Site icon Vistara News

Bhagavanth Kesari Teaser: ನಂದಮೂರಿ ಬಾಲಕೃಷ್ಣ ʻಭಗವಂತ್‌​ ಕೇಸರಿʼ ಅಬ್ಬರ ಬಲು ಜೋರು; ಟೀಸರ್‌ ಔಟ್‌!

Bhagavanth Kesari Teaser

ಬೆಂಗಳೂರು: ಜೂನ್‌ 10 ನಂದಮೂರಿ ಬಾಲಕೃಷ್ಣ ಅವರ ಜನುಮದಿನ. ಈ ದಿನದಂದು ಅವರ ಮುಂಬುರುವ ಸಿನಿಮಾ ‘ಭಗವಂತ್‌​ ಕೇಸರಿ’ ಚಿತ್ರದ ಟೀಸರ್ (Bhagavanth Kesari Teaser:) ಅನಾವರಣಗೊಂಡಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರಕ್ಕೆ ಬಾಲಯ್ಯ ಫ್ಯಾನ್ಸ್‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದು, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಭಗವಂತ್‌​ ಕೇಸರಿ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಭಗವಂತ್‌​ ಕೇಸರಿ ಟೀಸರ್ ಔಟ್!

ಬಾಲಯ್ಯ ಅವರ ಜನ್ಮದಿನದಂದು ಶುಭಾಶಯ ಕೋರಿದ ನಿರ್ಮಾಪಕರು ಚಿತ್ರದ ಟೀಸರ್ ಅನಾವರಣಗೊಳಿಸಿದರು. ಚಿತ್ರತಂಡ ಬೆಳಗ್ಗೆ 10.19ಕ್ಕೆ ಈ ಟೀಸರ್​ ಹಂಚಿಕೊಂಡಿದೆ. ಇದರಲ್ಲಿ ಬಾಲಯ್ಯ ಅವರು ಮಾಸ್​ ಆಗಿ ಅಬ್ಬರಿಸಿದ್ದಾರೆ. ಬಾಲಯ್ಯ ಅವರು ‘ಭಗವಂತ್​ ಕೇಸರಿ’ ಟೀಸರ್​ನಲ್ಲಿ ಎಂದಿನಂತೆ ಮಾಸ್​ ಆಗಿ ಡೈಲಾಗ್​ ಹೊಡೆದಿದ್ದಾರೆ. ಆಯುಧ ಹಿಡಿದು ಅಬ್ಬರಿಸಿದ್ದಾರೆ. ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುವಂತಿದೆ.

ಅನಿಲ್ ರವಿಪುಡಿ ಅವರು ಮಹೇಶ್ ಬಾಬು ಅವರಿಗೆ ಸರಿಲೇರು ನೀಕೆವ್ವರು (2020)ನಲ್ಲಿ ನಿರ್ದೇಶಿಸಿದ ನಂತರ ಸ್ಟಾರ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಲಕೃಷ್ಣ ಸಿನಿಮಾದ ಟ್ರೇಡ್ ಮಾರ್ಕ್ ಮಾಸ್ ಅಂಶಗಳೂ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್‌ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್‌ ರಿವೀಲ್‌!

ಮಾರ್ಚ್ 22ರಂದು, ಅನಿಲ್ ರವಿಪುಡಿ ಅವರು NBK 108 ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದರು. ಪೋಸ್ಟರ್‌ಗಳಲ್ಲಿ ‘ಈ ಬಾರಿ ನಿಮ್ಮ ಕಲ್ಪನೆಗೂ ಮೀರಿ’ ಎಂಬ ಅಡಿಬರಹವಿತ್ತು. ಈ ಚಿತ್ರವು ಬಾಲಯ್ಯ ಅವರ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ಮಾಸ್ ಆಗಿರಲಿದೆ ಎನ್ನಲಾಗಿದೆ.

ಚಿತ್ರಕ್ಕೆ ಎಸ್ ಥಮನ್ ಸಂಗೀತ ನೀಡಿದ್ದು, ಸಿ ರಾಮ್ ಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ತಮ್ಮಿ ರಾಜು ಸಂಕಲನವಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿದೆ.

Exit mobile version