Site icon Vistara News

Bollywood Update: ವಿದ್ಯಾ ಬಾಲನ್‌ ಜತೆ ಅಭಿನಯಿಸಿದ್ದ ನಟನ ಪ್ರೇಮ್‌ ʼಕಹಾನಿʼಗೆ ಕಂಕಣಭಾಗ್ಯ

kahaani

kahaani

ಕೋಲ್ಕತ್ತಾ: 2012ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ಕಹಾನಿ (Kahaani)ಯಲ್ಲಿ ನಟಿ ವಿದ್ಯಾ ಬಾಲನ್‌ (Vidya Balan) ಜತೆ ಅಭಿನಯಿಸಿದ್ದ ನಟ ಪರಂಬ್ರತಾ ಚಟರ್ಜಿ (Parambrata Chatterjee) ತಮ್ಮ ಗೆಳತಿ, ಮಾನಸಿಕ ಆರೋಗ್ಯ ಕಾರ್ಯಕರ್ತೆ, ಗಾಯಕಿ ಪಿಯಾ ಚಕ್ರವರ್ತಿ (Piya Chakraborty) ಅವರನ್ನು ವಿವಾಹವಾಗಿದ್ದಾರೆ. ಕೋಲ್ಕತ್ತಾದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಇಬ್ಬರು ಜತೆಗಿರುವ ಫೋಟೊವನ್ನು ನಟ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಶೇರ್‌ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ (Bollywood Update).

ಪರಂಬ್ರತಾ ಚಟರ್ಜಿ ಅವರ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸಹ ಕಲಾವಿದರು ಮೆಚ್ಚುಗೆ ಸೂಚಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬಂಗಾಳಿ ಸಿನಿಮಾ ನಟಿ ಶುಭಶ್ರೀ ಗಂಗೂಲಿ, ಕಮೆಂಟ್‌ ಮಾಡಿ ʼʼಕಂಗ್ರಾಜುಲೇಷನ್ಸ್‌ʼʼ ಎಂದು ಹೇಳಿದ್ದಾರೆ. ಮತ್ತೊಬ್ಬ ಕಲಾವಿದರಾದ ಮೊನಮಿ ಘೋಷ್‌ ಕೂಡ ʼʼವ್ಹಾಹ್‌…ಅಭಿನಂದನೆಗಳುʼʼ ಎಂದು ಕಮೆಂಟ್‌ ಮಾಡಿದ್ದಾರೆ. ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಆತ್ಮೀಯರು ಸೇರಿ ಕೆಲವರಷ್ಟೇ ಹಾಜರಿದ್ದರು.

ಪ್ರಿಯಾ ಮತ್ತು ಪರಂಬ್ರತಾ ಚಟರ್ಜಿ ಸುಮಾರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಪಿಯಾ ಚಕ್ರವರ್ತಿ ಈ ಹಿಂದೆ ಸಂಗೀತ ಸಂಯೋಜಕ-ಗಾಯಕ ಅನುಪಮ್ ರಾಯ್ ಅವರನ್ನು ವಿವಾಹವಾಗಿದ್ದರು. 2015ರಲ್ಲಿ ವಿವಾಹವಾಗಿದ್ದ ಅವರು ಹೊಂದಿಕೆಯಾಗದ ಕಾರಣ 5 ವರ್ಷಗಳ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದರು. ಪರಂಬ್ರತಾ ಈ ಹಿಂದೆ ಸ್ವಸ್ತಿಕಾ ಮುಖರ್ಜಿ ಮತ್ತು ಡಚ್ ಪ್ರಜೆ ಐಕೆ ಸ್ಚೌಟೆನ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್‌ ನಡೆಸುತ್ತಿದ್ದರು. ಬಳಿಕ ಆ ಸಂಬಂಧ ಮುರಿದು ಬಿದ್ದಿತ್ತು.

ಪರಂಬ್ರತ ಚಟರ್ಜಿ ಮೂಲತಃ ಬಂಗಾಳಿ ಕಲಾವಿದ. ಬಂಗಾಳಿ ಸೀರಿಯಲ್‌, ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 2002ರಲ್ಲಿ ತೆರೆಕಂಡ ರಾಷ್ಟ್ರೀಯ ಚಲನಚಿತ್ರ ಪುರಸ್ಕೃತ ಬಂಗಾಳಿ ಸಿನಿಮಾ ʼಹೇಮಂತರ್‌ ಪಖಿʼ ಮೂಲಕ ಬಣ್ಣ ಚಿತ್ರರಂಗ ಪ್ರವೇಶಿಸಿದ್ದರು.

ಇದನ್ನೂ ಓದಿ: ಆಲಿಯಾ ಭಟ್, ಮನೋಜ್‌ ಬಾಜಪೇಯಿಗೆ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್, ಮತ್ತೆ ಯಾರೆಲ್ಲ ಪ್ರಶಸ್ತಿ ಪಡೆದರು?

ಬಳಿಕ ಅನೇಕ ಬಂಗಾಳಿ ಚಿತ್ರಗಳಲ್ಲಿ ನಟಿಸಿ 2012ರಲ್ಲಿ ʼಕಹಾನಿʼ ಚಿತ್ರದ ಸತ್ಯಕಿ ಸಿನ್ಹಾ ಪಾತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ಸುಜೋಯ್‌ ಘೋಷ್‌ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್‌ ಗರ್ಭಿಣಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಕಡಿಮೆ ಬಜೆಟ್‌ನ ಈ ಚಿತ್ರ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಸದ್ದು ಮಾಡಿತ್ತು. ವಿದ್ಯಾ ಬಾಲನ್‌ಗೆ ಸಹಾಯ ಮಾಡುವ ಪೊಲೀಸ್‌ ಪಾತ್ರದಲ್ಲಿ ಪರಂಬ್ರತ ಗಮನ ಸೆಳೆದಿದ್ದರು. ಬಳಿಕ ʼಟ್ರಾಫಿಕ್‌ʼ, ʼಪರಿʼ, ʼಕೌನ್‌ ಪ್ರವೀಣ್‌ ತಂಬೆʼ, ʼಬುಲ್‌ ಬುಲ್‌ʼ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ 2014ರಲ್ಲಿ ತೆರೆಕಂಡ ಮಲೆಯಾಳಂನ ʼಭಾಗ್ಯಲಕ್ಷ್ಮೀʼ ಸಿನಿಮಾದಲ್ಲಿ ಅತಿಥಿ ಪಾತ್ರದ ಮೂಲಕ ದಕ್ಷಿಣ ಬಾರತ ಚಿತ್ರರಂಗಕ್ಕೂ ಪ್ರವೇಶಿಸಿದ್ದರು. ಇಂಗ್ಲಿಷ್‌, ಬಾಂಗ್ಲಾ ದೇಶಿ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಜತೆಗೆ ಅನೇಕ ವೆಬ್‌ ಸೀರಿಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಅನೇಕ ಟೆಲಿಫಿಲಂ, ವೆಬ್‌ ಸೀರಿಸ್‌ಗಳನ್ನು ನಿರ್ದೇಶಿಸಿದ್ದಾರೆ. ಸದ್ಯ ಹಿಂದಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version