Site icon Vistara News

Bigg Boss Tamil 7: ಬಿಗ್‌ಬಾಸ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದ ವೈಲ್ಡ್‌ ಕಾರ್ಡ್‌ ಸ್ಪರ್ಧಿ

big boss tamil

big boss tamil

ಚೆನ್ನೈ: ನಟ ಕಮಲ್‌ ಹಾಸನ್‌ (Kamal Hasan) ನಿರೂಪಣೆಯ ಬಿಗ್‌ಬಾಸ್‌ ತಮಿಳು ಸೀಸನ್‌ 7 (Bigg Boss Tamil 7) ಶೋ ಮುಕ್ತಾಯವಾಗಿದೆ. ಈ ಶೋ ಸುಮಾರು 105 ದಿನಗಳ ಕಾಲ ನಡೆದಿತ್ತು. ವಿಜೆ ಅರ್ಚನಾ ರವಿಚಂದ್ರನ್ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ಫಿನಾಲೆಯಲ್ಲಿ ಅರ್ಚನಾ, ಮಾಯಾ ಎಸ್. ಕೃಷ್ಣನ್, ಮಣಿ, ವಿಷ್ಣು ಮತ್ತು ದಿನೇಶ್‌ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಅರ್ಚನಾ ಬಿಗ್‌ಬಾಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಅರ್ಚನಾ

ವಿಶೇಷ ಎಂದರೆ ಅರ್ಚನಾ ರವಿಚಂದ್ರನ್ ಅವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಬಂದು ಚಾಂಪಿಯನ್‌ ಆಗುವ ಮೂಲಕ ಅವರು ಅಪರೂಪದ ಸಾಧನೆ ಮಾಡಿದ್ದಾರೆ. ತಮಿಳು ಬಿಗ್‌ಬಾಸ್‌ ಇತಿಹಾಸದಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯೊಬ್ಬರು ಚಾಂಪಿಯನ್‌ ಆಗುವುದು ಇದು ಮೊದಲ ಬಾರಿ. ಬಿಗ್‌ಬಾಸ್‌ ತಮಿಳು ಸೀಸನ್‌ 7 ಶೋ ಆರಂಭವಾಗಿ 28ನೇ ದಿನಕ್ಕೆ ಅರ್ಚನಾ ರವಿಚಂದ್ರನ್ ವೈಲ್ಡ್ ಕಾರ್ಡ್ ಮೂಲಕ ಅವಕಾಶ ಗಿಟ್ಟಿಸಿಕೊಂಡಿದ್ದರು. ಇನ್ನು ಡ್ಯಾನ್ಸರ್‌ ಮಾಯಾ ಕೃಷ್ಣನ್‌ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಮತ್ತೋರ್ವ ವೈಲ್ಡ್ ಕಾರ್ಡ್ ಎಂಟ್ರಿ ದಿನೇಶ್ ಮೂರನೇ ರನ್ನರ್ ಅಪ್ ಆಗಿದ್ದಾರೆ.

ಅರ್ಚನಾ ಚಾಂಪಿಯನ್‌ ಪಟ್ಟದ ಜತೆಗೆ 50 ಲಕ್ಷ ರೂ. ನಗದು, 15 ಲಕ್ಷ ರೂ. ಮೌಲ್ಯದ ನಿವೇಶನ ಮತ್ತು ಮಾರುತಿ ನೆಕ್ಸಾ ಗ್ರ್ಯಾಂಡ್‌ ವಿಟಾರಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅರ್ಚನಾ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇವರ ಬೆಂಬಲವೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅರ್ಚನಾ ರವಿಚಂದ್ರನ್ ಪರಿಚಯ

ಅರ್ಚನಾ ರವಿಚಂದ್ರನ್ ಮೂಲತಃ ನಿರೂಪಕಿ. ‘ರಾಜ ರಾಣಿ 2’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ನಂತರ ಒಂದಷ್ಟು ಶೋಗಳಲ್ಲಿ ಕಾಣಿಸಿಕೊಂಡ ಅರ್ಚನಾ ರವಿಚಂದ್ರನ್ ಬಳಿಕ ಬಿಗ್‌ಬಾಸ್‌ಗೆ ಆಗಮಿಸಿದ್ದರು. ಸದ್ಯ ತೆರೆಗೆ ಬರಬೇಕಿರುವ ‘ಡಿಮಾಂಟೆ ಕಾಲೋನಿ 2’ ಸಿನಿಮಾ ಮತ್ತು ‘ಅವಲ್ ಎನ್ನವಲ್’ ಎಂಬ ವೆಬ್ ಸೀರಿಸ್‌ನಲ್ಲೂ ನಟಿಸಿದ್ದಾರೆ. ಇದರ ಜತೆಗೆ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಈ ವಾರ ಬಿಗ್‌ ಬಾಸ್‌ನಲ್ಲಿ ನೋ ಎಲಿಮಿನೇಷನ್;‌ ಸಂತು-ಪಂತು ಸೇಫ್‌

Exit mobile version