ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10ರ (BBK Season 10) 9ನೇ ಸ್ಪರ್ಧಿಯಾಗಿ ಭಾಗ್ಯಶ್ರೀ ಹಾಗೂ 10ನೇ ಸ್ಪರ್ಧಿ ಪತ್ರಕರ್ತ ಗೌರೀಶ್ ಅಕ್ಕಿ ಅವರು ಮನೆಯೊಳಗೆ ಕಾಲಿಟ್ಟಿದ್ದಾರೆ.
ಭಾಗ್ಯಶ್ರೀ
ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿರುವ ಭಾಗ್ಯಶ್ರೀ ಇದೀಗ ಬಿಗ್‌ಬಾಸ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ‘ಬದುಕು’, ‘ಲಕ್ಷಣ’ದಂಥ ಧಾರಾವಾಹಿಗಳ ಮೂಲಕ ಇವರು ಜನಪ್ರಿಯ. ‘ಬದುಕೇ ನನಗೆ ತುಂಬ ಕಲಿಸಿದೆ. ಪ್ರಿಪೇರ್ ಆಗಿ ಬದುಕುವುದು ನನಗೆ ಗೊತ್ತಿಲ್ಲ. ಪರಿಸ್ಥಿತಿ ಹೇಗೆಬರುತ್ತದೆಯೋ ಹಾಗೆ ಇರುತ್ತೇನೆ’ ಎನ್ನುವ ಭಾಗ್ಯಶ್ರೀ ಅವರಿಗೆ ವೋಟಿಂಗ್ ಮನವಿಗೆ ಜನರು ಸ್ಪಂದಿಸಿದ್ದು 81% ಮಂದಿ. ಹೀಗಾಗಿ ಭಾಗ್ಯಶ್ರೀ ಆತ್ಮವಿಶ್ವಾಸದಿಂದಲೇ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ಗೌರೀಶ್ ಅಕ್ಕಿ
ಕೊಪ್ಪಳ ಜಿಲ್ಲೆಯ ಮುಧೋಳ ಮೂಲದ ಗೌರೀಶ್ ಅಕ್ಕಿ ಮೊದಲು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿಕೊಟ್ಟರು. ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ಆನಂತರ ಡೈರೆಕ್ಟರ್ ಕ್ಯಾಪ್ ತೊಟ್ಟರು. 2016ರಲ್ಲಿ ತೆರೆಗೆ ಬಂದ ‘ಸಿನಿಮಾ ಮೈ ಡಾರ್ಲಿಂಗ್’ ಚಿತ್ರವನ್ನ ಗೌರೀಶ್ ಅಕ್ಕಿ ನಿರ್ದೇಶಿಸಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ‘ಚಾರ್ಮಿನಾರ್’, ‘ಲೂಸಿಯಾ’, ‘ಸಿಪಾಯಿ’, ‘3000’ ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮದೇ ಯೂಟ್ಯೂಬ್ ವಾಹಿನಿ ಮೂಲಕ ವಿಶೇಷ ವಿಡಿಯೊಗಳನ್ನ ಗೌರೀಶ್ ಅಕ್ಕಿ ತಯಾರಿಸುತ್ತಿದ್ದಾರೆ.
ಬಿಗ್‌ಬಾಸ್ ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿದ್ದಾರೆ ಗೌರೀಶ ಅಕ್ಕಿ. ‘ಪಬ್ಲಿಕ್ ಲೈಫ್ ಮತ್ತು ಪರ್ಸನಲ್ ಲೈಫ್‌ಗಳ ನಡುವಿನ ಗೆರೆ ಬ್ಲರ್ ಆಗುವುದು ಬಿಗ್‌ಬಾಸ್ ಮನೆಯಲ್ಲಿ. ನನ್ನೊಳಗೆ ನಿಜವಾಗಲೂ ಹೇಗಿದ್ದೇನೋ ಅದು ಬಿಗ್‌ಬಾಸ್ ಮನೆಯಲ್ಲಿ ಹೊರಗೆ ಬರುತ್ತದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲಿಕ್ಕೆ ಮತ್ತು ಜನರನ್ನು ಅರ್ಥಮಾಡಿಕೊಳ್ಳಲಿಕ್ಕೆ ಬಿಗ್‌ಬಾಸ್ ಮನೆಗಿಂತ ಒಳ್ಳೆಯ ವೇದಿಕೆ ಯಾವುದಿದೆ?’ ಎಂದು ಗೌರೀಶ ಅಕ್ಕಿ, ಪ್ರಶ್ನಿಸುವ ಮೂಲಕ ಪ್ರಬಲ ಸ್ಪರ್ಧಿ ಎಂದು ಸಾರಿದ್ದಾರೆ. ‘ಒಂದು ತಿಂಗಳು ಮನೆಯೊಳಗಿದ್ದು ಬಿಗ್‌ಬಾಸ್ ಶೋ ದ ಎಸೆನ್ಸ್ ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಆಸೆಯನ್ನು ಹೊತ್ತುಬಂದಿರುವ ಗೌರಿಶ ಅಕ್ಕಿ ಅವರಿಗೆ ಜನರು 82% ವೋಟ್ ಮಾಡಿದ್ದಾರೆ.
ಬಿಗ್‌ಬಾಸ್ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.
ಇದನ್ನೂ ಓದಿ: BBK Season 10: ಬಿಗ್‌ಬಾಸ್ ಮನೆಗೆ ಬಂದ ನಟಿ ಸಿರಿ, ಸ್ನೇಕ್ ಶ್ಯಾಮ್