Site icon Vistara News

Bhargav Krishna: ಹುಟ್ಟುಹಬ್ಬದ ಸಂಭ್ರಮದಲ್ಲಿ ಯುವ ನಟ ಭಾರ್ಗವ್ ಕೃಷ್ಣ

Bhargav Krishna Birthday Film list

ಬೆಂಗಳೂರು: ಭಾರ್ಗವ್ ಕೃಷ್ಣ (Bhargav Krishna) ಇತ್ತೀಚಿಗೆ ಹೊಸದಾಗಿ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಹೊಸ ಹೀರೊ. 21ನೇ ವಯಸ್ಸಿನಲ್ಲಿ ಮೂರು ಸಿನಿಮಾಗಳನ್ನು ಮಾಡುತ್ತಿರುವ ಏಕೈಕ ನಟ. ಹುಟ್ಟಿ ಬೆಳೆದಿದ್ದೆಲ್ಲ ಕನಕಪುರದಲ್ಲಿ ಈಗ ದುಬೈನಲ್ಲಿ ಬಿಬಿಎ ಓದುತ್ತಿರುವ ಭಾರ್ಗವ್ ಕೃಷ್ಣರವರು ಸಿನಿಮಾದ ಆಸಕ್ತಿಯಿಂದ ಡ್ಯಾನ್ಸ್ ಹಾಗೂ ಆಕ್ಷನ್‌ಗಳನ್ನು ತರಬೇತಿ ಪಡೆದುಕೊಂಡು ಒಬ್ಬ ಪೂರ್ವ ಪ್ರಮಾಣದ ನಟನಾಗಿ ತಯಾರಾಗಿದ್ದಾರೆ.

ಮೊದಲನೇ ಸಿನಿಮಾ “ಓಂ ಶಿವಂ” ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಆಲ್ವಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದೀಪ ಮೂವಿಸ್ ಪ್ರೊಡಕ್ಷನ್ನ ಕೃಷ್ಣ ಕೆ ಎನ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.

ಭಾರ್ಗವ್ ಕೃಷ್ಣ ಅವರ ಎರಡನೇ ಸಿನಿಮಾ, (ಹೆಸರಿಡದ) ಅಕುಲ್ ಎನ್ ನಿರ್ದೇಶನ ಮಾಡಿದ್ದು , ದೀಪ ಮೂವೀಸ್ ಪ್ರೊಡಕ್ಷನ್ ನ ಕೃಷ್ಣ ಕೆಎನ್ ರವರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೂಡ ವೇಗವಾಗಿ ಸಾಗುತ್ತಿದೆ .

ಇದನ್ನೂ ಓದಿ: Abhishek Ambareesh: ʻಬ್ಯಾಡ್‌ ಮ್ಯಾನರ್ಸ್‌ʼ ಸಿನಿಮಾ ಟ್ರೈಲರ್‌ಗೆ ʻಡಿ ಬಾಸ್‌ʼ ಸಾಥ್‌ !

ಮೂರನೇ ಸಿನಿಮಾ ಈಶ್ವರ್ ಪೊಳಂಕಿರವರು ನಿರ್ದೇಶನ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಚಿತ್ರದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ ಚಿತ್ರತಂಡ. ಇನ್ನಷ್ಟು ಸಿನಿಮಾಗಳನ್ನು ಮಾಡಲಿ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಅವರ ಫ್ಯಾನ್ಸ್‌ ನಟನಿಗೆ ಶುಭ ಹಾರೈಸುತ್ತಿದ್ದಾರೆ.

Exit mobile version