ಬೆಂಗಳೂರು: 15 ವರ್ಷಗಳ ದಾಂಪತ್ಯ ಜೀವನವನ್ನು ಅನುಭವಿಸಿದ ಬಳಿಕ 2021ರಲ್ಲಿ ಆಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್ ವಿಚ್ಛೇದನವನ್ನು ಘೋಷಿಸಿದರು. ಇದಾದ ಬಳಿಕವೂ ಆಮೀರ್ ಮತ್ತು ಕಿರಣ್‌ಗೆ 13 ವರ್ಷದ ಮಗ ಆಜಾದ್‌ಗೆ ಪೋಷಕರಾಗಿ ಮುಂದುವರಿಯುತ್ತಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ʻಲಾಪತಾ ಲೇಡೀಸ್ʼ ಸಿನಿಮಾ ಪ್ರಚಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ ಕಿರಣ್ ರಾವ್ ಜತೆಗೆ ಡಿವೋರ್ಸ್ ಆದ ಬಳಿಕ ಆಮೀರ್ ಕೆಲವು ಪ್ರಶ್ನೆಗಳನ್ನು ಕೇಳಿದ್ದರಂತೆ! ಅದ್ಯಾವದು ಎಂದು ತಿಳಿದುಕೊಳ್ಳಲು ಮುಂದೆ ಓದಿ!.
ಕಿರಣ್‌ಗೆ ಆಮೀರ್ ಪ್ರಶ್ನೆ ಕೇಳಿ, ʻʻಪತಿಯಾಗಿ ನನ್ನಲ್ಲಿದ್ದ ಕೊರತೆಗಳೇನು? ಅವುಗಳನ್ನು ಭವಿಷ್ಯದಲ್ಲಿ ಹೇಗೆ ಸರಿಪಡಿಸಿಕೊಳ್ಳಬಹುದುʼʼ ಎಂದು ಕೇಳಿದ್ದರಂತೆ. ಆಗ ಕಿರಣ್ ಅವರು ದೊಡ್ಡ ಪಟ್ಟಿಯನ್ನೇ ಮಾಡಿದ್ದರಂತೆ. ಆಮೀರ್ ಇತ್ತೀಚೆಗೆ ಕಿರಣ್‌ನಿಂದ ತನ್ನ ಪ್ರತ್ಯೇಕತೆಯ ಬಗ್ಗೆ ತೆರೆದುಕೊಂಡರು. ದಂಪತಿ ಬೇರೆಯಾದ ನಂತರ ಕಿರಣ್‌ಗೆ ಪ್ರತಿಕ್ರಿಯೆಯನ್ನು ಕೇಳಿದ್ದೇನೆ ಎಂದು ಬಹಿರಂಗಪಡಿಸಿದರು. ಕಿರಣ್ ಆಮೀರ್ ಕುರಿತಾಗಿ ʻʻನೀವು ತುಂಬಾ ಮಾತನಾಡುತ್ತೀರಿ. ನೀವು ಯಾರನ್ನೂ ಮಾತನಾಡಲು ಬಿಡುವುದಿಲ್ಲ. ತಮ್ಮದೇ ಆದ ಅಂಶದ ಮೇಲೆ ಕೇಂದ್ರೀಕರಿಸುತ್ತಿರುತ್ತೀರಿʼʼ ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ ಕಿರಣ್ ಅವರು ಮಾಡಿದ ಪಟ್ಟಿ 15ರಿಂದ 20 ಆದರೂ ಇತ್ತುʼʼ ಎಂದು ಆಮೀರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:Aamir Khan: ಅಮಿತಾಭ್ ಬಚ್ಚನ್ ರಿಹರ್ಸಲ್ ಕಂಡು ನಾನು ಮೂಕಸ್ಮಿತನಾದೆ: ಆಮೀರ್ ಖಾನ್
super star Aamir Khan ji kiran rao ji Laaptaa ladies interview 🥰🤗💗#AamirKhan @AKPPL_Official#kiranrao pic.twitter.com/d6GOd0x5tU
— Sudha Ajmera (@SudhaAjmera13) February 25, 2024
ಇದೀಗ ಈ ವಿಚಾರ ವೈರಲ್ ಆಗುತ್ತಿದ್ದಂತೆ ಡಿವೋರ್ಸ್ಗೂ ಮುನ್ನವೇ ಇದನ್ನು ಕೇಳಿದ್ದರೆ ಅವರ ಜತೆಗೆ ದಾಂಪತ್ಯ ಜೀವನದ ಮುಂದುವರಿಸಬಹುದಿತ್ತಲ್ಲ, ಈಗ ಕೇಳಿ ಏನು ಪ್ರಯೋಜನ ಎನ್ನುತ್ತಿದ್ದಾರೆ ನೆಟ್ಟಿಗರು.
ಆಮೀರ್ ಖಾನ್ ಪ್ರೊಡಕ್ಷನ್ (APK) ಮತ್ತು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ʻಲಾಪತಾ ಲೇಡೀಸ್ʼ. 14 ವರ್ಷಗಳ ಬ್ರೇಕ್ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್. ಸಿನಿಮಾದ ಪ್ರೀಮಿಯರ್ ಶೋ ಗಾಗಿ ಆಮೀರ್ ಮಾಜಿ ಪತ್ನಿ ಕಿರಣ್ ರಾವ್ ಜತೆಗೂಡಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಐಐಎಂ ನ ವಿದ್ಯಾರ್ಥಿಗಳೊಡನೆ ಕೂತು ‘ಲಾಪತಾ ಲೇಡೀಸ್’ ಸಿನಿಮಾ ವೀಕ್ಷಿಸಿದ್ದರು ಬಳಿಕ ಮಾಧ್ಯಮಗಳೊಟ್ಟಿಗೆ ಸಂವಾದ ನಡೆಸಿದ ಆಮಿರ್ ಖಾನ್, ತಮ್ಮ ನಿರ್ಮಾಣದ ‘ಲಾಪತಾ ಲೇಡೀಸ್’ ಸಿನಿಮಾ ಬಗ್ಗೆ, ಬೆಂಗಳೂರಿನೊಟ್ಟಿಗೆ ತಮಗಿರುವ ನಂಟಿನ ಬಗ್ಗೆ ಮಾತನಾಡಿದ್ದರು.