ಬೆಂಗಳೂರು: ಭಾರತದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಆಮೀರ್ ಖಾನ್ (Aamir Khan Birthday) ಅವರಿಗೆ ಇಂದು (ಮಾ.14) ಜನುಮದಿನದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಆಮೀರ್ ಖಾನ್ (Aamir Khan) ಕಳೆದ 14 ವರ್ಷಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಕಿಂಗ್ ಎಂದೇ ಖ್ಯಾತಿ ಪಡೆದಿದ್ದರು. 2008ರಲ್ಲಿ ‘ಗಜಿನಿ’ ಸಿನಿಮಾ (Ghajini) ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದವರು, ನಂತರ 2009ರಲ್ಲಿ ತೆರೆ ಕಂಡ 3 ಈಡಿಯಟ್ಸ್ (3 idiots) ಸಿನಿಮಾ ದಾಖಲೆಗಳನ್ನು ಮುರಿಯಿತು. ಪಿಕೆ (PK) 2014ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಕೊನೆಯದಾಗಿ ದಂಗಲ್ ಸಿನಿಮಾ (Dangal) ಬಳಿಕ ಅಷ್ಟಾಗಿ ಆಮೀರ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿಲ್ಲ.
‘3 ಈಡಿಯಟ್ಸ್’ ನಿಂದ ರಾಂಚೋ ಆಗಿರಲಿ, ಅಥವಾ ‘ದಂಗಲ್’ ನ ಮಹಾವೀರ್ ಸಿಂಗ್ ಫೋಗಟ್ ಆಗಿರಲಿ, ಅವರ ಎಲ್ಲಾ ಪಾತ್ರಗಳು ಪ್ರಮುಖ ಸಂದೇಶಗಳನ್ನು ನೀಡುತ್ತವೆ. ಮತ್ತು ವೀಕ್ಷಕರನ್ನು ರಂಜಿಸಿವೆ. ಪ್ರೇಕ್ಷಕರ ಅಚ್ಚುಮೆಚ್ಚಿನ ಅವರ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿವೆ ಮಾಹಿತಿ.
ಅಂದಾಜ್ ಅಪ್ನಾ ಅಪ್ನಾ (Andaz Apna Apna)- ಅಮರ್ ಪಾತ್ರ
‘ಅಂದಾಜ್ ಅಪ್ನಾ ಅಪ್ನಾ’ (1994) ಬಿಡುಗಡೆಯಾಗಿ 28 ವರ್ಷಗಳ ಬಳಿಕವೂ ಪ್ರೇಕ್ಷಕರಿಗೆ ಇಂದೂ ನಗು ತರಿಸುತ್ತದೆ. ರಾಜಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್ ಖಾನ್, ಸಲ್ಮಾನ್ ಖಾನ್, ರವೀನಾ ಟಂಡನ್, ಮತ್ತು ಕರಿಷ್ಮಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಪರೇಶ್ ರಾವಲ್ ಮತ್ತು ಶಕ್ತಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Aamir Khan: ಆಮೀರ್ ಖಾನ್-ರೀನಾ ದತ್ತಾ ಡಿವೋರ್ಸ್‌ಗೆ ನಾನು ಕಾರಣನಲ್ಲ: ಕಿರಣ್ ರಾವ್!
ದಿಲ್ ಚಾಹ್ತಾ ಹೈ (Dil Chahta Hai)- ಆಕಾಶ್ ಪಾತ್ರ
‘ದಿಲ್ ಚಾಹ್ತಾ ಹೈ’ (2001), ಬಾಲಿವುಡ್ ನಟರಾದ ಅಮೀರ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಪ್ರೀತಿ ಜಿಂಟಾ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಇದು ಮೂರು ಸ್ನೇಹಿತರ ಜೀವನದ ಕಥೆ.
3 ಈಡಿಯಟ್ಸ್ (3 Idiots)- ರಾಂಚೊ
ಆಮೀರ್ ಖಾನ್ ನಟನೆಯ 3 ಈಡಿಯಟ್ಸ್ ಸಿನಿಮಾ ಭಾರತದಲ್ಲಿ ಅತ್ಯಂತ ಯಶಸ್ಸು ಕಂಡ ಸಿನಿಮಾಗಳಲ್ಲಿ ಒಂದು. ಕಾಲೇಜ್ ಹುಡುಗರ ಜೀವನವನ್ನೇ ಇಟ್ಟುಕೊಂಡು ಮಾಡಿದ್ದ ಆ ಸಿನಿಮಾ ಇಂದಿಗೂ ಅನೇಕರ ಫೇವರಿಟ್ ಸಿನಿಮಾಗಳಲ್ಲಿ ಒಂದು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಚೇತನ್ ಭಗತ್ ಅವರ 2004 ರ ಕಾದಂಬರಿ ಆಧಾರಿತ ಸಿನಿಮಾ ಇದು. ಆಮೀರ್ ಖಾನ್, ಶರ್ಮಾನ್ ಜೋಶಿ, ಆರ್ ಮಾಧವನ್, ಕರೀನಾ ಕಪೂರ್, ಬೋಮನ್ ಇರಾನಿ ಮತ್ತು ಮೋನಾ ಸಿಂಗ್ ನಟಿಸಿದ್ದ ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿನಿಮಾ ವಿಶ್ವಾದ್ಯಂತ 400 ಕೋಟಿ ರೂ ಗಳಿಕೆ ಮಾಡಿಕೊಂಡಿತ್ತು.
ತಾರೆ ಜಮೀನ್ ಪರ್ (Taare Zameen Par)-ರಾಮ್
2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಈ ಚಿತ್ರವನ್ನು ಆಮೀರ್ ಖಾನ್ ಮತ್ತು ಅಮೋಲ್ ಗುಪ್ತೆ ನಿರ್ದೇಶಿಸಿದ್ದಾರೆ. ʻತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007 ರಂದು ಬಿಡುಗಡೆಯಾಗಿತ್ತು.
ಇದನ್ನೂ ಓದಿ: Aamir Khan: ಪತಿಯಾಗಿ ನನ್ನಲ್ಲಿದ್ದ ಕೊರತೆಗಳೇನು? ಮಾಜಿ ಪತ್ನಿಗೆ ಆಮೀರ್ ಖಾನ್ ಪ್ರಶ್ನೆ!
ದಂಗಲ್ (Dangal)-ಮಹಾವೀರ್ ಸಿಂಗ್ ಫೋಗಟ್
‘ದಂಗಲ್’ ಕುಸ್ತಿಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ನಿಜ ಜೀವನದ ಘಟನೆ ಆಧರಿಸಿದೆ, ಅಮೀರ್ ಖಾನ್ ಅವರ ತಂದೆ ಮಹಾವೀರ್ ಸಿಂಗ್ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಫಾತಿಮಾ ಸನಾ ಶೇಖ್, ಸನ್ಯಾ ಮಲ್ಹೋತ್ರಾ, ಅಪರಶಕ್ತಿ ಖುರಾನಾ, ಝೈರಾ ವಾಸಿಂ, ಸುಹಾನಿ ಭಟ್ನಾಗರ್ ಮತ್ತು ಸಾಕ್ಷಿ ತನ್ವಾರ್ ಕೂಡ ನಟಿಸಿದ್ದಾರೆ ಮತ್ತು ನಿತಿನ್ ತಿವಾರಿ ನಿರ್ದೇಶಿಸಿದ್ದಾರೆ.