Site icon Vistara News

BISFF 2022 | ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಲನಚಿತ್ರೋತ್ಸವ: ವಿಶೇಷತೆ ಏನಿದೆ?

BISFF 2022

ಬೆಂಗಳೂರು: ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ (BISFF 2022 -Bengaluru International Short Film Festival) ತನ್ನ 12ನೇ ಆವೃತ್ತಿಯನ್ನು ಗುರುವಾರ (ಆ.4) ಆಯೋಜಿಸಿದೆ. ಆಗಸ್ಟ್ 4-14ರ ತನಕ ಕಿರು ಚಲನಚಿತ್ರೋತ್ಸವ ನಡೆಯಲಿದೆ. ಇನ್ನೂ ವಿಶೇಷ ಅಂದರೆ ಈ ಬಾರಿ ಚಿತ್ರೋತ್ಸವದಲ್ಲಿ ಭಾಗವಹಿಸುವ ಎಲ್ಲ ಕಿರು ಚಿತ್ರಗಳನ್ನು ಥಿಯೇಟರ್ ‌ಜತೆಗೆ ಓಟಿಟಿಯಲ್ಲಿಯೂ ವೀಕ್ಷಿಸಬಹುದು.

ಲಾಗಿನ್‌ ಆಗುವ ಮೂಲಕ ಕಣ್ತುಂಬಿಸಿಕೊಳ್ಳಿ
ಆಗಸ್ಟ್‌ 11 ರಿಂದ 14ರವರೆಗೆ ಸುಚಿತ್ರಾ ಮತ್ತು ಗೋಥೆ ಇನ್ಸಿಟ್ಯೂಟ್‌ ಮ್ಯಾಕ್ಸ್‌ ಮುಲ್ಲರ್‌ ಭವನದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಿನಿಮಾಸಕ್ತರು https://bisff.in/ ನಲ್ಲಿನ ಲಾಗಿನ್‌ ಆಗುವ ಮೂಲಕ ಎಲ್ಲ ವರ್ಗಗಳ ಕಿರುಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ವರ್ಷ BISFF ವಿಶೇಷತೆ ಒಮ್ಮೆ ಉತ್ಸವಕ್ಕೆ ನೋಂದಾಯಿಸಿದ ಚಲನಚಿತ್ರಗಳನ್ನು 10 ದಿನಗಳಲ್ಲಿ ಯಾವಾಗ ಬೇಕಾದರೂ ವೀಕ್ಷಿಸಬಹುದಾಗಿದೆ. ಖ್ಯಾತ ನಿರ್ದೇಶಕ ಸತ್ಯಜೀತ್‌ ರೇ ಶತಮಾನೋತ್ಸವದ ಪುಣ್ಯ ತಿಥಿಯ ಅಂಗವಾಗಿ ಈ ಚಲನಚಿತ್ರೋತ್ಸವವನ್ನು ಸಪರ್ಮಿಸಲಾಗುತ್ತಿದೆ.

ಇದನ್ನೂ ಓದಿ | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡ ಅಜಯ್‌ ದೇವಗನ್‌, ಸೂರ್ಯ

ʻಡೊನೇಟ್‌ ನೌವ್‌ʼ ವಿಶೇಷತೆ
ಈ ಪ್ರದರ್ಶನದಲ್ಲಿ ಕಿರುಚಿತ್ರ ಪ್ರದರ್ಶನಗೊಳ್ಳಲಿದ್ದು, ಆಯ್ಕೆಯಾಗುವ ಕಿರುಚಿತ್ರವು ಅಕಾಡಮಿ ಪ್ರಶಸ್ತಿಗಳ ಲೈವ್‌ ಆ್ಯಕ್ಷನ್‌ ಕಿರುಚಿತ್ರ ವಿಭಾಗದಲ್ಲಿ ಪರಿಗಣಿಸಿಲು ಸ್ವಯಂಚಾಲಿತವಾಗಿ ಅರ್ಹವಾಗಿರುತ್ತವೆ. BISFF 2022ಗೆ 90 ದೇಶಗಳಿಂದ 3000ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿವೆ. ಅವುಗಳಲ್ಲಿ ಶೇ.23 ರಷ್ಟು ಮಹಿಳಾ ಚಲನಚಿತ್ರ ನಿರ್ಮಾಪಕರು ಸೇರಿರುವುದು ವಿಶೇಷ. ಉತ್ಸವದ ಪ್ರದರ್ಶನಕ್ಕೆ ಸುಮಾರು 250 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವದ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಲಾಗಿನ್‌ ಆಗುವ ಸಿನಿಮಾಸಕ್ತರು ಸಿನಿಮಾ ನೋಡುವ ಜತೆಗೆ ಬಡ ಮಕ್ಕಳಿಗೆ ದೇಣಿಗೆ ಕೂಡ ನೀಡಬಹುದು. ವೆಬ್‌ಸೈಟ್‌ನಲ್ಲಿ ʻʻಡೊನೇಟ್‌ ನೌವ್‌ʼʼಎನ್ನುವ ಅವಕಾಶ ನೀಡಿದ್ದು, ಆಸಕ್ತರು ಡೊನೇಟ್‌ ಮಾಡಬಹುದಾಗಿದೆ. ಈ ಹಣವು ನೇರವಾಗಿ ಬೆಂಗಳೂರಿನಲ್ಲಿರುವ ಎನ್‌ಜಿಒ ʻವಿದ್ಯಾನಿಕೇತನಕ್ಕೆʼ ತಲುಪಲಿದೆ.

ಇದನ್ನೂ ಓದಿ | 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

Exit mobile version