Site icon Vistara News

Olle Huduga Pratham: ಮುಂದಿನ ವಾರ ʻಬಿಗ್‌ ಬಾಸ್‌ ಸೀಸನ್‌ 4ʼರ ವಿಜೇತ ಪ್ರಥಮ್‌ ಮದುವೆ!

Bigg Boss Season 4 winner olle hudga pratham

ಬೆಂಗಳೂರು: ಬಿಗ್‌‌ ಬಾಸ್ ಸೀಸನ್‌-4ರ (Olle Huduga Pratham) ವಿಜೇತ,‌ ನಟ ಪ್ರಥಮ್ ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಪ್ರಥಮ್‌ ಅವರೇ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.  ಒಳ್ಳೆ ಹುಡ್ಗ ಪ್ರಥಮ್‌ (Olle Huduga Pratham), ಬಿಗ್‌ ಬಾಸ್‌-4ರಲ್ಲಿ ವಿಜೇತರಾಗಿದ್ದರು. ಇದೀಗ ಕುಟುಂಬದವರು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಅಲ್ಲದೆ, ತಮ್ಮ ಮದುವೆಯ ಬಗ್ಗೆ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ಪ್ರಥಮ್‌ ಟ್ವೀಟ್‌ ಮಾಡಿ ʻʻNext week(ಮುಂದಿನ ವಾರ) ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ; ಹಾಗಂತ ಸುಮ್ಮನೆ ಫಾರ್ವರ್ಡ್‌ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ.‌ ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್‌ ಆಗಿ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Olle Huduga Pratham: `ಕರ್ನಾಟಕದ ಅಳಿಯ’ ಒಳ್ಳೆ ಹುಡುಗ ಪ್ರಥಮ್ ಹಾಟ್‌ ಸಾಂಗ್‌ ಔಟ್‌!

ನಟ ಪ್ರಥಮ್ ಅವರು ಕಳೆದ ಜೂನ್ ತಿಂಗಳಿನಲ್ಲಿ ಮಂಡ್ಯದ ಭಾನುಶ್ರೀ ಎನ್ನುವವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರು ಏಕಾಏಕಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಪ್ರಥಮ್‌ ಈ ಹಿಂದೆ ʻʻ“ನನ್ನದು ಕಂಪ್ಲೀಟ್ ಅರೇಂಜ್ ಮ್ಯಾರೇಜ್; ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ… ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ… ಸಿದ್ದರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ. ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ; ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್‌ ಬೀಗರ ಊಟ‌. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್‌ವೆಜ್‌ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು. ನೀವು ಹರಸಿʼʼಎಂದು ಬರೆದುಕೊಂಡಿದ್ದರು.

ಕಳೆದ ವರ್ಷ ‘ನಟ ಭಯಂಕರ’ ಸಿನಿಮಾ ನಿರ್ದೇಶಿಸಿ, ನಟಿಸಿದ್ದರು .’ಎಂಎಲ್‌ಎ’, ‘ದೇವರಂಥ ಮನುಷ್ಯ’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳಲ್ಲಿ ನಟಿಸಿದ್ದರು.

Exit mobile version