Site icon Vistara News

Kajol Birthday | ಸ್ಪೆಷಲ್‌ ಕ್ಯಾಪ್ಷನ್‌ ಮೂಲಕ ವಿಶ್‌ ಮಾಡಿದ ಅಜಯ್‌ ದೇವಗನ್‌

Kajol Birthday

ಬೆಂಗಳೂರು : ಬಾಲಿವುಡ್‌ ನಟಿ ಕಾಜೋಲ್‌ಗೆ (Kajol Birthday) ಇಂದು (ಆ.5) ಜನುಮದಿನದ ಸಂಭ್ರಮ. ದುಂಡು ಕಣ್ಣುಗಳ ಸುಂದರಿ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಪತಿ ಅಜಯ್‌ ದೇವಗನ್‌ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ. ಅಜಯ್‌ ದೇವಗನ್‌ ಇನ್ಸ್ಟಾದಲ್ಲಿ ಕಾಜೋಲ್‌ ಅವರ ವಿಡಿಯೊ ಶೇರ್‌ ಮಾಡಿ ಡಿಫರೆಂಟ್‌ ಕ್ಯಾಪ್ಷನ್‌ ಮೂಲಕ ವಿಶ್‌ ಮಾಡಿದ್ದಾರೆ.

ಕಾಜೋಲ್ ಮೊಬೈಲ್‌ಗೆ ಕರೆ ಮಾಡಿದಾಗ ಕೂಡಲೇ ಎತ್ತುತ್ತಿರುವ ಕ್ಲಿಪ್ ಒಂದನ್ನು ಹಂಚಿಕೊಂಡಿರುವ ಅವರು, ʻʻಅವಳು ಕರೆ ಮಾಡಿದಾಗ, ನಾನು ಯಾವತ್ತೂ ಪಿಕ್‌ ಮಾಡದೇ ಇರುವುದಿಲ್ಲ. ಜನ್ಮದಿನದ ಶುಭಾಶಯಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kajol | ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟಿ ಕಾಜೋಲ್‌: ಅಜಯ್‌ ದೇವಗನ್‌ ಹೇಳಿದ್ದೇನು?

ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ನಟಿ ಕಾಜೋಲ್‌ (Kajol) ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಇತ್ತೀಚೆಗೆ ತಮ್ಮ ಈ ಜರ್ನಿಯ ವಿಶೇಷ ದಿನವನ್ನು ಗುರುತಿಸಿ, ಸಂತಸ ಹಂಚಿಕೊಂಡಿದ್ದರು. ಆಗ ಪತಿ ಅಜಯ್ ದೇವಗನ್ ಕೂಡ ಪೋಸ್ಟ್‌ ಹಂಚಿಕೊಂಡು ಶುಭಾಶಯ ಕೋರಿದ್ದರು.

ಇದೀಗ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಕಾಜೋಲ್‌ ಅವರ ವೆಬ್‌ ಸರಣಿ ಪ್ರಸಾರ ಆಗಲಿದೆ. ಜುಲೈ 11 ಶೂಟಿಂಗ್‌ ಪ್ರಾರಂಭಗೊಂಡಿದ್ದು, ಪ್ರತಿ ಎಪಿಸೋಡ್‌ಗೆ ಕಾಜೋಲ್‌ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡ ಅಜಯ್‌ ದೇವಗನ್‌, ಸೂರ್ಯ

Exit mobile version