ಬೆಂಗಳೂರು : ಬಾಲಿವುಡ್ ನಟಿ ಬಿಪಾಶಾ ಬಸು (Bipasha Basu) ಹೆಣ್ಣು ಮಗುವಿಗೆ ನವೆಂಬರ್ 12 ಶನಿವಾರ ಜನ್ಮ ನೀಡಿದ್ದಾರೆ. ಬೇಬಿ ಬಂಪ್ ಫೋಟೊ ಶೂಟ್ ಮೂಲಕ ಸಂಭ್ರಮದಲ್ಲಿ ಇದ್ದ ನಟಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಬಿಪಾಶಾ ಬಸು ಅವರಿಗೆ ಹೆಣ್ಣು ಮಗು ಎಂದು ತಿಳಿಯುತ್ತಿದ್ದಂತೆ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಇನ್ನೂ ಕೆಲವರು ನೀವು ಬಯಸಿದಂತೆ ಹೆಣ್ಣು ಮಗುವಾಗಿದೆ ಎಂದು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಅವರು ಕಳೆದ ಆಗಸ್ಟ್ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿ ತಿಳಿಸಿದ್ದರು.
ಇದನ್ನೂ ಓದಿ | Bipasha Basu | ಬೇಬಿ ಬಂಪ್ ಫೋಟೋ ಪ್ರಕಟಿಸಿದ ಬಿಪಾಶಾ, ಅಭಿಮಾನಿಗಳು ಏನೆಂದರು?
ಈ ಮೊದಲು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಜತೆ ಬೇಬಿ ಬಂಪ್ ಫೋಟೊ ತೆಗೆಸಿಕೊಂಡು ಅದನ್ನು ಪೋಸ್ಟ್ ಮಾಡಿದ್ದರು. ಫೋಟೊ ಕುರಿತು ನೆಟ್ಟಿಗರಿಂದ ಸಾಕಷ್ಟು ಚರ್ಚೆಗಳೂ ಆಗಿದ್ದವು. ಇನ್ನೂ ಕೆಲವು ಸಂಪ್ರದಾಯಸ್ಥರು ಬೇಬಿ ಬಂಪ್ನ ಚಿತ್ರ ಹಾಕುವುದು ಮಾನಗೆಟ್ಟ ಕೆಲಸ ಎಂದು ನಿಂದಿಸಿದ್ದರು. ಕೆಲವರು ತಾಯ್ತನದ ಸಂಭ್ರಮವನ್ನು ಹಂಚಿಕೊಳ್ಳುವ ರೀತಿ ಇದಲ್ಲ ಎಂದು ಕೆಲವರು ಹೇಳಿದ್ದರೆ, ಇಂಥ ಫೋಟೊ ಶೂಟ್ಗಳು ಭಾರತೀಯ ಸಂಸ್ಕೃತಿಗೆ ಮಾರಕ ಎಂದು ಹೇಳಿದ್ದರು.
ಇದನ್ನೂ ಓದಿ | Bipasha Basu | ಬಿಪಾಶಾ ಬಸು ಬೇಬಿ ಬಂಪ್ ಫೋಟೊಶೂಟ್ ವೈರಲ್!