Site icon Vistara News

BBK Season 10: ಸ್ನೇಹಿತ್‌ ಗೌಡ ಎರಡನೇ ಮತ್ತು ರ‍್ಯಾಪರ್ ಇಶಾನಿ ಮೂರನೇ ಸ್ಪರ್ಧಿ

ishani 1

ishani 1

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ (BBK Season 10) ಎರಡನೇ ಸ್ಪರ್ಧಿಯಾಗಿ ಸ್ನೇಹಿತ್‌ ಗೌಡ ಮತ್ತು ಮೂರನೇ ಸ್ಪರ್ಧಿಯಾಗಿ ರ‍್ಯಾಪರ್ ಇಶಾನಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸ್ನೇಹಿತ್‌ ಗೌಡ

ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಸ್ನೇಹಿತ್‌ ಗೌಡ ಮನೆ ಮಾತಾದರು. ಹಲವು ಧಾರಾವಾಹಿಗಳಿಗೆ ಅಡಿಷನ್‌ ನೀಡಿ ಕೊನೆಗೆ ಆಯ್ಕೆಯಾದೆ ಎಂದು ಅವರು ಸುದೀಪ್‌ ಜತೆ ಹೇಳಿಕೊಂಡರು. ಸುದೀಪ್‌ ಅವರನ್ನೂ ಒಮ್ಮೆಯಾದರೂ ಭೇಟಿಯಾಗಬೇಕು ಎನ್ನುವುದು ಅವರ ಕನಸಾಗಿತ್ತಂತೆ. ಫಿಟ್ನೆಸ್‌ಗೆ ಬಹಳ ಪ್ರಾಧಾನ್ಯತೆ ನೀಡುವ ಸ್ನೇಹಿತ್‌ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಸಲುವಾಗಿ ಈ ಶೋಗೆ ಬಂದಿದ್ದೇನೆ ಎಂದಿದ್ದಾರೆ. ಮನೆ ಒಳಗೆ ಹೋಗುವಾಗ ಅವರು ಸ್ವಲ್ಪ ಭಾವುಕರಾಗಿದ್ದರು.

ರ‍್ಯಾಪರ್ ಇಶಾನಿ

ರ‍್ಯಾಪರ್ ಆಗಿರುವಂತಹ ಇಶಾನಿ ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಮೂಲತಃ ಮೈಸೂರಿನವರಾಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಈಗಾಗಲೇ 17 ಇಂಗ್ಲೀಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಈಶಾನಿ ಅವರು ಆಲ್ಬಗಳನ್ನು ಹಾಡಿ ಹೆಜ್ಜೆ ಹಾಕಿದ್ದಾರೆ.‌ ಅವುಗಳಲ್ಲಿ ರೈಟರ್‌, ಊರ್ಮಿಳಾ, ಫ್ರೀಡಮ್‌. ವಿದೇಶಗಳಲ್ಲಿದ್ದರೂ ಅವರು ಕನ್ನಡ ಮಾತನಾಡುತ್ತಿರುವುದು ವಿಶೇಷ. ಬಿಗ್‌ಬಾಸ್‌ ಮನೆ ಅವರ ಕನಸಾಗಿತ್ತಂತೆ. ಮನೆ ಒಳಗೆ ಹೋಗುವಾಗ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು.

ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.

ಬಿಗ್ನ್ಯೂಸ್

ಬಿಗ್‌ಬಾಸ್‌ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್‌ ನ್ಯೂಸ್‌’ ನ್ಯೂಸ್‌ ಬುಲೆಟಿನ್‌ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.

Exit mobile version