Site icon Vistara News

Bollywood : ಬಾಲಿವುಡ್‌ ನಟಿ ರೇಖಾ ತಂದೆ-ತಾಯಿ ವಿವಾಹವನ್ನೇ ಆಗಿರಲಿಲ್ಲ!

ಮುಂಬೈ: ಈಗ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ (Bollywood) ಸಿನಿಮಾಗಳನ್ನೂ ಮೀರಿ ಬೆಳೆಯುತ್ತಿವೆ. ಆದರೆ ಹಿಂದೊಂದು ಕಾಲದಲ್ಲಿ ಬಾಲಿವುಡ್‌ ಎನ್ನುವುದು ದಕ್ಷಿಣ ಭಾರತದ ನಟಿಯರಿಗೆ ಕನಸಾಗಿತ್ತು. ಅದೇ ಕನಸು ನನಸು ಮಾಡಿಕೊಂಡ ಹಲವು ನಟಿಯರು ಇಂದಿಗೂ ನಮ್ಮ ಕಣ್ಣ ಮುಂದಿದ್ದಾರೆ. ಶ್ರೀದೇವಿ, ರೇಖಾ, ಹೇಮಾ ಮಾಲಿನಿ, ಜಯಪ್ರದಾ ಸೇರಿ ಹಲವು ನಟಿಯರು ನಮ್ಮ ದಕ್ಷಿಣ ಭಾರತದ ಕೊಡುಗೆಯೇ. ಅಂಥವರಲ್ಲಿ ಒಬ್ಬರಾಗಿರುವ ರೇಖಾ ಅವರ ತಂದೆ ತಾಯಿ ಬಗ್ಗೆ ನೀವರಿಯದ ಸಂಗತಿ ಇಲ್ಲಿದೆ.

ಇದನ್ನೂ ಓದಿ: Star Dress Shopping : ಮಾರಾಟಕ್ಕಿವೆ ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಡಿಸೈನರ್‌ವೇರ್ಸ್‌

ರೇಖಾ ಅವರ ತಾಯಿ ಪುಷ್ಪವಲ್ಲಿ. ಅವರೂ ಕೂಡ ತಮಿಳು ಸಿನಿ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟಿಯೇ. 1936ರಲ್ಲಿ ಬಿಡುಗಡೆಯಾದ ʼಸಂಪೂರ್ಣ ರಾಮಾಯಣʼದಲ್ಲಿ ಅವರು ಸೀತೆಯಾಗಿ ನಟಿಸಿದ್ದರು. ಹಿರಿ ತೆರೆಯಲ್ಲಿ ಸೀತೆಯಾಗಿ ನಟಿಸಿರುವ ಮೊದಲನೇ ನಾಯಕಿ ಪುಷ್ಪವಲ್ಲಿಯೇ. ಆ ಸಿನಿಮಾಕ್ಕಾಗಿ ಅವರು 300 ರೂ. ಸಂಭಾವನೆಯನ್ನೂ ಪಡೆದಿದ್ದರಂತೆ. ತಮಿಳು ಸಿನಿ ರಂಗದಲ್ಲಿ ದೊಡ್ಡ ಹೆಸರನ್ನು ಗಿಟ್ಟಿಸಿಕೊಂಡ ಪುಷ್ಪವಲ್ಲಿ 1940ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವೈವಾಹಿಕ ಜೀವನ ಸರಿಹೊಂದದ ಹಿನ್ನೆಲೆ 1946ರಲ್ಲಿ ಪುಷ್ಪವಲ್ಲಿ ಪತಿಯಿಂದ ಬೇರೆಯಾಗಿ ಒಬ್ಬಂಟಿ ಬದುಕನ್ನು ಬದುಕಲಾರಂಭಿಸಿದರು. ಆ ಸಮಯಕ್ಕಾಗಲೇ ತಮಿಳು ಸಿನಿ ರಂಗಕ್ಕೆ ಜೆಮಿನಿ ಗಣೇಶನ್‌ ಅವರು ನಟರಾಗಿ ಪರಿಚಯವಾಗಿದ್ದರು. ಜೆಮಿನಿ ಗಣೇಶನ್‌ ಹಾಗೂ ಪುಷ್ಪವಲ್ಲಿ ʼಮಿಸ್‌ ಮಾಲಿನಿʼ ಹೆಸರಿನ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡರು. ಸಿನಿಮಾದಲ್ಲಿ ಪ್ರೇಮಿಗಳಾದ ಅವರಿಗೆ ನಿಜ ಜೀವನದಲ್ಲೂ ಪ್ರೀತಿ ಹುಟ್ಟಿಕೊಂಡಿತು.


ಆಗ ಪುಷ್ಪವಲ್ಲಿ ಪತಿಯಿಂದ ಬೇರೆ ಇದ್ದರಾದರೂ ಜೆಮಿನಿ ಗಣೇಶನ್‌ಗೆ ಅವರದ್ದೇ ಆದ ಸಂಸಾರವಿತ್ತು. ಆದರೂ ಪುಷ್ಪವಲ್ಲಿ ಕೈ ಬಿಡಲು ಒಪ್ಪದ ಗಣೇಶನ್‌, ಅವರನ್ನು ಹೆಂಡತಿಯೆಂದೇ ಸ್ವೀಕರಿಸಿ ಸಂಸಾರ ನಡೆಸಲಾರಂಭಿಸಿದರು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ನಮ್ಮ ಬಾಲಿವುಡ್‌ ನಟಿ ರೇಖಾ. ಅಧಿಕೃತವಾಗಿ ಮದುವೆಯಾಗದಿದ್ದರೂ ರೇಖಾರ ತಂದೆ ತಾಯಿ ಗಂಡ-ಹೆಂಡತಿಯಂತೆಯೇ ಬದುಕು ನಡೆಸಿದರು.

ಇದನ್ನೂ ಓದಿ: Actress Rekha | ಬಾಲಿವುಡ್‌ ನಟಿ ರೇಖಾಗೆ ತಮ್ಮ 15ನೇ ವಯಸ್ಸಿನಲ್ಲಿ ಸೆಟ್‌ನಲ್ಲಿ ಆಗಬಾರದ್ದು ಆಗಿದ್ದೇನು?
ಗಣೇಶನ್‌ ಅವರಿಗೆ ಎರಡು ಸಂಸಾರವಿದ್ದ ಹಿನ್ನೆಲೆ ರೇಖಾ ಅವರಿಗೆ ಹೆಚ್ಚಿನ ಸಮಯವನ್ನು ತಂದೆಯ ಜತೆ ಕಳೆಯಲು ಸಾಧ್ಯವಾಗಲಿಲ್ಲ. ತಾಯಿಯೊಂದಿಗೇ ಬೆಳೆದ ಅವರು 12ನೇ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಧುಮಿಕಿದರು. ಅವರ ತಾಯಿ ಪುಷ್ಪವಲ್ಲಿ 1991ರಲ್ಲಿ ಮೃತರಾದರು.

Exit mobile version