ಮುಂಬೈ: ಬಾಲಿವುಡ್‌ನಲ್ಲಿ ನಟಿಯರ ದಂಡು ದೊಡ್ಡದಿದೆ. ತಮನ್ನಾ ಭಾಟಿಯಾರಿಂದ ಹಿಡಿದು ಆಲಿಯಾ ಭಟ್‌ವರೆಗೆ ಹತ್ತಾರು ನಟಿಯರು ತೆರೆ ಮೇಲೆ ಮಿಂಚಿ ಅಭಿಮಾನಿಗಳನ್ನು ಮನರಂಜಿಸುತ್ತಿದ್ದಾರೆ. ಅವರಲ್ಲಿ ಕೆಲವು ನಟಿಯರು ಸಿನಿಮಾ ನಿರ್ಮಾಣಕ್ಕೂ ಬಂಡವಾಳ ಹಾಕುವ ಧೈರ್ಯ ಮಾಡಿದ್ದಾರೆ. ತಮ್ಮದೇ ಆದ ಪ್ರೊಡಕ್ಷನ್ ಹೌಸ್ ರಚಿಸಿಕೊಂಡು ನಿರ್ದೇಶನ ಕೆಲಸಕ್ಕೂ ಇಳಿದಿದ್ದಾರೆ. ಅಂತಹ ಕೆಲವು ನಟಿಯರ ಬಗ್ಗೆ ಇಲ್ಲಿದೆ (Bollywood News) ವಿವರ.
ಕೃತಿ ಸನೋನ್
ನಿರ್ದೇಶಕರ ಸಾಲಿಗೆ ಇತ್ತೀಚೆಗೆ ಸೇರಿಕೊಂಡ ನಟಿಯೆಂದರೆ ಕೃತಿ ಸನೋನ್. ಅವರು ಮಂಗಳವಾರ ತಾನೆ ತಮ್ಮ ಪ್ರೊಡಕ್ಷನ್ ಹೌಸ್ ಬಗ್ಗೆ ವಿವರ ಹಂಚಿಕೊಂಡಿದ್ದಾರೆ. ಬ್ಲೂ ಬಟರ್‌ಫ್ಲೈ ಫಿಲ್ಮ್ಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಅದಕ್ಕೆ ಅವರ ಸಹೋದರಿ ಮತ್ತು ನಟಿ ನೂಪುರ್ ಸನೋನ್ ಕೂಡ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: Viral News: ಪ್ರೀತಿಗೆಲ್ಲಿ ಗಡಿ? ಪ್ರಿಯಕರನ ಅರಸಿ 4 ಮಕ್ಕಳ ಜತೆ ಪಾಕ್‌ನಿಂದ ಭಾರತಕ್ಕೆ ಬಂದ ಮಹಿಳೆ, ಮುಂದೇನಾಯ್ತು?
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ 2020ರಲ್ಲಿ ನಿರ್ಮಾಪಕಿಯಾಗಿ ಹೊರಹೊಮ್ಮಿದರು. ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ ʼಛಪಾಕ್ʼ ಸಿನಿಮಾವನ್ನು ಅವರು ಫಾಕ್ಸ್ ಸ್ಟುಡಿಯೋಸ್‌ನೊಂದಿಗೆ ಸಹ ನಿರ್ಮಾಣ ಮಾಡಿದರು. ಆ ಸಿನಿಮಾವನ್ನು ಮೇಘನಾ ಗುಲ್ಜಾರ್ ಅವರು ನಿರ್ದೇಶಿಸಿದ್ದರು. ಅದರ ನಂತರ ದೀಪಿಕಾ ಅವರು ತಮ್ಮ “ಕಾ ಪ್ರೊಡಕ್ಷನ್ಸ್ʼ ಬ್ಯಾನರ್‌ನಲ್ಲಿ ʼ83′ ಸಿನಿಮಾವನ್ನೂ ಸಹ ನಿರ್ಮಾಣ ಮಾಡಿದರು.
ಅನುಷ್ಕಾ ಶರ್ಮಾ
ಬಾಲಿವುಡ್ ನಟಿಯರ ಪೈಕಿ ಇತ್ತೀಚಿನ ದಿನಗಳಲ್ಲಿ ಮೊದಲಿಗೆ ನಿರ್ದೇಶನಕ್ಕೆ ಕೈ ಹಾಕಿದವರು ಅನುಷ್ಕಾ ಶರ್ಮಾ. ಅವರು 2015ರಲ್ಲಿ ಸಹೋದರ ಕರ್ಣೇಶ್ ಶರ್ಮಾ ಅವರೊಂದಿಗೆ ಸೇರಿಕೊಂಡು ಕ್ಲೀನ್ ಸ್ಲೇಟ್ ಫಿಲ್ಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಆ ವರ್ಷ ಅವರು NH10 ಸಿನಿಮಾ ನಿರ್ಮಾಣ ಮಾಡಿದರು. ನಂತರ 2017ರಲ್ಲಿ ಫಿಲೌರಿ ಮತ್ತು 2018ರಲ್ಲಿ ಪರಿ ಸಿನಿಮಾವನ್ನು ನಿರ್ಮಾಣ ಮಾಡಿದರು. ಈ ಎಲ್ಲ ಸಿನಿಮಾಗಳಲ್ಲಿ ಅನುಷ್ಕಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ 2020ರಲ್ಲಿ ಬುಲ್ಬುಲ್, 2022ರಲ್ಲಿ ಕಾಲಾ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ಗೆ ನಿರ್ಮಿಸಿಕೊಟ್ಟರು. ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ʼಪಾತಾಳ್ ಲೋಕ್ʼ ಕೂಡ ಅವರೇ ನಿರ್ಮಾಣ ಮಾಡಿದ ವೆಬ್ ಸಿರೀಸ್. ಹಾಗೆಯೇ ನೆಟ್‌ಫ್ಲಿಕ್ಸ್‌ನ ʼಮೈʼ ಕೂಡ ಅದೇ ಬ್ಯಾನರ್‌ನಲ್ಲಿ ನಿರ್ಮಾಣವಾದ ಸಿನಿಮಾ.
ಇದನ್ನೂ ಓದಿ: Viral News: ವಯಸ್ಸು 27, ಇರೋದು 4 ಸಾವಿರ ಕೋಟಿ ರೂ. ಮನೆಯಲ್ಲಿ; ಅಂದಹಾಗೆ ಈತ ಬಿಜೆಪಿ ಮಿನಿಸ್ಟರ್ ಪುತ್ರ
ಆಲಿಯಾ ಭಟ್
ನಟಿ ಆಲಿಯಾ ಭಟ್ ಕೂಡ ಕಳೆದ ವರ್ಷದಿಂದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ʼಡಾರ್ಲಿಂಗ್ಸ್ʼ ಸಿನಿಮಾವನ್ನು ಆಲಿಯಾ ಅವರು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ ನಿರ್ಮಾಣ ಮಾಡಿದರು. ತಮ್ಮ ನಿರ್ಮಾಣ ಸಂಸ್ಥೆಗೆ ಅವರು ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಎಂದು ಹೆಸರು ಕೊಟ್ಟುಕೊಂಡಿದ್ದಾರೆ. ಈ ಸಂಸ್ಥೆ ಮೂಲಕ ಇನ್ನಷ್ಟು ಸಿನಿಮಾ ನಿರ್ಮಿಸುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅವರು 2016ರಲ್ಲಿ ತಾಯಿ ಮಧು ಚೋಪ್ರಾ ಅವರೊಂದಿಗೆ ಸೇರಿಕೊಂಡು ಪರ್ಪಲ್ ಪೆಬೆಲ್ ಪಿಕ್ಚರ್ಸ್ ಹೆಸರಿನ ಪ್ರೊಡಕ್ಷನ್ ಹೌಸ್ ಆರಂಭಿಸಿದರು. ಅದರಲ್ಲಿ ಮರಾಠಿಯ ʼವೆಂಟಿಲೇಟರ್ʼ(2016), ನೇಪಾಳಿಯ ʼಪಹುನಾ: ದಿ ಲಿಟ್ಲ್ ವಿಸಿಟರ್ಸ್ʼ(2018), ಮರಾಠಿಯ ಫೈರ್‌ಬ್ರ್ಯಾಂಡ್ (2019), ಪಾನಿ (2019) ಸಿನಿಮಾವನ್ನು ನಿರ್ಮಾಣ ಮಾಡಿದರು. ಹಿಂದಿಯ ʼದಿ ಸ್ಕೈ ಈಸ್ ಪಿಂಕ್ʼ ಮತ್ತು ಇಂಗ್ಲಿಷ್‌ನ ʼದಿ ವೈಟ್ ಟೈಗರ್ʼ ಸಿನಿಮಾವನ್ನು ಅವರು ಸಹ ನಿರ್ಮಾಣ ಮಾಡಿದರು.
ಕಂಗನಾ ರಣಾವತ್
ಕಂಗನಾ ರಣಾವತ್ ಕೂಡ ಇತ್ತೀಚೆಗೆ ನಿರ್ಮಾಪಕಿಯಾಗಿ ಹೊರಹೊಮ್ಮಿದ ನಾಯಕಿಯಾಗಿದ್ದಾರೆ. ಅವರು ತಮ್ಮ ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್‌ನಲ್ಲಿ ʼಟಿಕು ವೆಡ್ಸ್ ಶೇರುʼ ಸಿನಿಮಾವನ್ನು ನಿರ್ಮಾಣ ಮಾಡಿದರು. ಅದು ಅಮೆಜಾನ್ ಪ್ರೈಮ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಗೆಯೇ ಸದ್ಯ ಇವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತಾದ ಕಥೆಯಾದ ʼಎಮರ್ಜೆನ್ಸಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲಿ ಅವರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.