ಬೆಂಗಳೂರು: ನಟ ಆಮೀರ್ ಖಾನ್ (Aamir Khan) ತಾಯಿ ಜೀನತ್ ಹುಸೇನ್ ಅವರ 90ನೇ ಹುಟ್ಟುಹಬ್ಬವನ್ನು 200 ಕ್ಕೂ ಹೆಚ್ಚು ಅತಿಥಿಗಳೊಂದಿಗೆ ಆಚರಿಸಲು ಸಿದ್ಧವಾಗಿದ್ದಾರೆ ಎಂದು ವರದಿಯಾಗಿದೆ. ಆಚರಣೆಯಲ್ಲಿ ಬನಾರಸ್, ಬೆಂಗಳೂರು, ಲಕ್ನೋ, ಮೈಸೂರು ಮತ್ತು ಇತರ ನಗರಗಳಿಂದ ಸಂಬಂಧಿಕರು (Zeenat’s grand 90th birthday ) ಸೇರಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಒಂದು ವರ್ಷದಿಂದ ಆಮೀರ್ ತಾಯಿ ಅಸ್ವಸ್ಥಳಾಗಿದ್ದರು. ಈಗ ಜೀನತ್ ಅವರು ಚೇತರಿಸಿಕೊಂಡಿದ್ದ ಕಾರಣ ಆಮೀರ್ ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಬೇಕೆಂದಿದ್ದಾರೆ ಎನ್ನಲಾಗಿದೆ.
“ಜೂನ್ 13 ರಂದು ಆಮೀರ್ ಖಾನ್ ಅಮ್ಮನ ಜನುಮದಿನದ ಅಂಗವಾಗಿ ವಿವಿಧ ನಗರಗಳಿಂದ 200ಕ್ಕೂ ಹೆಚ್ಚು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ಒಂದು ವರ್ಷದಿಂದ ಆಮೀರ್ ತಾಯಿ ಅಸ್ವಸ್ಥಳಾಗಿದ್ದರು. ಈಗ ಅವರು ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಹೀಗಾಗಿ ಆಮೀರ್ ಗೆಟ್-ಟುಗೆದರ್ ಮಾಡಲು ಬಯಸಿದ್ದರು. ಈ ವಿಶೇಷ ದಿನವನ್ನು ಆಚರಿಸಲು ಬನಾರಸ್, ಬೆಂಗಳೂರು, ಲಕ್ನೋ, ಮೈಸೂರು ಮತ್ತು ಇತರ ನಗರಗಳಿಂದ ಜನರು ಬರುತ್ತಿದ್ದಾರೆʼʼ ಎಂದು ವರದಿಯಾಗಿದೆ.
ಆಮೀರ್ ಕಳೆದ ವರ್ಷ ತಾಯಿ ಜೀನತ್ ಚಿಕಿತ್ಸೆ ಪಡೆಯುತ್ತಿದ್ದರಿಂದ ಚೆನ್ನೈಗೆ ತೆರಳಿದ್ದರು ಎಂದು ವರದಿಯಾಗಿದೆ. ಜೀನತ್ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಕೀಯ ಕೇಂದ್ರದ ಸಮೀಪವಿರುವ ಹೋಟೆಲ್‌ನಲ್ಲಿ ಆಮೀರ್ ತಂಗಿದ್ದರು. ಇನ್ನು 2023ರಲ್ಲಿ ಜೀನತ್ ಅವರ 89ನೇ ಹುಟ್ಟುಹಬ್ಬವನ್ನು ಆಚರಿಸಲು ಆಮೀರ್ ಮತ್ತು ಅವರ ಕುಟುಂಬ ಸದಸ್ಯರು ಒಟ್ಟಾಗಿ ಪಾರ್ಟಿ ಮಾಡಿದ್ದರು. ಮುಂಬೈನ ಮನೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಂಜಾಬಿ ಗಾಯಕಿ ಪ್ರತಿಭಾ ಸಿಂಗ್ ಬಾಘೆಲ್ ಅವರು ಈ ಹಿಂದೆ ಪಾರ್ಟಿಯ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Aamir Khan: ವಡೋದರಾದಲ್ಲಿ ‘ಸಿತಾರೆ ಜಮೀನ್ ಪರ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆಮೀರ್ ಖಾನ್!
`ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮೀರ್ ಖಾನ್ (Aamir Khan) ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದರು. ಅದುವೇ ‘ಸಿತಾರೆ ಜಮೀನ್ ಪರ್’. 2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇದೀಗ ಆಮೀರ್ ಖಾನ್ ದೆಹಲಿಯಲ್ಲಿ ಚಿತ್ರೀಕರಣದ ನಂತರ, ಗುಜರಾತ್‌ನ ವಡೋದರದಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿತಾರೆ ಜಮೀನ್ ಪರ್ ಚಿತ್ರದ ಬ್ಯಾಕ್-ಟು-ಬ್ಯಾಕ್ ಚಿತ್ರೀಕರಣದಲ್ಲಿ ಆಮೀರ್ ಖಾನ್ ನಿರತರಾಗಿದ್ದಾರೆ. ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿದ ನಂತರ, ಅವರು ಈಗ ಬರೋಡದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸೂಪರ್‌ಸ್ಟಾರ್ ಬಿಸಿಲಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.” ಸಿತಾರೆ ಜಮೀನ್ ಪರ್ ಚಿತ್ರವನ್ನು ಆರ್ ಎಸ್ ಪ್ರಸನ್ನ ಅವರು ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ದರ್ಶೀಲ್ ಸಫಾರಿ ಕೂಡ ನಟಿಸಿದ್ದಾರೆ.