Site icon Vistara News

Akanksha Dubey: ವಾರಾಣಸಿ ಹೋಟೆಲ್‌ನಲ್ಲಿ ಭೋಜ್‌ಪುರಿ ನಟಿ ಆಕಾಂಕ್ಷಾ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ

Bhojpuri actress Akanksha Dubey dies

ಬೆಂಗಳೂರು: ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ (Akanksha Dubey) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖ್ಯಾತ ನಟಿ ಉತ್ತರ ಪ್ರದೇಶದ ವಾರಾಣಸಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕಾಂಕ್ಷಾ ದುಬೆಗೆ ಕೇವಲ 25 ವರ್ಷ ವಯಸ್ಸಾಗಿತ್ತು. ನಟಿ ಮುಂಬರುವ ಪ್ರಾಜೆಕ್ಟ್‌ನ ಚಿತ್ರೀಕರಣಕ್ಕಾಗಿ ವಾರಾಣಸಿಯಲ್ಲಿದ್ದರು ಎಂದು ವರದಿಯಾಗಿದೆ. ಚಿತ್ರೀಕರಣದ ನಂತರ, ನಟಿ ಅಲ್ಲಿನ ಸಾರನಾಥ್ ಹೋಟೆಲ್‌ಗೆ ತೆರಳಿದರು. ಹೋಟೆಲ್ ಕೋಣೆಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಎಂದು ವರದಿಯಾಗಿದೆ.

ಸಾಯುವ ಕೆಲವು ಗಂಟೆಗಳ ಮೊದಲು, ಆಕಾಂಕ್ಷಾ ಇನ್‌ಸ್ಟಾದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಳು. ಭೋಜ್‌ಪುರಿ ಹಾಡಿನ ʻಹಿಲೋರ್ ಮಾರೆʼ( Hilore Mare) ಹಾಡಿಗೆ ಬೆಲ್ಲಿ ಡ್ಯಾನ್ಸ್‌ ಕೂಡ ಮಾಡಿದ್ದರು. ನೀಲಿ ಜೀನ್ಸ್‌ನೊಂದಿಗೆ ಕಪ್ಪು ಕ್ರಾಪ್ ಟಾಪ್ ಧರಿಸಿ, ಕನ್ನಡಿಯ ಮುಂದೆ ನೃತ್ಯ ಮಾಡುತ್ತಿರುವುದನ್ನು ಪೋಸ್ಟ್‌ ಮಾಡಿಕೊಂಡಿದ್ದರು.

ಆಕಾಂಕ್ಷಾ ಅವರ ನಿಧನದ ಆಘಾತಕಾರಿ ಸುದ್ದಿ, ಅವರ ಮ್ಯೂಸಿಕ್ ವಿಡಿಯೋ ಯೇ ಆರಾ ಕಭಿ ಹರಾ ನಹೀ (Ye Aara Kabhi Hara Nahi’s) ಬಿಡುಗಡೆಯ ದಿನದಂದೇ ಬಂದಿದೆ. ಪವರ್ ಸ್ಟಾರ್ ಪವನ್ ಸಿಂಗ್ ಜತೆಗೆ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಇದನ್ನೂ ಓದಿ: Leena Nagwanshi Death | ನಟಿ ತುನಿಶಾ ಶರ್ಮಾ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ 22 ವರ್ಷದ ಯುಟ್ಯೂಬರ್‌ ಆತ್ಮಹತ್ಯೆ

ಸಾಯುವ ಕೆಲವು ಗಂಟೆಗಳ ಮೊದಲು ಪೋಸ್ಟ್‌ ಮಾಡಿದ ನಟಿ

ಭೋಜ್‌ಪುರಿ ಚಿತ್ರರಂಗದ ಕನಸಿನ ಹುಡುಗಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಆಕಾಂಕ್ಷಾ , ಮಿರ್ಜಾಪುರದ ವಿಂಧ್ಯಾಚಲ ಹುಟ್ಟೂರು. ಸದ್ಯ ಮುಂಬೈಯಲ್ಲಿ ಫೋಷಕರೊಂದಿಗೆ ವಾಸಿಸುತ್ತಿದ್ದರು. ಆಕೆಯ ಪೋಷಕರು ಆಕಾಂಕ್ಷಾ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಆಕಾಂಕ್ಷಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.
ಮೇರಿ ಜಂಗ್ ಮೇರಾ ಫೈಸ್ಲಾ (Meri Jung Mera Faisla,) ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಮುಜ್ಸೆ ಶಾದಿ ಕರೋಗಿ (ಭೋಜ್‌ಪುರಿ) (Mujhse Shadi Karogi (Bhojpuri),), ವೀರೋನ್ ಕೆ ವೀರ್ (Veeron Ke Veer), ಫೈಟರ್ ಕಿಂಗ್ (Fighter King,), ಕಸಮ್ ಪೈಡಾ ಕರ್ನೆ ಕೆಐ 2 (Kasam Paida Karne KI 2) ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು.

ಸಹನಟ ಸಮರ್ ಸಿಂಗ್

ಆಕಾಂಕ್ಷಾ ಇತ್ತೀಚೆಗೆ ಸಹನಟ ಸಮರ್ ಸಿಂಗ್ (Samar Singh) ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದರು. 2023ರ ಪ್ರೇಮಿಗಳ ದಿನದಂದು ತಾವು ಡೇಟಿಂಗ್‌ ಮಾಡುತ್ತಿರುವುದಾಗಿ ಪೋಸ್ಟ್‌ ಕೂಡ ಹಂಚಿಕೊಂಡಿದ್ದರು.

Exit mobile version