Site icon Vistara News

Bhool Bhulaiyaa- 2 | ನೆಟ್‌ಫ್ಲಿಕ್ಸ್‌ನಲ್ಲಿ ʻಗ್ಲೋಬಲ್‌ ಬ್ಲಾಕ್‌ಬಸ್ಟರ್‌ʼ ಖ್ಯಾತಿ ಪಡೆದ ಭೂಲ್‌ ಭುಲಯ್ಯಾ- 2

Bhool Bhulaiyaa- 2

ಬೆಂಗಳೂರು: ಕಾರ್ತಿಕ್‌ ಆರ್ಯನ್‌ ಅಭಿನಯದ ಭೂಲ್‌ ಭುಲಯ್ಯಾ -2 (Bhool Bhulaiyaa- 2) ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ʻಗ್ಲೋಬಲ್‌ ಬ್ಲಾಕ್‌ಬಸ್ಟರ್‌ʼ ಎಂಬ ಖ್ಯಾತಿ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂ. ಗಳಿಕೆ ಮಾಡಿದ ಬಳಿಕ ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿತ್ತು.

ಭೂಲ್ ಭುಲಯ್ಯಾ -2 ಸಿನಿಮಾ ಬಿಡುಗಡೆ ನಂತರ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. ವಾರಾಂತ್ಯದ ಜತೆಗೆ ವೀಕ್ ಡೇಸ್‌ನಲ್ಲೂ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ರಿಲೀಸ್ ಆಗಿ ನಾಲ್ಕು ದಿನಕ್ಕೆ 66 ಕೋಟಿ ರೂ. ಗಳಿಸಿತ್ತು. ಇದೀಗ 185 ಕೋಟಿ ಗಳಿಕೆ ಮಾಡಿ, ಬಾಲಿವುಡ್‌ನಲ್ಲಿ ಹೆಸರನ್ನು ಪಡೆದಿದೆ.

ದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

ಕಾರ್ತಿಕ್ ಆರ್ಯನ್‌, ಟಬು ಮತ್ತು ಕಿಯಾರಾ ಅಡ್ವಾಣಿ ನಟಿಸಿರುವ ಈ ಚಿತ್ರಕ್ಕೆ ಅನೀಸ್ ಬಾಜ್ಮೀ ಅವರ ನಿರ್ದೇಶನವಿದೆ. ಈ ಸಿನಿಮಾ ಹಾರರ್‌ ಕಾಮಿಡಿ ಆಗಿದ್ದು, ನಟ ಕಾರ್ತಿಕ್‌ ಟ್ವೀಟ್‌ ಮೂಲಕ ಖುಷಿಯನ್ನು ಹಂಚಿಕೊಂಡಿದ್ದರು. ʻʻನಟರಾಗಿ ನಾವು ಈ ದಿನಕ್ಕಾಗಿ ಹಂಬಲಿಸುತ್ತೇವೆ. ಚಿತ್ರ ಹೌಸ್‌ಫುಲ್‌ ಆಗಿದೆ. ನನಗೆ ಟಿಕೆಟ್‌ ಸಿಗಲಿಲ್ಲ. ಪ್ರೇಕ್ಷಕರಿಗೆ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದರು.

2007ರಲ್ಲಿ ಅಕ್ಷಯ್‌ ಕುಮಾರ್‌ ನಟಿಸಿದ ಭೂಲ್‌ ಭುಲಯ್ಯಾ- 1 ಚಿತ್ರದ ಆಧ್ಯಾತ್ಮಿಕ ಉತ್ತರಭಾಗ ಈ ಚಿತ್ರವಾಗಿದೆ. ಮೂಲ ಚಿತ್ರವನ್ನು ಪ್ರಿಯದರ್ಶನ್‌ ನಿರ್ದೇಶಿಸಿದ್ದರೆ ಈ ಬಾರಿ ಅನೀಸ್‌ ಬಾಜ್ಮಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ, ಬಾಲಿವುಡ್‌ ನಟ ಸಿದ್ಧಾಂತ್‌ ಕಪೂರ್‌ ವಶಕ್ಕೆ

Exit mobile version