ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ (BBK Season 10) ಅದ್ಧೂರಿ ಆರಂಭ ದೊರೆತಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ಬಹು ನಿರೀಕ್ಷಿತ ಶೋಗೆ ಮೊದಲ ಸ್ಪರ್ಧಿಯಾಗಿ ನಮ್ರತಾ ಗೌಡ ಆಗಮಿಸಿದ್ದಾರೆ. ಸ್ಟನ್ನಿಂಗ್ ಡ್ಯಾನ್ಸ್ ಮೂಲಕ ಅವರು ಎಂಟ್ರಿ ಕೊಟ್ಟಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾಗಿಣಿ 2’ ಧಾರಾವಾಹಿ ಮೂಲಕ ನಮ್ರತಾ ಗೌಡ ಜನಪ್ರಿಯರಾಗಿದ್ದಾರೆ. ‘ಪುಟ್ಟಗೌರಿ’ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು. ನಮ್ರತಾ ಗೌಡ ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಕೆಲವು ದಿನಗಳ ಹಿಂದೆ ಹೊಸ ಮನೆಗೆ ಕಾಲಿಟ್ಟಿದ್ದರು. ಇವರ ನೂತನ ಗೃಹ ಪ್ರವೇಶಕ್ಕೆ ನಟಿ ನೇಹಾ ಗೌಡ, ಅನುಪಮಾ ಗೌಡ, ಕವಿತಾ ಗೌಡ, ಕಿಶನ್ ಬಿಳಗಲಿ, ಯಶಸ್ವಿನಿ ಕೆ. ಸ್ವಾಮಿ ಮುಂತಾದವರು ಆಗಮಿಸಿದ್ದರು. ನಮ್ರತಾ ಗೌಡ ಸದ್ಯ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೆಲ ದಿನಗಳ ಹಿಂದೆ ಐಶ್ವರ್ಯಾ ಸಿಂಧೋಗಿ ಜೊತೆಗೆ ಬಾಲಿ ಟ್ರಿಪ್ ಮಾಡಿದ್ದರು. ಆ ವೇಳೆ ಅವರು ಬಿಕಿನಿ ಧರಿಸಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಭಾರೀ ಸಂಚಲನ ಮೂಡಿಸಿತ್ತು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.
ವಿಶೇಷತೆ
ಈ ಬಾರಿ ಬೆಂಗಳೂರಿನ ಹೊರವಲಯದಲ್ಲಿ ಹೊಸದಾದ ಬಿಗ್ ಬಾಸ್ ಮನೆ ನಿರ್ಮಾಣಗೊಂಡಿದೆ. ಒಟ್ಟು 12 ಸಾವಿರ ಚದರಡಿಗಳ ಈ ಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡಬಹುದು, ಟಾಸ್ಕ್ ಮಾಡಬಹುದು. ಜಿಯೋ ಸಿನಿಮಾದಲ್ಲಿ 24×7 ಲೈವ್ ಸಿಗಲಿದೆ. ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ‘ಮೀಮ್ ದ ಮೊಮೆಂಟ್’, ‘ವಾಚ್ ಆಂಡ್ ವಿನ್’, ‘ಹೈಪ್ ಚಾಟ್’, ‘ವಿಡಿಯೊ ವಿಚಾರ್’ಗಳ ಮೂಲಕ ಬಿಗ್ ಬಾಸ್ ಪ್ರಿಯರು ಮನೆಯೊಳಗಿನವರ ಜತೆ ಸಂವಾದ ನಡೆಸಬಹುದು. ಸ್ಪರ್ಧಿಗಳನ್ನು ವೋಟಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳುವುದು ಇನ್ನೊಂದು ವಿಶೇಷ.
ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.