Dhanushree Bigg Boss: ಬಾತ್ ಟಬ್‌ನಲ್ಲಿ ಚಿಲ್ ಮಾಡಿದ ಟಿಕ್ ಟಾಕ್ ಸ್ಟಾರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಧನುಶ್ರೀ! Yashaswi Devadiga 2 ವರ್ಷಗಳು ago ಟಿಕ್ ಟಾಕ್ ಸ್ಟಾರ್, ನಟಿ, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ (bigg boss kannada) ಇದೀಗ ಹಾಟ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಧನುಶ್ರೀ ಸೋಷಿಯಲ್ ಮೀಡಿಯಾದ ಕಂಟೆಂಟ್ ಕ್ರಿಯೇಟರ್ ಕೂಡ ಹೌದು. ತಮ್ಮ ರೀಲ್ಸ್ ಮೂಲಕ ಹೆಸರು ವಾಸಿಯಾಗಿದ್ದ ಧನುಶ್ರೀ, ಬಿಗ್ ಬಾಸ್ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ಆದರೆ, ಎರಡೇ ವಾರಕ್ಕೆ ಔಟ್ ಆಗಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಹಲವು ಅವಕಾಶಗಳು ಸಿಕ್ಕಿದ್ದವು ಎಂದು ಹೇಳಿಕೊಂಡಿದ್ದರು. ಇದೀಗ ಕೇರಳ ಟೂರ್‌ನಲ್ಲಿದ್ದಾರೆ. ಹೊಟೆಲ್ ರೂಮ್‌ನಲ್ಲಿನ ಬಾತ್ ಟಬ್‌ನಲ್ಲಿ ಜ್ಯೂಸ್ ಕುಡಿಯುತ್ತ ಎಂಜಾಯ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಕೆಲವರು ಹೊಗಳಿದೆ, ಇನ್ನೂ ಕೆಲವರು ಕಮೆಂಟ್ ಮೂಲಕ ನೆಗೆಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. See more ‘ಒಂದೊಳ್ಳೆ ಲವ್‌ಸ್ಟೋರಿ’ ಚಿತ್ರಕ್ಕೆ ‘ಬಿಗ್ ಬಾಸ್’ ಧನುಶ್ರೀ ನಾಯಕಿಯಾಗಿಯೂ ನಟಿಸಿದ್ದಾರೆ. ಜೀವನದ ಬಗ್ಗೆ ನಂಬಿಕೆ ಕಳೆದುಕೊಂಡ ಹುಡುಗಿ ಮತ್ತು ಪ್ರೀತಿಯ ಬಗ್ಗೆ ನಂಬಿಕೆ ಕಳೆದುಕೊಂಡ ಹುಡುಗ. ಇವರಿಬ್ಬ ಭೇಟಿಯೇ ಈ ಸಿನಿಮಾದ ಕಥೆ ಎಂದಿದ್ದರು ಧನುಶ್ರೀ.