Site icon Vistara News

Bipasha Basu | ಬಿಪಾಶಾ ಬಸು ಬೇಬಿ ಬಂಪ್‌ ಫೋಟೊಶೂಟ್‌ ವೈರಲ್‌!

Bipasha Basu

ಬೆಂಗಳೂರು: ಬಾಲಿವುಡ್‌ ನಟಿ ಬಿಪಾಶಾ ಬಸು (Bipasha Basu) ಬೇಬಿ ಬಂಪ್‌ ಫೋಟೊ ಶೂಟ್‌ ಮತ್ತೆ ಮಾಡಿಸಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಟಿ. ಈ ಫೋಟೊಶೂಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ಈ ಹಿಂದೆ ಬಿಪಾಶಾ ಬಸು ಅವರ ಬೇಬಿ ಬಂಪ್‌ ಫೋಟೊಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಮೆಟರ್ನಿಟಿ ಫೋಟೊಶೂಟ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಸಿಂಗ್ ಜತೆ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಗೋಲ್ಡನ್ ಕಲರ್ ಗೌನ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ ನಟಿ.

ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್‌ ಮಾಡಿದ ಗರ್ಭಿಣಿ; ಬೇಬಿ ಬಂಪ್‌ ಫೋಟೊ ಶೂಟ್‌ ವೈರಲ್‌

ಈ ಮೊದಲು ತಮ್ಮ ಪತಿ ಕರಣ್‌ ಸಿಂಗ್‌ ಗ್ರೋವರ್‌ ಜತೆ ಸುಂದರವಾದ ಫೋಟೊ ತೆಗೆಸಿಕೊಂಡು ಅದನ್ನು ಪೋಸ್ಟ್‌ ಮಾಡಿದ್ದರು. ಫೋಟೊ ಕುರಿತು ನೆಟ್ಟಿಗರಿಂದ ಸಾಕಷ್ಟು ಚರ್ಚೆಗಳೂ ಆಗಿತ್ತು. ಇನ್ನೂ ಕೆಲವು ಸಂಪ್ರದಾಯಸ್ಥರು ಬೇಬಿ ಬಂಪ್‌ನ ಚಿತ್ರ ಹಾಕುವುದು ಮಾನಗೆಟ್ಟ ಕೆಲಸ ಎಂದು ನಿಂದಿಸಿದ್ದರು. ಕೆಲವರು ತಾಯ್ತನದ ಸಂಭ್ರಮವನ್ನು ಹಂಚಿಕೊಳ್ಳುವ ರೀತಿ ಇದಲ್ಲ ಎಂದು ಕೆಲವರು ಹೇಳಿದ್ದರೆ, ಇಂಥ ಫೋಟೋಶೂಟ್‌ಗಳು ಭಾರತೀಯ ಸಂಸ್ಕೃತಿಗೆ ಮಾರಕ ಎಂದು ಹೇಳಿದ್ದರು.

ಇದನ್ನೂ ಓದಿ | Bipasha Basu | ಬೇಬಿ ಬಂಪ್ ಫೋಟೋ ಪ್ರಕಟಿಸಿದ ಬಿಪಾಶಾ, ಅಭಿಮಾನಿಗಳು ಏನೆಂದರು?

Exit mobile version