Site icon Vistara News

Heeraben Modi | ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಸಂತಾಪ

Heeraben Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (Heeraben Modi) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀರಾಬೆನ್ ಅವರು ನರೇಂದ್ರ ಮೋದಿ ಅವರಿಗೆ ಕೈತುತ್ತು ತಿನ್ನಿಸುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ನಟಿ ಕಂಗನಾ ರಣಾವತ್, ಅಕ್ಷಯ್ ಕುಮಾರ್, ಪ್ರಕಾಶ್ ರಾಜ್, ಅಜಯ್ ದೇವಗನ್, ಅನುಪಮ್ ಖೇರ್ ಸೇರಿದಂತೆ ಅನೇಕ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮೂಲಕ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಕಂಗನಾ ರಣಾವತ್ ಪೋಸ್ಟ್‌ ಶೇರ್‌ ಮಾಡಿ ʻʻಇಂಥಯ ಕಠಿಣ ಸಮಯದಲ್ಲಿ ನರೇಂದ್ರ ಮೋದಿ ಅವರಿಗೆ ದೇವರು ತಾಳ್ಮೆ ಮತ್ತು ಶಾಂತಿ ನೀಡಲಿ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಟ್ವೀಟ್‌ ಮೂಲಕ “ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖವಿಲ್ಲ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿʼʼಎಂದು ಬರೆದುಕೊಂಡಿದ್ದಾರೆ. ಅಜಯ್ ದೇವಗನ್ ಕೂಡ ಟ್ವೀಟ್ ಮಾಡಿದ್ದಾರೆ, “ ಅವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಹೀರಾಬೆನ್ ಅವರು ಸರಳ, ತತ್ವದ ಮಹಿಳೆ. ಮೋದಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ನನ್ನ ಸಂತಾಪಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Heeraben Modi | ಪಿಎಂ ನರೇಂದ್ರ ಮೋದಿ ತಾಯಿ ನಿಧನಕ್ಕೆ ರಾಹುಲ್, ಪ್ರಿಯಾಂಕಾ ಕಂಬನಿ

ಬಾಲಿವುಡ್‌ ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದು ʻʻಹೀರಾಬಾ ಜೀ ಅವರ ನಿಧನದ ಸುದ್ದಿ ಕೇಳಿ ನಾನು ದುಃಖಿತನಾಗಿದ್ದೇನೆ ಮತ್ತು ಭಾವುಕನಾಗಿದ್ದೇನೆ. ಅವರ ಮೇಲಿನ ನಿಮ್ಮ ಪ್ರೀತಿ ಮತ್ತು ಗೌರವವು ಜಗತ್ತಿನಲ್ಲಿ ಎದ್ದು ಕಾಣುತ್ತಿದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲʼʼಎಂದು ಬರೆದುಕೊಂಡಿದ್ದಾರೆ.

ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್‌ ಮಾಡಿದ್ದು ʻʻನರೇಂದ್ರ ಮೋದಿ ಅವರ ಪ್ರೀತಿಯ ‘ಮಾ’ ಅವರ ನಿಧನಕ್ಕೆ ನನ್ನ ಸಂತಾಪಗಳು. ಭಾರತಮಾತೆಯ ಮಗನ ತಾಯಿಯ ಕರ್ಮಯೋಗಿ ಜೀವನವು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಿಮಗೆ 100 ನಮಸ್ಕಾರಗಳುʼʼಎಂದು ಬರೆದುಕೊಂಡಿದ್ದಾರೆ.

ಸೋನು ಸೂದ್‌ ಟ್ವೀಟ್‌ ಮಾಡಿ ʻʻನಿಮ್ಮ ತಾಯಿ ನಿಮ್ಮೊಂದಿಗೆ ಇರುತ್ತಾರೆ. ಎಲ್ಲಿಯೂ ಹೋಗುವುದಿಲ್ಲ. ತನ್ನ ಮಗ ಇತರರಿಗೆ ಒಳ್ಳೆಯದನ್ನು ಮಾಡಬೇಕೆಂದು ಅನೇಕ ಬಾರಿ ದೇವರ ಪಾದದ ಬಳಿ ಕುಳಿತುಕೊಳ್ಳುತ್ತಾರೆ. ನಿಮ್ಮ ತಾಯಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ ”ಎಂದು ಬರೆದುಕೊಂಡಿದ್ದಾರೆ.

ಗಾಯಕ ಕೈಲಾಶ್ ಖೇರ್ ಅವರು ಮೋದಿ ಅವರು ತಾಯಿ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿ ʻʻನರೇಂದ್ರ ಮೋದಿ ಜಿ ಅವರ ಕಿರಿಯ ಸಹೋದರ ಪಂಕಜ್ ಜಿ ಅವರೊಂದಿಗೆ ನಾವು ಈ ಹಿಂದೆ ಮಾತನಾಡಿದ್ದೇವು. ಗಾಂಧಿನಗರಕ್ಕೆ ಬಂದಾಗಲೆಲ್ಲ ಸಮಯ ಮಾಡಿಕೊಂಡು ಮೋದಿ ಅವರ ತಾಯಿಯನ್ನು ಭೇಟಿಯಾಗುತ್ತೇವೆ ಎಂದು. ಅಂತಹ ದೈವಿಕ ವಿಭೂತಿಯಿಂದ ಅವರ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆಯುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ. ಸ್ವರಾ ಭಾಸ್ಕರ್, ಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್ ಸೇರಿದಂತೆ ಹಲವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | Heeraben Modi | ಪ್ರಧಾನಿ ನರೇಂದ್ರ ಮೋದಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಜಾಗತಿಕ ಪ್ರಮುಖರು

Exit mobile version