Site icon Vistara News

Pathaan Film | ಮಹಾರಾಷ್ಟ್ರದಲ್ಲಿ ಹಿಂದುತ್ವವನ್ನು ಅವಮಾನಿಸುವ ಚಿತ್ರಕ್ಕೆ ಅವಕಾಶವಿಲ್ಲ: ಬಿಜೆಪಿ ಶಾಸಕ ರಾಮ್ ಕದಮ್

Pathaan Film

ಬೆಂಗಳೂರು: ಪಠಾಣ್ ಸಿನಿಮಾದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ (Pathaan Film) ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದು ಕಾರ್ಯಕರ್ತರು ನಟಿಯ ಮೇಲೆ ಮುಗಿಬಿದ್ದಿದ್ದಾರೆ. ಪಠಾಣ್‌ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಬಹಳಷ್ಟು ಜನ ಈ ನಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಸಿನಿಮಾ ಪರವಾಗಿ ಮಾತನಾಡುತ್ತಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಧ್ವನಿ ಎತ್ತಿದ ಬೆನ್ನಲೇ ಬಿಜೆಪಿ ಶಾಸಕ ರಾಮ್ ಕದಮ್ ‘ಪಠಾಣ್’ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ”ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರವನ್ನು ನಾವು ಸಹಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ರಾಮ್ ಕದಮ್ ಟ್ವೀಟ್‌ ಮೂಲಕ ʻʻಮಹಾರಾಷ್ಟ್ರದ ನೆಲದಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿಯನ್ನು ಸಹಿಸುವುದಿಲ್ಲ ಎಂಬುದು ಖಚಿತ” ಎಂದು ಬರೆದುಕೊಂಡಿದ್ದಾರೆ.

Shahrukh Khan | ʻಇದನ್ನೂ ಓದಿ | Shahrukh Khan | ʻಪಠಾಣ್‌ʼ ಸಿನಿಮಾ ಸಾಂಗ್‌ ಔಟ್‌: ಸಖತ್‌ ಹಾಟ್‌ ಆಗಿ ಮಿಂಚಿದ ದೀಪಿಕಾ ಪಡುಕೋಣೆ!

ಇನ್ನೊಂದು ಟ್ವೀಟ್‌ನಲ್ಲಿ ʻʻದೇಶದ ಅನೇಕ ಸಾಧು, ಸಂತರು, ಮಹಾತ್ಮರು, ಹಲವು ಹಿಂದು ಸಂಘಟನೆಗಳು ಮತ್ತು ಕೋಟ್ಯಂತರ ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಹಿಂದುತ್ವ ಸಿದ್ಧಾಂತದ ಸರ್ಕಾರವಿದೆ. ಹಾಗಾಗಿ, ಮಹಾರಾಷ್ಟ್ರದ ನೆಲದಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿಯನ್ನು ಸಹಿಸುವುದಿಲ್ಲʼʼಎಂದಿದ್ದಾರೆ.

ಈ ಹಿಂದೆ ಅಷ್ಟೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ʻʻದೀಪಿಕಾ ಪಡುಕೋಣೆ ಅವರ ಉಡುಪುಗಳು ಆಕ್ಷೇಪಾರ್ಹವಾಗಿದ್ದು, ಅದನ್ನು ಸರಿಪಡಿಸಬೇಕು ಅಥವಾ ಚಲನಚಿತ್ರ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹಾಡಿನಲ್ಲಿ ಧರಿಸಿರುವ ವೇಷಭೂಷಣಗಳು ತೀವ್ರ ಆಕ್ಷೇಪಾರ್ಹವಾಗಿವೆ. ಹಾಡನ್ನು ತಪ್ಪು ಉದ್ದೇಶದಿಂದ ಚಿತ್ರೀಕರಿಸಲಾಗಿದೆ. ವೇಷಭೂಷಣ ಮತ್ತು ದೃಶ್ಯಗಳನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನಿಡುವುದಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಸ್ವರಾ ಭಾಸ್ಕರ್, ಪ್ರಕಾಶ್ ರಾಜ್, ಒನೀರ್ ಮುಂತಾದ ಸೆಲೆಬ್ರಿಟಿಗಳು ದೀಪಿಕಾ ಪಡುಕೋಣೆ ಮತ್ತು ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

Exit mobile version