Site icon Vistara News

Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

Aaradhya Bachchan is wiser more intelligent than I

ಬೆಂಗಳೂರು: ಪೋಡ್‌ಕಾಸ್ಟ್‌ ʻವಾಟ್ ದಿ ಹೆಲ್ ನವ್ಯಾʼದಲ್ಲಿ ಜಯಾ ಬಚ್ಚನ್‌ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶ್ವೇತಾ ಬಚ್ಚನ್ ಮಗಳು ನವ್ಯಾ ಅವರು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತನ್ನ ಸೋದರಸಂಬಂಧಿ ಆರಾಧ್ಯ(Aaradhya Bachchan) ತುಂಬ ಬುದ್ಧಿವಂತೆ ಎಂದು ಹೇಳಿಕೊಂಡಿದ್ದಾರೆ.

ಆರಾಧ್ಯಗೆ ಏನು ಸಲಹೆ ನೀಡುತ್ತೀರಿ ಎಂದು ನವ್ಯಾಗೆ ಪ್ರಶ್ನೆ ಎದುರಾದಾಗ ಹೀಗೆ ಹೇಳಿದರು ನವ್ಯಾ. “ಆರಾಧ್ಯ ನನಗಿಂತ ಹೆಚ್ಚು ಬುದ್ಧಿವಂತಳು. ಇಂದಿನ ಮಕ್ಕಳು ಬಹಳ ಮುಂದಿದ್ದಾರೆ. ಅವಳ ವಯಸ್ಸಿನಲ್ಲಿ ನಾನು ಅಷ್ಟು ಬುದ್ಧಿವಂತನಾಗಿರಲಿಲ್ಲ. ಜಗತ್ತನ್ನು ಹಲವು ವಿಧಗಳಲ್ಲಿ ಬದಲಾಯಿಸಲು ಬಯಸುವ ಯುವತಿಯರ ಪೀಳಿಗೆಯನ್ನು ನಾವು ಈಗ ಹೊಂದಿದ್ದೇವೆ. ಅದು ನಾನು ಅವಳಲ್ಲಿಯೂ ನೋಡುತ್ತಿರುವ ಖುಷಿಯ ಸಂಗತಿ. ಅವಳಿಗೆ ನಾನು ಸಲಹೆ ಅಥವಾ ಸ್ಫೂರ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಅವಳಿಂದ ನಾನು ಬಹಳಷ್ಟು ತಿಳಿದುಕೊಳ್ಳುತ್ತಿರುವೆ ಎಂದು ನಾನು ಭಾವಿಸುತ್ತೇನೆʼʼಎಂದರು.

ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.

Exit mobile version