Site icon Vistara News

Shahnawaz Pradhan Dies: ಬಾಲಿವುಡ್​ ನಟ ಶಹನವಾಜ್ ಪ್ರಧಾನ್ ಹೃದಯಾಘಾತದಿಂದ ನಿಧನ

Bollywood Actor Shahnawaz Pradhan Dies

#image_title

ಮುಂಬಯಿ: ಖ್ಯಾತ ಬಾಲಿವುಡ್ ನಟ ಶಹನವಾಜ್ ಪ್ರಧಾನ್ ಅವರು ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ (Shahnawaz Pradhan Dies). 56 ವರ್ಷದ ಅವರಿಗೆ ಮುಂಬಯಿಯಲ್ಲಿ ಹೃದಯಾಘಾತವಾಗಿದೆ. ಶಹನವಾಜ್​ ಪ್ರಧಾನ್​ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅವರ ನಾಡಿ ಬಡಿತ ನಿಂತಿತ್ತು. ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. Aero India 2023 : ಯುದ್ಧ ವಿಮಾನದಲ್ಲಿದ್ದ ಹನುಮಾನ್‌ ಚಿತ್ರವನ್ನು ತೆಗೆದು ಹಾಕಿದ ಎಚ್‌ಎಎಲ್, ಮುಖ್ಯಸ್ಥರು ಹೇಳಿದ್ದೇನು?

ಅಂದಹಾಗೇ, ಶಹನವಾಜ್ ಪ್ರಧಾನ್ ಅವರಿಗೆ ಈಗೊಂದು ಎರಡು ತಿಂಗಳ ಹಿಂದಷ್ಟೇ ಹೃದಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಆಗಿತ್ತು ಎನ್ನಲಾಗಿದೆ.

ಶಹನವಾಜ್ ಪ್ರಧಾನ್ ಅವರು 1992ರಲ್ಲಿ ಮೊದಲ ಬಾರಿಗೆ ತಮ್ಮ ಬಣ್ಣದ ಬದುಕು ಶುರು ಮಾಡಿದ್ದರು. ಮಿರ್ಜಾಪುರ ಟಿವಿ ಶೋ ಮೂಲಕ ಖ್ಯಾತನಾಮರಾಗಿದ್ದರು. ಲವ್‌ಶುದಾ (2016), ಫ್ಯಾಂಟಮ್ (2015), ಚಲ್ ಪಿಚ್ಚೂರ್ ಬನಾತೆ ಹೈ (2012) ಮತ್ತಿತರ ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: Kajol Devgan: ಇಲ್ಲಿವೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಕಾಜೋಲ್ ಅವರ ಲೇಟೆಸ್ಟ್‌ ಬ್ಲಿಂಗಿ ಸೀರೆ ಫೋಟೊಗಳು

Exit mobile version