ಬೆಂಗಳೂರು: ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ವಿವಾದಾತ್ಮಕ ಫೋಟೊ ಹಾಗೂ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಉರ್ಫಿ ಟಾಪ್ಲೆಸ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ವಿಶೇಷ ಅಂದರೆ ಉರ್ಫಿಯ ಮೈ ತುಂಬಾ ಮುತ್ತುಗಳ ಮಾರ್ಕ್ ಇದೆ. ಈ ಫೋಟೊ ಪೋಸ್ಟ್ ಮಾಡಿದ ಬಳಿಕ ನಟಿಗೆ ಮುತ್ತು ಕೊಟ್ಟಿದ್ದು ಯಾರು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದೀಗ ಸಣ್ಣ ವಿಡಿಯೊ ಹಂಚಿಕೊಳ್ಳುವುದರ ಮೂಲಕ ಈ ಬಗ್ಗೆ ರಿವೀಲ್ ಮಾಡಿದ್ದಾರೆ ಉರ್ಫಿ.
ಎದೆಯನ್ನು ಕೈಯಲ್ಲಿ ಮುಚ್ಚಿಕೊಂಡು, ಮೈ ತುಂಬಾ ಮುತ್ತಿನ ಮಾರ್ಕ್ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ ಉರ್ಫಿ. “ಶೀಘ್ರದಲ್ಲೇ ನನ್ನ ಖಾತೆಯನ್ನು ಡಿಲೀಟ್ ಮಾಡುತ್ತೇನೆʼʼ ಎಂದು ಈ ಫೋಟೊಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೊಗೆ ನೆಟ್ಟಿಗರು ಸಕತ್ ಟ್ರೋಲ್ ಮಾಡುತ್ತಾ, ಮುತ್ತು ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕೆಲವರು ʻಆ ಅವಕಾಶ ನನಗಾದರೂ ಕೊಡಬಾರದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ “ಐ ಲವ್ ಯೂ!!!” ಎಂದು ಕಮೆಂಟ್ ಮಾಡಿದ್ದಾರೆ.
ಇದೀಗ ನಟಿಗೆ ಹೆಣ್ಣು ಮಕ್ಕಳೇ ಮುತ್ತು ಕೊಟ್ಟಿರುವುದು ರಿವೀಲ್ ಆಗಿದೆ. ಅವರ ಸಿಬ್ಬಂದಿ ಹೆಣ್ಣು ಮಕ್ಕಳು ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಉರ್ಫಿಯ ಮೈ ತುಂಬಾ ಮುತ್ತುಗಳನ್ನು ಕೊಟ್ಟಿದ್ದಾರೆ. ಈ ವಿಡಿಯೊಗೆ ಹಲವರು ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡುತ್ತೇನೆ ಎಂದು ಉರ್ಫಿ ಹೇಳಿದ ಬಳಿಕ ಮತ್ತೊಂದು ಅಕೌಂಟ್ ಓಪನ್ ಮಾಡಿದ್ದಾರೆ. ಕೆಲವು ಸಮಸ್ಯೆಗಳಿಂದಾಗಿ ಅಕೌಂಟ್ ಡಿಲೀಟ್ ಮಾಡಬೇಕಾಗಿದೆ ಎಂದು ಉರ್ಫಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಹೊಸ ಅಕೌಂಟ್ಗೆ ಈಗಾಗಲೇ ಹದಿನೈದು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಬಂದಿದ್ದಾರೆ.
ಇದನ್ನೂ ಓದಿ: Urfi Javed: ಪೊಲೀಸ್ ಕಸ್ಟಡಿಗೆ ಉರ್ಫಿ ಜಾವೇದ್; ವಿಡಿಯೊ ವೈರಲ್!
ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಒಟಿಟಿ’ಯ ಬಳಿಕ ಖ್ಯಾತಿಯನ್ನು ಗಳಿಸಿದರು. ಉರ್ಫಿ ಜಾವೇದ್ ʼಬಿಗ್ ಬಾಸ್ ಒಟಿಟಿ’ಯಲ್ಲಿ ಭಾಗವಹಿಸಿದ ನಂತರ ಖ್ಯಾತಿ ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸುವ ಮೂಲಕ ಪ್ರವರ್ದಮಾನಕ್ಕೆ ಬಂದಿದ್ದರು. ಜತೆಗೆ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪಿಲ್ಟ್ವಿಲ್ಲಾ ಸೀಸನ್-14 (MTV Splitsvilla-season 14)ರಲ್ಲಿ ಕಾಣಿಸಿಕೊಂಡಿದ್ದರು.