Site icon Vistara News

BBK SEASON 10: ಶಾರ್ಟ್‌ ಟೆಂಪರ್ ನನ್ನ ವೀಕ್‌ನೆಸ್‌; ಆದ್ರೂ ಗೆದ್ದೆ ಗೆಲ್ತೀನಿ ಎಂದ ಪವಿ ಪೂವಪ್ಪ

pavi

pavi

ಬೆಂಗಳೂರು: ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪವಿ ಪೂವಪ್ಪ, ಬಿಗ್‌ ಬಾಸ್‌ (BBK SEASON 10) ಮನೆಯೊಳಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು, ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೂ ಮೊದಲು ಅವರು JioCinemaಗೆ ನೀಡಿರುವ ಸಂದರ್ಶನದಲ್ಲಿ ಏನೆಲ್ಲ ಮಾತನಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.

ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ತುಂಬ ಖುಷಿಯ ವಿಷಯ. ಭಯ ಇಲ್ಲ. ಬಿಗ್‌ಬಾಸ್ ಮನೆಯೊಳಗೆ ಹೋದಮೇಲೇ ಗೊತ್ತಾಗತ್ತೆ ಏನು ಎತ್ತ ಅಂತ ಎಂದು ಪವಿ ಪೂವಪ್ಪ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.

ಮನೆಯಲ್ಲಿ ಅಮ್ಮ ಅಣ್ಣನಿಗೆ ಎಲ್ಲ ತುಂಬ ಖುಷಿಯಾಯ್ತು. ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಸ್ವಭಾವ, ವರ್ತನೆಯನ್ನು ಇಡೀ ಕರ್ನಾಟಕದ ಜನರು ನೋಡಬಹುದು. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ ಎಂದು ಪವಿ ಪೂವಪ್ಪ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಶಾರ್ಟ್‌ ಟೆಂಪರ್ಡ್‌

ನಾನು ಶಾರ್ಟ್‌ ಟೆಂಪರ್ಡ್‌. ಆದ್ರೆ ಕೋಪ ಸಂದರ್ಭದ ಮೇಲೆ ಹೋಗತ್ತೆ. ಸುಮ್ ಸುಮ್ನೆ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಕೋಪ ಬರಲ್ಲ. ಅದು ಬಿಟ್ರೆ ನಾನು ಖುಷಿ ಖುಷಿಯಾಗಿರುತ್ತೇನೆ. ಕೋಪ ಬಂದ್ರೆ ಕಷ್ಟ ಅಷ್ಟೆ. ನಾನು ತುಂಬ ಮಿಸ್ ಮಾಡಿಕೊಳ್ಳೋದು ನನ್ನ ನಾಯಿಗಳನ್ನು. ಅವುಗಳು ನನ್ನ ಜಗತ್ತು. ನನ್ನ ಬಳಿ ಹನ್ನೆರಡು ನಾಯಿಗಳಿವೆ. ಅವುಗಳನ್ನು ಮಿಸ್ ಮಾಡ್ಕೋತೀನಿ. ವೈಲ್ಡ್‌ ಕಾರ್ಡ್‌ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ಆದ್ರೆ ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ. ಅಲ್ಲಿ ಹೋದ ಮೇಲೆ ಯಾರು ಯಾವ ಥರ ಬಿಹೇವ್ ಮಾಡ್ತಾರೆ ಅನ್ನೋದ್ರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್ ಬಾಸ್ ಮನೆಗೆ ಮಾಡೆಲ್‌ ಪವಿ ಪೂವಪ್ಪ, ಕ್ರಿಕೆಟಿಗ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ!

ನಾನು ಫಿಸಿಕಲಿ ಸ್ಟ್ರಾಂಗ್ ಇದೀನಿ. ಅದು ನನ್ನ ಸ್ಟ್ರೆಂಥ್. ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್‌ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್‌ ಅಂತ ಹೇಳಬಹುದು. ಸದ್ಯಕ್ಕೆ ನನ್ನ ಫೆವರೇಟ್‌ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದ್ರೆ ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜತೆಗೆ. ಯಾಕಂದ್ರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ. ವೈಲ್ಡ್‌ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್‌ ಕಾರ್ಡ್ ಮೂಲಕ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದೀನಿ ಎಂದು ಪವಿ ಪೂವಪ್ಪ ಛಲದಿಂದ ಹೇಳಿದ್ದಾರೆ.

Exit mobile version