Site icon Vistara News

Bipasha Basu: ಮೊದಲ ಬಾರಿ ಮಗಳ ಮುಖ ರಿವೀಲ್‌ ಮಾಡಿದ ಬಿಪಾಶಾ ಬಸು: ತಂದೆಯಂತೆ ಮಗಳು ಅಂದ್ರು ನೆಟ್ಟಿಗರು

Bipasha Basu reveal daughter Devi's face

ಬೆಂಗಳೂರು: ಬಾಲಿವುಡ್‌ ನಟಿ ಬಿಪಾಶಾ ಬಸು (Bipasha Basu) ಇದೇ ಮೊದಲ ಬಾರಿಗೆ ಮಗಳ ಫೋಟೊವನ್ನು ರಿವೀಲ್‌ ಮಾಡಿದ್ದಾರೆ. ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದು, ಸಿನಿಪ್ರಿಯರು ಹಾಗೂ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ತಂದೆ ಕರಣ್‌ ಅವರನ್ನು ಮಗಳು ಹೋಲುತ್ತಾಳೆ ಎಂದು ಕೆಲವರು ಕಾಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡ ಬಿಪಾಶಾ ಬಸುಇನ್‌ಸ್ಟಾದಲ್ಲಿ ʻಹಲೋ ವರ್ಲ್ಡ್ … ನಾನು ದೇವಿʼʼಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಪೋಸ್ಟ್‌ಗೆ ಕಾಜಲ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ, “ಮುದ್ದಾದ ಪುಟ್ಟ ಮಂಚ್ಕಿನ್, ಪುಟ್ಟ ದೇವಿಗೆ ಪ್ರೀತಿ ಮತ್ತು ಆಶೀರ್ವಾದ” ಎಂದು ಬರೆದಿದ್ದಾರೆ,. ʻʻದೇವರು ನಿಮಗೆ ಒಳ್ಳೆಯದು ಮಾಡಲಿʼʼ ಎಂದು ಸಹೋದರಿ ಮತ್ತು ಆಭರಣ ವಿನ್ಯಾಸಕಿ ಫರಾಹ್ ಖಾನ್ ಅಲಿ ಕೂಡ ಪ್ರತಿಕ್ರಿಯಿಸಿದ್ದಾರೆ. ನಟಿಯ ಅನುಯಾಯಿಗಳಲ್ಲಿ ಒಬ್ಬರು ಕಾಮೆಂಟ್‌ಗಳ ವಿಭಾಗದಲ್ಲಿʻʻ ತುಂಬಾ ಮುದ್ದಾಗಿದ್ದಾಳೆ. ಮಗಳು ತಂದೆಯಂತೆ ಕಾಣುತ್ತಿದ್ದಾಳೆʼʼಎಂದು ಕಾಮೆಂಟ್‌ ಮಾಡಿದ್ದಾರೆ.

ಬಿಪಾಶಾ ಬಸು ಪೋಸ್ಟ್‌

ಇದನ್ನೂ ಓದಿ: Bipasha Basu | ಬಿಪಾಶಾ ಬಸು ಜನುಮದಿನಕ್ಕೆ ಹಾಟ್‌ ಫೋಟೊ ಹಂಚಿಕೊಂಡ ಪತಿ ಕರಣ್ ಸಿಂಗ್ ಗ್ರೋವರ್‌

ಬಿಪಾಶಾ ಬಸು ಹೆಣ್ಣು ಮಗುವಿಗೆ ನವೆಂಬರ್‌ 12ರಂದು ಜನ್ಮ ನೀಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಅವರು ಕಳೆದ ಆಗಸ್ಟ್‌ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿ ತಿಳಿಸಿದ್ದರು. ತಮ್ಮ ಮಗಳಿಗೆ ದೇವಿಯ ಆಶೀರ್ವಾದ ಎಂದು ಕರೆಯುವ ಬಿಪಾಶಾ ಮಗಳಿಗೆ ‘ದೇವಿ’ ಎಂದೂ ನಾಮಕರಣ ಮಾಡಿದ್ದಾರೆ. ಮಗುವಿನ ಹೆಸರು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮೊದಲು ತಮ್ಮ ಪತಿ ಕರಣ್‌ ಸಿಂಗ್‌ ಗ್ರೋವರ್‌ ಜತೆ ಬೇಬಿ ಬಂಪ್‌ ಫೋಟೊ ತೆಗೆಸಿಕೊಂಡು ಅದನ್ನು ಪೋಸ್ಟ್‌ ಮಾಡಿದ್ದರು. ಫೋಟೊ ಕುರಿತು ನೆಟ್ಟಿಗರಿಂದ ಸಾಕಷ್ಟು ಚರ್ಚೆಗಳೂ ಆಗಿದ್ದವು.

Exit mobile version