ಬೆಂಗಳೂರು: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಡಾ. ಶ್ರೀರಾಮ್ ನೆನೆ ( Shriram Nene) ಅವರನ್ನು ಮದುವೆಯಾಗಿ ಸುಮಾರು 25 ವರ್ಷಗಳಾಗಿವೆ. 1999ರಲ್ಲಿ ಶ್ರೀರಾಮ್ ಅವರನ್ನು ವಿವಾಹವಾದ ನಂತರ ನಟಿ ತಮ್ಮ ಸಿನಿರಂಗವನ್ನು ಬಿಟ್ಟು ಅಮೆರಿಕದಲ್ಲಿ ಸೆಟಲ್ ಆದರು. 2003ರಲ್ಲಿ ದಂಪತಿಗೆ ಮೊದಲ ಮಗ ಆರಿನ್ (Arin) ಮತ್ತು 2005ರಲ್ಲಿ ಮಗ ರಿಯಾನ್ (Ryan) ಅವರು ಜನಿಸಿದರು. ಮಾಧುರಿ ಈಗ ಶ್ರೀರಾಮ್ ಜತೆಗಿನ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಹಾಗೇ ವೈದ್ಯರ ಸಂಗಾತಿಯಾಗಿರುವುದು ತುಂಬ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಪತಿಯ ಬಗ್ಗೆ ನನಗೆ ಹೆಮ್ಮೆ ಇದೆ
ಪತಿ ಡಾ ಶ್ರೀರಾಮ್ ನೆನೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಟಿ ಮಾತನಾಡಿ ʻʻಕುಟುಂಬಕ್ಕಾಗಿ ನೀವು ಮೀಸಲಿಟ್ಟಿರುವ ಸಮಯ ಕಠಿಣವಾಗಿತ್ತು. ನೀವು ವೈದ್ಯರಾದ ಕಾರಣ ಹಗಲು ರಾತ್ರಿ, ಕೆಲವೊಮ್ಮೆ ನಿಮ್ಮ ಪ್ರತಿ ದಿನದ ಕರೆಗಳಲ್ಲಿ ಇರುತ್ತಿದ್ದಿರಿ. ಇದು ಕಷ್ಟವಾಗಿತ್ತು. ಏಕೆಂದರೆ ನೀವು ಮಕ್ಕಳನ್ನು ನೋಡಿಕೊಳ್ಳುವುದು, ಶಾಲೆಗೆ ಕರೆದೊಯ್ಯುವುದು, ಅವರನ್ನು ಮರಳಿ ತರುವುದು ಮತ್ತು ಅಂತಹ ಸಂಗತಿಗಳನ್ನು ಮಾಡುತ್ತೀರಿ. ಆದರೆ ಕೆಲವೊಮ್ಮೆ, ಏನಾದರೂ ಸಮಸ್ಯೆ ಎದುರಾದರೆ ನೀವು ಇರುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ನೀವು ಬೇರೆಯವರನ್ನು ನೋಡಿಕೊಳ್ಳುತ್ತಿದ್ದೀರಿ. ಕೆಲವೊಮ್ಮೆ ನಾನು ಅನಾರೋಗ್ಯಕ್ಕೆ ಒಳಗಾಗಿದ್ದರೂ ನೀವು ಬೇರೆಯವರನ್ನು ನೋಡಿಕೊಳ್ಳಬೇಕಿತ್ತುʼʼಎಂದು ಹೇಳಿದರು.
ʻʻಆದರೆ ಇವೆಲ್ಲವನ್ನೂ ಫೇಸ್ ಮಾಡಿದ್ದರೂ, ನಾನು ಯಾವಾಗಲೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಏಕೆಂದರೆ ನೀವು ನೋಡಿಕೊಳ್ಳುತ್ತಿರುವ ರೋಗಿಗಳ ಬಗ್ಗೆ ಅಥವಾ ಅವರ ಹಕ್ಕುಗಳಿಗಾಗಿ ಹೋರಾಡುತ್ತಿರುವುದನ್ನು ನಾನು ನೋಡಿದಾಗಲೆಲ್ಲಾ ನನಗೆ ತಿಳಿದಿದೆ. ನೀವು ತುಂಬಾ ಒಳ್ಳೆಯ ವ್ಯಕ್ತಿʼʼಎಂದಿದ್ದಾರೆ.
ಇದನ್ನೂ ಓದಿ: Viral Dance: ಮಾಧುರಿ ದೀಕ್ಷಿತ್ ಅವರಂತೆ ನೃತ್ಯ ಮಾಡಿದ ಟೀಮ್ ಇಂಡಿಯಾದ ಆಟಗಾರ್ತಿಯರು; ವಿಡಿಯೊ ವೈರಲ್
ನನ್ನ ಮದುವೆ ಒಂದು ಲವ್ಲಿ ಜರ್ನಿ!
ಮಾಧುರಿ ಅವರು ಅವರ ಮದುವೆಯನ್ನು “ಲವ್ಲಿ ಜರ್ನಿ” ಎಂದು ಹೇಳಿದರು. “ನಾವಿಬ್ಬರೂ ಯಾವಾಗಲೂ ಆ ಪಾಲುದಾರಿಕೆಯನ್ನು ಹೊಂದಿದ್ದೇವೆ. ಅಲ್ಲಿ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತೇವೆ. ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತೇವೆ, ಯಾವಾಗಲೂ ಪ್ರೀತಿಸುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ. ಎಷ್ಟೋ ಕಷ್ಟಕರವಾದ ಸಂದರ್ಭಗಳನ್ನು ಎದುರಿಸಿದ್ದೇವೆ. ಆದರೆ ಜೀವನದಲ್ಲಿ ನಾವು ಏನು ಮಾಡುತ್ತಿದ್ದೇವೋ ಅದು ಒಳ್ಳೆಯದಕ್ಕಾಗಿ ಎಂದು ನಮಗೆ ತಿಳಿದಿದೆʼʼಎಂದರು.
ಇದನ್ನೂ ಓದಿ: 20 Years Of Devdas | 20 ವರ್ಷ ಪೂರೈಸಿದ ದೇವದಾಸ್ ಸಿನಿಮಾ: ಐಶ್ ಕಿವೀಲಿ ರಕ್ತ ಬಂದಿತ್ತಂತೆ!
ಮದುವೆಯ ನಂತರ ಸಾಕಷ್ಟು ಕಷ್ಟಗಳನ್ನು ನೋಡಿದ್ದೇವೆ
ಮದುವೆಯದ ನಂತರದ ಜೀವನದ ಕುರಿತು ನಟಿ ಮಾತನಾಡಿ ʻʻಮದುವೆಯ ಬಳಿಕ ನಾವಿಬ್ಬರೂ ಒಟ್ಟಿಗೆ ಜೀವನದ ಏರಿಳಿತದಲ್ಲಿ ಸಾಗಿದ್ದೇವೆ. ಸಾಕಷ್ಟು ಪ್ರಯಾಣಿಸಿದ್ದೇವೆ ಮತ್ತು ನಾವು ಹಿಂದೆಂದೂ ಮಾಡದ ಸಾಕಷ್ಟು ಕಷ್ಟಗಳನ್ನು ನೋಡಿದ್ದೇವೆ. ಆದರೆ ಇಂದು ನನ್ನ ಜೀವನವನ್ನು ಶ್ರೀಮಂತಗೊಳಿಸಿದೆ. ಮತ್ತು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆʼʼಎಂದರು. ಬಳಿಕ ಶ್ರೀರಾಮ್ ಮಾತನಾಡಿ “ಇಂತಹ ಬೆಂಬಲ ಸಂಗಾತಿಯನ್ನು ಹೊಂದಿರುವುದು ನನ್ನ ಅದೃಷ್ಟ. ಮುಂದೆ ಏನಾಗುತ್ತದೆ ಎಂಬದೂ ಯೋಚಿಸದೇ, ನಿಮ್ಮನ್ನು ಪ್ರೀತಿಸುತ್ತಾರೆ, ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ನಾವಿಬ್ಬರೂ ತುಂಬಾ ಸವಾಲಿನ ವೃತ್ತಿಯನ್ನು ಹೊಂದಿದ್ದೇವೆʼʼ ಎಂದು ಹೇಳಿದರು. ಮಾಧುರಿ ಇತ್ತೀಚೆಗೆ ʻಮಜಾ ಮಾʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಆನಂದ್ ತಿವಾರಿ ಅವರು ನಿರ್ದೇಶಿಸಿದ್ದಾರೆ.