Site icon Vistara News

Bobby Deol: ಬಾಬಿ ಡಿಯೋಲ್ ಪಾತ್ರವನ್ನು ಮುಸಲ್ಮಾನನನ್ನಾಗಿ ಮಾಡಿದ್ದು ಏಕೆ?

Bobby Deol

ಬೆಂಗಳೂರು: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೊಸ ಸಂದರ್ಶನದಲ್ಲಿ, ತನ್ನ ಹೊಸ ಚಿತ್ರ ಅನಿಮಲ್‌ ಸಿನಿಮಾದ ಬಾಬಿ ಡಿಯೋಲ್ (Bobby Deol) ಅವರ ಅಬ್ರಾರ್ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಬ್ರಾರ್ ಸಿಖ್ ಕುಟುಂಬಕ್ಕೆ ಸೇರಿದವನಾಗಿದ್ದರೂ ಏಕೆ ಮುಸ್ಲಿಂ ಆಗಿದ್ದ ಎಂಬುದನ್ನು ಬಹಿರಂಗಪಡಿಸಿದರು. ಚಿತ್ರದಲ್ಲಿ, ಅಬ್ರಾರ್ ನಾಯಕನ (ರಣವಿಜಯ್ ಸಿಂಗ್-ರಣಬೀರ್ ಕಪೂರ್) ಸೋದರಸಂಬಂಧಿ. ಆದರೆ ಅದು ಹೇಗೆ ಅಬ್ರಾರ್ ಮುಸ್ಲಿಂ ಆದ ಎನ್ನುವುದು ವೀಕ್ಷಕರ ಪ್ರಶ್ನೆ ಆಗಿತ್ತು.

ಈ ಬಗ್ಗೆ ಸಂದೀಪ್‌ ಮಾತನಾಡಿ ʻʻಜನ ಯಾವಾಗ ಜಿರೋ ಮಟ್ಟಕ್ಕೆ ಹೋಗುತ್ತಾರೋ ಆಗ ಅವರ ಹತ್ತಿರ ಕೆಲವರು ‘ಚರ್ಚಿಗೆ ಹೋಗು, ಅಥವಾ ಬಾಬಾ ಕಡೆ ಹೋಗು, ತಾಯತ ಕೊಡುತ್ತಾರೆ ಎಂದು ಹೇಳತ್ತಾರೆ. ಜನರು ತಮ್ಮ ಧರ್ಮವನ್ನು ಬದಲಾಯಿಸುವುದನ್ನು ನಾನು ನೋಡಿದ್ದೇನೆ. ಕೊನೆಯ ಹಂತದಲ್ಲಿ, ಇದು ಹೊಸ ಜನ್ಮ ಎಂದು ಅವರು ಭಾವಿಸುತ್ತಾರೆ. ನಾವು ಬಹಳಷ್ಟು ಜನರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನೋಡುತ್ತೇವೆ. ಆದರೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದು ಕಡಿಮೆʼʼ ಎಂದರು.

ಈ ಕಲ್ಪನೆಯು ಅಬ್ರಾರ್ ಅವರನ್ನು ಹಲವು ಹೆಂಡತಿಯರನ್ನು ಹೊಂದಿರುವ ಮತ್ತು ಜಾಸ್ತಿ ಮಕ್ಕಳನ್ನು ಹೊಂದಬಲ್ಲ ವ್ಯಕ್ತಿ ಎಂದು ಚಿತ್ರಿಸಲು ಅವಕಾಶ ಮಾಡಿಕೊಟ್ಟಿತು ಎಂದು ಸಂದೀಪ್ ಹೇಳಿದರು. “ನೀವು ಇಸ್ಲಾಂನಲ್ಲಿ ಅನೇಕ ಹೆಂಡತಿಯರನ್ನು ಪಡೆಯಬಹುದು. ನಾನು ವಿವಿಧ ಮುಖಗಳನ್ನು ಹೊಂದಿರುವ ಅನೇಕ ಸೋದರ ಸಂಬಂಧಿಗಳನ್ನು ಹೊಂದಬಹುದು. ಅದೊಂದೇ ಕಾರಣ. ಮುಸಲ್ಮಾನರನ್ನು ಕೆಟ್ಟ ದೃಷ್ಟಿಯಲ್ಲಿ ತೋರಿಸುವ ಉದ್ದೇಶ ಇರಲಿಲ್ಲ,” ಎಂದು ಹೇಳಿದರು.

ಇದನ್ನೂ ಓದಿ: Bobby Deol: ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್ ರೊಮ್ಯಾಂಟಿಕ್, ವಿಲನ್‌ ಅಲ್ಲ; ಬಾಬಿ ಡಿಯೋಲ್!

ಅನಿಮಲ್‌ನಲ್ಲಿ, ಅಬ್ರಾರ್ (ಬಾಬಿ ಡಿಯೋಲ್) ತನ್ನ ತಂದೆಯ ಸಾವಿನ ನಂತರ ಮೂಕನಾಗುತ್ತಾನೆ. ತನ್ನ ಸಹೋದರನನ್ನು ಕೊಂದ ನಂತರ ಅವನು ರಣವಿಜಯ್ ವಿರುದ್ಧ ಯುದ್ಧಕ್ಕೆ ಹೋಗುತ್ತಾನೆ. ನಂತರ ಚಿತ್ರದಲ್ಲಿ, ಅವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಚಿತ್ರದ ಒಂದು ದೃಶ್ಯದಲ್ಲಿ, ಅಬ್ರಾರ್ ತನ್ನ ಸಹೋದರನ ಸಾವಿನ ಬಗ್ಗೆ ತಿಳಿದ ನಂತರ ತನ್ನ ಹೆಂಡತಿಯರ ಮೇಲೆ ತನ್ನ ಹತಾಶೆಯನ್ನು ಹೊರಹಾಕುತ್ತಾನೆ. ಈ ಚಿತ್ರದಲ್ಲಿನ ವೈವಾಹಿಕ ಅತ್ಯಾಚಾರದ ದೃಶ್ಯವು ಕೆಲವು ವಲಯಗಳಿಂದ ಟೀಕೆಗೆ ವ್ಯಕ್ತವಾಗಿತ್ತು.

ಈ ಬಗ್ಗೆ ಈ ಹಿಂದೆ ಬಾಬಿ ಡಿಯೋಲ್ ಮಾತನಾಡಿ ʻʻನಾನು ಏನನ್ನೂ ಪ್ರಚಾರ ಮಾಡಲು ಪ್ರಯತ್ನಿಸುತ್ತಿಲ್ಲ. ಹೌದು, ಇದು ಅಗತ್ಯವಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಪಾತ್ರ ಹೇಗೆ? ಈ ಮನುಷ್ಯನ ಸಾಮರ್ಥ್ಯ ಏನು, ಅವನು ಯಾವ ರೀತಿಯ ವ್ಯಕ್ತಿ ಎಂದು ತೋರಿಸಲು ಆ ದೃಶ್ಯಗಳು ಬೇಕಾಗಿದ್ದವುʼʼ ಎಂದಿದ್ದರು.

ಇತ್ತೀಚೆಗೆ ಬಿಡುಗಡೆಯಾದ ಅನಿಮಲ್‌ ಸಿನಿಮಾದಲ್ಲಿ ನಟ ಬಾಬಿ ಡಿಯೋಲ್ (Bobby Deol) ಪಾತ್ರ ನೋಡುಗರನ್ನು ಹೆಚ್ಚು ಸೆಳೆದಿದೆ. ಚಿತ್ರದಲ್ಲಿ ʻಅಬ್ರಾರ್ ಹಕ್ʼ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಬಾಬಿ ಡಿಯೋಲ್. ‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್​ ವಿಲನ್​ ಅಲ್ಲ, ಆತ ರೊಮ್ಯಾಂಟಿಕ್​’ ಎಂದು ನಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಬಾಬಿ ಡಿಯೋಲ್ ಪಾತ್ರದ ಅಬ್ರಾರ್‌ನ ಎಂಟ್ರಿ ಸಾಂಗ್‌ ʻಜಮಾಲ್ ಕುಡುʼ ಸಾಕಷ್ಟು ಸದ್ದು ಮಾಡಿತ್ತು.

ಇದನ್ನೂ ಓದಿ: Bobby Deol: ಜನರ ಬಹು ಬೇಡಿಕೆಯ ಬಾಬಿ ಡಿಯೋಲ್ ಎಂಟ್ರಿ ಸಾಂಗ್‌ ʻಜಮಾಲ್ ಕುಡುʼ ಔಟ್‌!

ಜಮಾಲ್ ಕುಡು ಅನ್ನೋದು ಒಂದು ಇರಾನಿಯನ್‌ ಹಾಡಾಗಿದೆ. ಇದನ್ನು ಈ ಚಿತ್ರಕ್ಕೆ ಮರು ಬಳಕೆ ಮಾಡಲಾಗಿದೆ. ಹರ್ಷರ್ಧನ್ ರಾಮೇಶ್ವರನ್ ಇದನ್ನ ಮರುಸೃಷ್ಟಿಸಿದ್ದಾರೆ. ರಣಬೀರ್ ಜತೆಗೆ ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.ʼಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ.

Exit mobile version