Site icon Vistara News

Bholaa trailer: ಅಜಯ್ ದೇವಗನ್ ನಟನೆ, ನಿರ್ದೇಶನದ ʻಭೋಲಾʼ ಟ್ರೈಲರ್‌ ಔಟ್‌

Bholaa trailer

ಬೆಂಗಳೂರು: ಅಜಯ್ ದೇವಗನ್ ನಟನೆ ಹಾಗೂ ನಿರ್ದೇಶನದ ʻಭೋಲಾʼ ಟ್ರೈಲರ್‌ (Bholaa trailer) ಬಿಡುಗಡೆಗೊಂಡಿದೆ. ಟಬು ಅವರ ಪೋಲೀಸ್ ಅವತಾರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಕೈಯಲ್ಲಿ ತ್ರಿಶೂಲ ಹಿಡಿದಿರುವ ಫಸ್ಟ್‌ ಲುಕ್‌ ಈ ಹಿಂದೆ ಬಿಡುಗಡೆಯಾಗಿತ್ತು. ಟೀಸರ್‌ ಬಿಡುಗಡೆಯಾದಂತೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ‘ಭೋಲಾ’ ಭಾವನಾತ್ಮಕ ತಿರುಳನ್ನು ಹೊಂದಿರುವ ಕಥಹಂದರವಾಗಿದೆ.

ಅಜಯ್ ದೇವಗನ್ ಮತ್ತು ಟಬು ಅಭಿನಯದ ಭೋಲಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭೋಲಾʼ ಸಿನಿಮಾ 2019ರಲ್ಲಿ ಬಿಡುಗಡೆಯಾದ ತಮಿಳಿನ ʻಕೈದಿʼ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ನಿರ್ದೇಶನದ ʻಭೋಲಾʼ ಮಾರ್ಚ್ 30ರಂದು ಥಿಯೇಟರ್‌ಗಳಿಗೆ ಬರಲಿದೆ. ಟಬು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೋಲಾ ಚಿತ್ರವು ಅಜಯ್ ದೇವಗನ್ ಮತ್ತು ನಟಿ ಟಬು ಅವರ ಒಂಬತ್ತನೇ ಚಿತ್ರವಾಗಿದೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ 2ದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Ajay Devgan | ಅಜಯ್ ದೇವಗನ್ ಅಭಿನಯದ ʻಭೋಲಾʼ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್‌

ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ. 2023 ಮಾರ್ಚ್ 30ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಲಿದೆ.

Exit mobile version