?