ಬೆಂಗಳೂರು: ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ (Meghana Raj) ಅವರ ಪುತ್ರ ರಾಯನ್ ರಾಜ್ ಸರ್ಜಾ ಅಕ್ಟೋಬರ್ 22ರಂದು ಎರಡನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗನ ಜನುಮದಿನದ ವಿಶೇಷ ದಿನದಂದು ರಾಯನ್ ಜತೆಗಿರುವ ಸ್ಪೆಷಲ್ ವಿಡಿಯೊ ಒಂದನ್ನು ಮೇಘನಾ ರಾಜ್ ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.
ʻನನ್ನ ಮುದ್ದು ಮಗ 2 ವರ್ಷ ಪೂರೈಸಿದ್ದಾನೆʼ ಎಂದು ಇನ್‌ಸ್ಟಾದಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೊಗೆ ಚಿರು ಹಾಗೂ ಮೇಘನಾ ಅಭಿಮಾನಿಗಳು ಮತ್ತು ಸಿನಿ ತಾರೆಯರು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ದೇವರ ಆಶೀರ್ವಾದ ಮಗ ರಾಯನ್ ಮೇಲೆ ಇರಲಿ ಎಂದು ಹರಸಿದ್ದಾರೆ.
5 ದಿನಗಳ ಹಿಂದೆ ಅಷ್ಟೇ ಪತಿ ಚಿರಂಜೀವಿ ಸರ್ಜಾ ಜನುಮದಿನ ಪ್ರಯುಕ್ತ ಇನ್‌ಸ್ಟಾ ಮೂಲಕ ಪೋಸ್ಟ್ ಹಂಚಿಕೊಂಡಿದ್ದರು. ʻನನ್ನ ಸಂತೋಷಕ್ಕೆ ಜನುಮದಿನದ ಶುಭಾಶಯ. ನಾನು ಮುಗುಳ್ನಗಲು ಕಾರಣ ಅದು ನಿನಗಾಗಿ. ನನ್ನ ಪ್ರೀತಿಯ ಪತಿ ಚಿರು. ನಾನು ನಿನ್ನನ್ನು ಪ್ರೀತಿಸುತ್ತೇನೆʼʼ ಎಂದು ಬರೆದುಕೊಂಡಿದ್ದರು.
ಮೇಘನಾ ರಾಜ್ 5 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡರು. ಚಿರಂಜೀವಿ ಜೂನ್ 7, 2020ರಂದು ನಿಧನರಾದರು. ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ.
ಇದನ್ನೂ ಓದಿ | Chiranjeevi Sarja | ʻನನ್ನ ಸಂತೋಷ ನೀನುʼ: ಚಿರು ಜನುಮದಿನಕ್ಕೆ ಮೇಘನಾ ರಾಜ್ ಭಾವುಕ ಪೋಸ್ಟ್!