Site icon Vistara News

Aindrila Sharma | ಬೆಂಗಾಲಿ ನಟಿ ಐಂದ್ರಿಲಾ ಶರ್ಮಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

Actress Aindrila Sharma

ಬೆಂಗಳೂರು: ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ (Aindrila Sharma) ಅವರಿಗೆ ನವೆಂಬರ್‌ 15ರಂದು ಎರಡು ಬಾರಿ ಹೃದಯಾಘಾತವಾಗಿತ್ತು. ನವೆಂಬರ್ 1 ರಂದು ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಐಂದ್ರಿಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನಟಿಗೆ ಮತ್ತೆ ಹೃದಯಾಘಾತವಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ವರದಿ ಪ್ರಕಾರ ನಟಿ ಇಂಟ್ರಾಕ್ರೇನಿಯಲ್ ಹೆಮರೇಜ್‌ನಿಂದ ಬಳಲುತ್ತಿದ್ದರು. ನವೆಂಬರ್ 1 ರಂದು ಮೆದುಳಿನ ಪಾರ್ಶ್ವವಾಯುಗೆ ಒಳಪಟ್ಟಿದ್ದರು. ಹೊಸ ಸಿಟಿ ಸ್ಕ್ಯಾನ್ ವರದಿ ಪ್ರಕಾರ ನಟಿಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ನಟಿಯ ಆರೋಗ್ಯ ಇನ್ನಷ್ಟು ಗಂಭೀರಗೊಂಡಿದ್ದು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ

ಈ ಹಿಂದೆ ಅಷ್ಟೇ ನಟಿ ಐಂದ್ರಿಲಾ ಶರ್ಮಾ ಗೆಳೆಯ ನಟ ಸಬ್ಯಸಾಚಿ ಚೌಧರಿ ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಕುರಿತು ಪ್ರಾರ್ಥಿಸುವಂತೆ ಕೇಳಿಕೊಂಡಿದ್ದರು. ನಟಿ ಐಂದ್ರಿಲಾ ಶರ್ಮಾ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಗುಣಮುಖರಾಗಿ ಎಂದು ಕಮೆಂಟ್‌ ಮೂಲಕ ಹೇಳಿಕೊಂಡಿದ್ದರು.

ನಟರಾದ ಪರಂಬ್ರತ ಚಟರ್ಜಿ, ಜೀತು ಕಮಲ್, ಸುದೀಪ್ತ ಚಕ್ರವರ್ತಿ, ಬಿದಿಪ್ತ ಚಕ್ರವರ್ತಿ, ಅನಿಂದ್ಯಾ ಚಟರ್ಜಿ, ಸ್ವಸ್ತಿಕಾ ದತ್ತಾ ಮತ್ತಿತರರು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ಬೇಗ ಗುಣಮುಖರಾಗಿ ಎಂದು ಹೇಳಿಕೊಂಡಿದ್ದರು. ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಟಿ ಐಂದ್ರಿಲಾ ಈ ಹಿಂದೆ ಎರಡು ಬಾರಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದರು. ಇದೀಗ ಮತ್ತೆ ಬ್ರೈನ್ ಸ್ಟ್ರೋಕ್‌ನಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ | ಛವಿ ಮಿತ್ತಲ್ ಗೆ ಬ್ರೆಸ್ಟ್‌ ಕ್ಯಾನ್ಸರ್‌: ಪಾಸಿಟಿವ್‌ ಪೋಸ್ಟ್‌ ಹಂಚಿಕೊಂಡ ನಟಿ

Exit mobile version