Site icon Vistara News

BBK Season 10: ಬಿಗ್‌ಬಾಸ್‌ಗೆ ಕಾಡಿತು ಹೆಸರಿನ ಸಮಸ್ಯೆ! ಏನಿದು?

bigg boss

bigg boss

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ (BBK Season 10) ಅದ್ಧೂರಿ ಆರಂಭ ಸಿಕ್ಕಿದೆ. ಈ ಬಾರಿ ವೋಟಿಂಗ್‌ ಮೂಲಕ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದಾರೆ. ಹೀಗೆ 11 ಮಂದಿ ನೇರವಾಗಿ ಆಯ್ಕೆಯಾದರೆ 7 ಮಂದಿ ಮನೆಯೊಳಗೆ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈ ವಾರದ ಅವರ ಪರ್ಫಾರ್ಮೆನ್ಸ್‌ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಹೆಸರಿನ ಸಮಸ್ಯೆ

ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಎದುರಾದ ಮುಖ್ಯ ಸಮಸ್ಯೆ ಎಂದರೆ ಅದು ಹೆಸರಿನದ್ದು. ಅರೇ, ಅದು ಹೇಗೆ ಅಂದಿರಾ? ಈ ಬಾರಿ ಒಂದೇ ಹೆಸರಿನ ಇಬ್ಬರು ಮನೆಯೊಳಗೆ ಇದ್ದಾರೆ. ಹೌದು ಈ ಬಾರಿ ಇಬ್ಬರು ಸಂತೋಷ್‌ ಮನೆಯೊಳಗೆ ಪ್ರವೇಶಿಸಿದ್ದಾರೆ. ಒಬ್ಬರು ತುಕಾಲಿ ಸಂತೋಷ್, ಇನ್ನೊಬ್ಬರು ಹಳ್ಳಿಕಾರ್ ಬ್ರೀಡ್‌ನ ವರ್ತೂರು ಸಂತೋಷ್. ಹೀಗಾಗಿ ಬಿಗ್‌ಬಾಸ್‌ಗೆ ಗೊಂದಲ ಆರಂಭವಾಗಿದೆ. ʼʼಈ ಮನೆಯಲ್ಲಿ ಯಾವತ್ತೂ ಕಂಡುಬರದ ಸಮಸ್ಯೆ ಎದುರಾಗಿದೆ. ಈ ಮನೆಯಲ್ಲಿ ಇಬ್ಬರು ಸಂತೋಷ್ ಕುಮಾರ್ ಇದ್ದಾರೆ. ಆದ್ದರಿಂದ ವೀಕ್ಷಕರಿಗೆ ಗೊಂದಲವಾಗುತ್ತಿದೆ. ನಿಮ್ಮನ್ನ ಬಿಗ್ ಬಾಸ್ ಏನಂತ ಕರಿಬೇಕು?ʼʼ ಎಂಬ ಪ್ರಶ್ನೆ ಬಿಗ್‌ಬಾಸ್‌ ಕಡೆಯಿಂದಲೇ ಕೇಳಿಬಂತು. 

ಪರಿಹಾರವೇನು?

ಹಳ್ಳಿಕಾರ್ ಬ್ರೀಡ್‌ನ ಸಂತೋಷ್ ಕುಮಾರ್ʼ, ”ನನ್ನನ್ನು ವರ್ತೂರ್ ಸಂತೋಷ್ ಎಂದು ಕರೆಯಬಹುದು’ʼ ಎಂದರು. ಹಾಸ್ಯ ನಟ ಸಂತೋಷ್ ಕುಮಾರ್, ʼʼನನ್ನನ್ನು ತುಕಾಲಿ ಸ್ಟಾರ್ ಸಂತು ಕರೆಯಿರಿʼʼ ಎಂದು ಹೇಳಿದರು. ಬಳಿಕ ವರ್ತೂರ್ ಸಂತೋಷ್ ಅವರಿಗೆ ‘ಸಂತೋಷ್ ಕುಮಾರ್’ ಎಂದು ಕರೆಯುವುದಾಗಿ ತಿಳಿಸಿದ ಬಿಗ್‌ಬಾಸ್‌, ಹಾಸ್ಯನಟನನ್ನು ತುಕಾಲಿ ಎಂದು ಕರೆಯಲು ಒಪ್ಪಲಿಲ್ಲ. ಬೇಕಿದ್ದರೆ ನಿಮ್ಮನ್ನು ಗೌರವಯುತವಾಗಿ ‘ತುಕಾಲಿ ಅವರೇ’ ಎಂದು ಕರೆಯುತ್ತೇವೆ ಎಂದು ಬಿಗ್‌ಬಾಸ್‌ ತಿಳಿಸಿದರು. ಆಗ ಮನೆ ನಗೆಗಡಲಲ್ಲಿ ತೇಲಿತು.

ಮನೆಯೊಳಗೆ ಬಂದ ಶಾಸಕ ಪ್ರದೀಪ್‌ ಈಶ್ವರ್‌

ಮೊದಲ ದಿನವೇ ಮನೆಯೊಳಗೆ ಇದ್ದವರಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಖಡಕ್‌ ಡೈಲಾಗ್‌ ಕೂಡ ಹೇಳಿದ್ದಾರೆ. ʻʻನಾನು ನಿನ್ನೆಯೇ ಬಿಗ್‌ಬಾಸ್‌ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್‌ ಇಲ್ಲʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK Season 10: ಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲ ಎಂದ ಪ್ರದೀಪ್‌ ಈಶ್ವರ್‌; ಡೈಲಾಗ್‌ಬಾಜಿ ಶುರು!

ಡ್ರೋನ್‌ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈ ಪೈಕಿ ಯಾರು ಆಯ್ಕೆಯಾಗುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ. ಸೆಕೆಂಡ್ ಚಾನ್ಸ್‌ನಲ್ಲಿ ಆಡುವ ಆಟದ ಮೇಲೆ ಯಾರು ಉಳಿದುಕೊಳ್ಳಬೇಕು, ಯಾರು ಉಳಿದುಕೊಳ್ಳಬಾರದು ಎಂಬುದನ್ನು ಬಿಗ್​ಬಾಸ್ ನಿರ್ಣಯ ಮಾಡುತ್ತಾರೆ. ಹಾಗಾಗಿ ಈ ಒಂದು ವಾರ ಚೆನ್ನಾಗಿ ಆಟ ಆಡಿ ಎಂದು ಸುದೀಪ್ ಎಲ್ಲರಿಗೂ ಹೇಳಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಮನೆಯೊಳಗೆ ಉಳಿದುಕೊಳ್ಳಲು ಗರಿಷ್ಠ ಪ್ರಯತ್ನ ಮಾಡುವುದು ಖಚಿತ. ಆದ್ದರಿಂದ ಮುಂದಿನ ಟಾಸ್ಕ್‌ನಲ್ಲಿ ಯಾರು, ಯಾವ ರೀತಿ ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್‌ಬಾಸ್‌ ಕನ್ನಡ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

Exit mobile version