Site icon Vistara News

Aamir Khan: ಕಾಂಗ್ರೆಸ್‌ಗೆ ಮತ ನೀಡಿ ಎಂದು ಆಮೀರ್ ಖಾನ್ ಮನವಿ ಮಾಡಿದರೆ? ಎಫ್‌ಐಆರ್‌ ಏಕೆ?

Aamir Khan Deepfake video promoting a political party viral

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ ವಿಡಿಯೊವೊಂದು ಕೆಲವು (Aamir Khan promoting a political party viral) ದಿನಗಳಿಂದ ವೈರಲ್‌ ಆಗಿತ್ತು. ಇದೀಗ ಇದು ಡೀಪ್‌ಫೇಕ್‌ ವಿಡಿಯೊ ಎಂದು ತಿಳಿದು ಬಂದಿದೆ. ಡೀಪ್‌ಫೇಕ್ ವಿಡಿಯೊಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇತ್ತೀಚೆಗೆ ನಟನ ವಕ್ತಾರರು ಈ ವಿಡಿಯೊ ವಿರುದ್ಧ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಈ ವಿಡಿಯೊ ಎಡಿಟ್‌ ಮಾಡಲಾಗಿದೆ. 27-ಸೆಕೆಂಡ್ ವಿಡಿಯೊ ಕ್ಲಿಪ್‌ ತಯಾರಿಸಿಲಾಗಿದೆ. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದಾರೆ. ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇದೆ.

ಇದೀಗ ಆಮೀರ್‌ ಅವರ ಅವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ʻʻಆಮೀರ್‌ ಖಾನ್‌ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಆಮೀರ್‌ ಒಂದು ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೊ ವೈರಲ್‌ ಆಗುತ್ತಿದೆ. ಅದು ಸುಳ್ಳು. ನಕಲಿ ವಿಡಿಯೊʼʼಎಂದು ಹೇಳಿದ್ದಾರೆ.

ಇದನ್ನೂ ಓದಿ: Aamir Khan Birthday: ಆಮೀರ್ ಖಾನ್‌ ಜನುಮದಿನ: ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಬೆಸ್ಟ್‌ ಸಿನಿಮಾಗಳಿವು!

ಈಗ ಆಮಿರ್ ಖಾನ್​ ಅವರು ‘ಸಿತಾರೆ ಜಮೀನ್​ ಪರ್​’ (Sitaare Zameen Par) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.. ಜತೆಗೆ ಈ ಚಿತ್ರದಲ್ಲಿ ಆಮೀರ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಮೀರ್‌ ಅವರು ‘ಅತೀ ಸುಂದರ್’ (‘Aati Sundar’) ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಇದು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

Exit mobile version