ಮುಂಬೈ: ಬಾಲಿವುಡ್‌ನಲ್ಲಿ ತಾರೆಗಳ ಲವ್ ಸ್ಟೋರಿಗಳು (Bollywood Love) ಹೊಸದೇನಲ್ಲ. ಇದೀಗ ಸುದ್ದಿಯಲ್ಲಿರುವ ಜೋಡಿಯೆಂದರೆ ಅದು ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಹಾಗೂ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ(agastya nanda). ಈ ಜೋಡಿ ಪ್ರೀತಿಯಲ್ಲಿದೆ ಎನ್ನುವ ವದಂತಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ಅದರ ಬಗ್ಗೆ ಕೆಲವು ಮಾಹಿತಿಗಳು ಇದೀಗ ಲಭ್ಯವಾಗಿವೆ.
ಇದನ್ನೂ ಓದಿ: Shahrukh Khan | ಮಗನೇ ಹಾಗೆಲ್ಲ ಮಾತನಾಡಬಾರದು ಎಂದು ಶಾರುಖ್ ಖಡಕ್ ಉತ್ತರ ಕೊಟ್ಟಿದ್ಯಾಕೆ?
ಸೆಲೆಬ್ರಿಟಿ ಕುಟುಂದವರಾಗಿರುವ ಈ ಇಬ್ಬರೂ “ದಿ ಆರ್ಸಿಸ್” ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ಸಿನಿಮಾದ ಚಿತ್ರೀಕರಣದ ವೇಳೆ ಇವರಿಬ್ಬರ ಸ್ನೇಹ ಗಟ್ಟಿಯಾಗಿದ್ದಾಗಿ ವರದಿಯಿದೆ. ಈ ಬಗ್ಗೆ ಬಾಲಿವುಡ್‌ನಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ ಹಾಗೂ ಅಗಸ್ತ್ಯ ಮತ್ತು ಸುಹಾನಾ ಕೂಡ ಎಲ್ಲರೆದುರು ಈ ಬಗ್ಗೆ ಧೈರ್ಯವಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಅಗಸ್ತ್ಯ ಅವರ ತಾಯಿ, ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಅವರಿಗೆ ಸುಹಾನಾ ಕಂಡರೆ ಎಲ್ಲಿಲ್ಲದ ಪ್ರೀತಿಯಂತೆ. ಹಾಗಾಗಿ ಆಕೆಯೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಕ್ಕೆ ಮಗನಿಗೆ ಅನುಮತಿ ನೀಡಿದ್ದಾರೆ ಎಂದಿವೆ ಮೂಲಗಳು.
ಇದನ್ನೂ ಓದಿ: Heeraben Modi | ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಶಾರುಖ್ ಖಾನ್
ಸುಹಾನಾ ಮತ್ತು ಅಗಸ್ತ್ಯ ಡೇಟಿಂಗ್‌ನಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್‌ಮಸ್ ಪಾರ್ಟಿಯಲ್ಲಿ ಈ ಜೋಡಿ ಒಟ್ಟಾಗಿ ಪಾಲ್ಗೊಂಡಿತ್ತು. ಅಲ್ಲಿ ಸುಹಾನಳನ್ನು ಅಗಸ್ತ್ಯ ತನ್ನ ಪಾರ್ಟ್ನರ್ ಎಂದು ಎಲ್ಲರಿಗೂ ಪರಿಚಯ ಮಾಡಿಸಿಕೊಟ್ಟಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಜೋಡಿ, ಶ್ವೇತಾ ಬಚ್ಚನ್ ಹಾಗೂ ಕಾಜಲ್ ಆನಂದ್ ಅವರು ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರು. ಹೋಟೆಲ್‌ನಿಂದ ಹೊರಬರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹರಿಬಿಡಲಾಗಿತ್ತು.