Site icon Vistara News

BBK Season 10: ಮನೆ ಒಳಗೆ ಪ್ರವೇಶಿಸಿದ ‘ಮಿಸ್​ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ನೀತು

neethu

neethu

ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ (BBK Season 10) ಕಲರ್‌ಫುಲ್‌ ಆರಂಭ ಸಿಕ್ಕಿದೆ. ವೋಟಿಂಗ್‌ ಮೂಲಕ ಸರ್ಧಿಗಳನ್ನು ಆಯ್ಕೆ ಮಾಡುವ ಈ ಬಾರಿ 6ನೇ ಸ್ಪರ್ಧಿಯಾಗಿ ಕಾಲಿಟ್ಟವರು ಟ್ರಾನ್ಸ್ ಜೆಂಡರ್‌ ನೀತು ವನಜಾಕ್ಷಿ.

ನೀತು ವನಜಾಕ್ಷಿ

ʼಮಿಸ್​ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ಪಟ್ಟ ಗೆದ್ದ ನೀತು ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್‌. ‘ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು. ನೀತು ವನಜಾಕ್ಷಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರದಲ್ಲೂ ಅಭಿನಯಿಸಿದ್ದಾರೆ. ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ʻಗಮ ಗಮ’ ಎನ್ನುವ ಹೊಟೇಲ್ ಉದ್ಯಮಿಯೂ ಆಗಿದ್ದಾರೆ. ಮಾಡಲ್‌ ಆಗಿಯೂ ಗುರುತಿಸಿಕೊಂಡಿದ್ದಾರೆ.

‘ಯಾರಮ್ಮಾ ಇವಳು ಚೆಲುವೆ…’ ಎಂಬ ಹಾಡಿನೊಂದಿಗೆ ಬಿಗ್‌ಬಾಸ್‌ ವೇದಿಕೆಯ ಮೇಲೆ ಕಾಣಿಸಿಕೊಂಡ ನೀತು ವನಜಾಕ್ಷಿ, ಟ್ರಾನ್ಸ್‌ಜೆಂಡರ್‌ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ‘ತನ್ನ ಬದುಕಿನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಹಾನಗರಕ್ಕೆ ಬಂದ ಮಂಜು, ನೀತು ವನಜಾಕ್ಷಿಯಾಗಿದ್ದು ಒಂದು ಸಾಧನೆಯ ಕಥೆಯೇ ಸರಿ. ತಾನೊಬ್ಬಳು ಟ್ರಾನ್ಸ್‌ಜೆಂಡರ್‌ ಎಂದು ಗುರುತಿಸಿಕೊಂಡ ಅವರಿಗೆ ತಾಯಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾದರು. ತಮ್ಮ ಹೆಸರಿನ ಜತೆಗೆ ಇರುವ ನೀತು ಅವರ ತಾಯಿ ವನಜಾಕ್ಷಿ ಬದುಕಿನ ಜೊತೆಗೂ ಇದ್ದಾರೆ. ಚಿತ್ರಕಲೆಯ ಅವರ ಆಸಕ್ತಿ. ತನ್ನ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎಂದು ಟ್ಯಾಟೋ ಆರ್ಟಿಸ್ಟ್ ಆಗಿ ಬದುಕಿನ ಸುಂದರ ಚಿತ್ರವನ್ನು ತಾವೇ ಬಿಡಿಸಿಕೊಳ್ಳಲು ಆರಂಭಿಸಿದ್ದಾರೆ. ಹೂ ಕಟ್ಟುವ ಕುಟುಂಬದಿಂದ ಬಂದಿರುವ ನೀತು ಅವರಿಗೆ ಮನೆಯೇ ಮೊದಲ ಪಾಠಶಾಲೆ. ತನ್ನ ಸಮುದಾಯವನ್ನು ಸುಧಾರಿಸಬೇಕು ಎಂಬ ಸದುದ್ದೇಶವನ್ನೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ʼʼಜನರ ಮಧ್ಯ ಇದ್ದು ಗೆದ್ದು ಬಂದಿರುವ ನನಗೆ ಬಿಗ್‌ಬಾಸ್‌ ಮನೆಯಲ್ಲಿ ಗೆಲ್ಲುವುದು ಕಷ್ಟವಲ್ಲʼʼ ಎಂಬ ವಿಶ್ವಾಸದಲ್ಲಿರುವ ನೀತು ಅವರಿಗೆ ಪ್ರೇಕ್ಷಕಪ್ರಭುಗಳು 86% ವೋಟ್‌ ನೀಡಿ ಮನೆಯೊಳಗೆ ಕಳಿಸಿದ್ದಾರೆ.

ಗ್ರ್ಯಾಂಡ್‌ ಪ್ರೀಮಿಯರ್‌ ನಂತರವೂ ಬಿಗ್‌ಬಾಸ್‌ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.

Exit mobile version