Site icon Vistara News

Kannada New Movie: ಡ್ಯಾಡ್ ಟೀಸರ್‌ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ!

Bollywood Director Subhash Ghai Fida for Dad Teaser

ಬೆಂಗಳೂರು: ಒಮ್ಮೊಮ್ಮೆ ಸುಳಿವೇ ಇರದಂತೆ ಕೆಲ ಸಿನಿಮಾಗಳು (Kannada New Movie) ಪ್ರೇಕ್ಷಕರನ್ನು ಸಂಪೂರ್ಣವಾಗಿ ಸೆಳೆದು ಬಿಡುವುದಿದೆ. ಇದೀಗ ಬಿಡುಗಡೆಗೊಂಡಿರುವ ʻಡ್ಯಾಡ್ʼ ಎಂಬ ಚಿತ್ರದ ಟೀಸರ್ ಕೂಡಾ ನೋಡುಗರನ್ನು ಅದೇ ತೆರನಾಗಿ ಚಕಿತಗೊಳಿಸಿದೆ. ಈ ಸಿನಿಮಾದಲ್ಲಿ ಗಹನವಾದುದೇನೋ ಕಥೆಯಿದೆ ಎಂಬ ಭಾವನೆ ಸರ್ವರನ್ನೂ ಆವರಿಸಿಕೊಂಡಿದೆ. ಇಂಥಾದ್ದೊಂದು ಟೀಸರ್ ಸದ್ದಿಲ್ಲದೆ ಪ್ರೇಕ್ಷಕರ ಮುಂದಿಟ್ಟಿರೋದು ಹೊಸಬರ ತಂಡ ಎಂಬುದು ನಿಜಕ್ಕೂ ವಿಶೇಷ. ಗಮನೀಯ ಅಂಶವೆಂದರೆ, ಈ ಟೀಸರ್ ಈಗ ರಾಜ್ಯ ಗಡಿ ದಾಟಿ, ಎಲ್ಲೆಡೆ ಪಸರಿಸಿದೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಸುಭಾಶ್ ಘಾಯ್ ಫಿದಾ ಆಗಿದ್ದಾರೆ. ಡ್ಯಾಡ್ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದಹಾಗೆ, ದೇವರಾಜ್ ಅಲಿಯಾಸ್ ದೇವಿಡ್ ಎಂಬುದು ಡ್ಯಾಡ್ ಎಂಬುದರ ವಿಸ್ತೃತ ರೂಪವಂತೆ. ಕೇವಲ ಡ್ಯಾಡ್ ಎಂಬ ಪದವೂ ಕೂಡ ಸಿನಿಮಾ ಕಂಟೆಂಟಿಗೆ ಅನ್ವರ್ಥವಾಗಿದೆಯಂತೆ. ಈ ಬಗ್ಗೆ ಸದರಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಕೃಷ್ಣ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ʻʻಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಎರಡು ಮುಖಗಳಿರುತ್ತವೆ. ಹೆಚ್ಚಾಗಿ ಈ ಸಮಾಜದೆದುರು ಒಂದು ಮುಖ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಆದರೆ ಓರ್ವ ಸಾಮಾನ್ಯ ಮನುಷ್ಯನನ್ನು ಪದೇಪದೆ ಕಷ್ಟಗಳು ಮುತ್ತಿಕೊಂಡರೆ, ದುಷ್ಟ ಶಕ್ತಿಗಳು ಕಾಡಿದರೆ, ನ್ಯಾಯವೆಂಬುದು ಮರೀಚಿಕೆಯಾದರೆ, ತಂತಾನೇ ಎರಡನೇ ಮುಖದ ಅನಾವರಣಗೊಳ್ಳುತ್ತದೆ. ಇಂಥ ಧಾಟಿಯ ಕಥೆ ಹೊಂದಿರೋ ಡ್ಯಾಡ್ ಸಂಪೂರ್ಣ ಭಿನ್ನವಾಗಿದೆ ಎಂಬುದಕ್ಕೆ ಈ ಟೀಸರ್ ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಇದು ಪಕ್ಕಾ ಕಮರ್ಶಿಯಲ್ ಬಗೆಯ ಚಿತ್ರ. ಆದರೆ ರಿಯಲಿಸ್ಟಿಕ್ ಮೇಕಿಂಗಿನತ್ತ ಹೆಚ್ಚು ಒತ್ತು ಕೊಡಲಾಗಿದೆʼʼಎಂದರು.

ಇದನ್ನೂ ಓದಿ: Kannada New Movie: ಹಳ್ಳಿ ಸೊಗಡಿನ ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ ‘ರಾಜಹಂಸ’ ಹೀರೊ

ಇದನ್ನೂ ಓದಿ: Kannada New Movie: ಹಳ್ಳಿ ಸೊಗಡಿನ ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ ‘ರಾಜಹಂಸ’ ಹೀರೊ

ಎಂಬಿಎ ಮುಗಿಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅರ್ಜುನ್ ಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕುಂದಾಪುರ ಮೂಲದ ವಿಶಾಲ್ ರಾಘವ್ ನಾಯಕನಾಗಿ ನಟಿಸಿದ್ದರೆ, ನೃತ್ಯ ಬೋಪಣ್ಣ ಮತ್ತು ಮಾಹಿಕಾ ಮಹಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಡ್ಯಾಡ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕೂಡ ಅಂತಿಮ ಹಂತದಲ್ಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಮೂರು ಹಾಡುಗಳೂ ಕೂಡ ಕೇಳುಗರನ್ನು ಸೆಳೆದಿವೆ. ನಟನಾ ಮಂಜು ಕೂಡಾ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಹೆಚ್ಚೂ ಕಮ್ಮಿ ಹೊಸಬರಿಗೇ ತಾರಾಗಳದಲ್ಲಿ ಪ್ರಧಾನ್ಯತೆ ಕೊಡಲಾಗಿದೆ. ಸುಚೇಂದ್ರ ಪ್ರಸಾದ್, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರೂ ಡ್ಯಾಡ್ ಚಿತ್ರದ ಬಹುಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಶಿವಹರಿ ವರ್ಮಾ ಹಿನ್ನೆಲೆ ಸಂಗೀತ, ಮುಂಬೈ ಮೂಲದ ಆಕಾಶ್ ಸೇಠ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಅನಿಲ್ ಕುಮಾರ್ ಕೆ ನಿಭಾಯಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಅನಿಲ್ ವಿಎಫ್ ಎಕ್ಸ್, ಪೋಸ್ಟರ್ ಡಿಸೈನ್ ಮಾಡುವ ಮೂಲಕ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ

Exit mobile version