ಮುಂಬೈ: ಬಾಲಿವುಡ್ (Huma Qureshi) ನಟಿ ಹುಮಾ ಖುರೇಷಿ ಅವರಿಗೆ ಬಾಲಿವುಡ್ನಲ್ಲಿ ಒಂದೊಳ್ಳೆ ಫೇಮ್ ತಂದುಕೊಟ್ಟಂತ ಸಿನಿಮಾವೆಂದರೆ ಅದು ಗ್ಯಾಂಗ್ಸ್ ಆಫ್ ವಾಸೆಪುರ್. ಅನುರಾಗ್ ಕಶ್ಯಪ್ ಅವರ ನಿರ್ದೇಶನದಲ್ಲಿ ಬಂದಂತಹ ಸಿನಿಮಾ ಮೂಲಕವಾಗಿ ನಟಿ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಆದರೆ ಇದೀಗ ಅದೇ ಹುಮಾ ಅವರು ತಮಗೆ ಫೇಮ್ ತಂದುಕೊಟ್ಟ ನಿರ್ದೇಶಕ ಅನುರಾಗ್ ಅವರ ವಿರುದ್ಧವೇ ಮೊಕದ್ದಮೆ ಹೂಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: RRR Movie | ಆರ್ಆರ್ಆರ್ ಬಾಲಿವುಡ್ ಸಿನಿಮಾವಲ್ಲ: ನಿರ್ದೇಶಕ ರಾಜಮೌಳಿ
ಈ ವಿಚಾರವಾಗಿ ಹುಮಾ ಇತ್ತೀಚೆಗೆ ತಮ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದರು. ಅನುರಾಗ್ ಕಶ್ಯಪ್ ಅವರ ಮುಂದಿನ ಸಿನಿಮಾವಾದ ʼಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಮದ್ʼನಲ್ಲಿ ಹುಮಾ ಅವರ ಸಿನಿಮಾದ ಹಾಡೊಂದನ್ನು ಬಳಸಲಾಗಿದೆಯಂತೆ. ಹಾಗಾಗಿ ಅನುರಾಗ್ ಅವರ ಸಿನಿಮಾದ ವಿಡಿಯೊ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದ ನಟಿ, “ನನ್ನ ಹಾಡನ್ನು ಕದ್ದಿರುವ ಕಾರಣ ನಾನು ಅನುರಾಗ್ ಕಶ್ಯಪ್ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ವಿರುದ್ಧ ಮೊಕದ್ದಮೆ ಹೂಡಲಿದ್ದೇನೆ” ಎಂದು ಬರೆದುಕೊಂಡಿದ್ದರು.
ಈ ಸ್ಟೋರಿಯನ್ನು ಅನುರಾಗ್ ಕೂಡ ಹಂಚಿಕೊಂಡಿದ್ದಾರೆ. ಅದರ ಜತೆ “ಹಹಹ, ಅದನ್ನು ಎಂದಿಗೂ ಬಿಡುಗಡೆ ಮಾಡುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಮುಂಬರುವ ಸಿನಿಮಾದ ಬಗ್ಗೆ ಮಾತನಾಡಿದ್ದ ಅನುರಾಗ್ ಅವರು, “ಯುವ ನಟ ನಟಿಯರನ್ನು ಹಾಕಿಕೊಂಡು ಮಾಡಿರುವ ಒಂದು ಅದ್ಭುತ ಪ್ರೇಮ ಕಥೆಯಿದು” ಎಂದು ಹೇಳಿದ್ದರು.
ಇದನ್ನೂ ಓದಿ: Vijay Deverakonda | ನಟ ವಿಜಯ್ ದೇವರಕೊಂಡ ಹೊಸ ಸಿನಿಮಾ ಪೋಸ್ಟರ್ ಔಟ್!