ಬಾಲಿವುಡ್ ನಟಿ ಆರತಿ ಛಾಬ್ರಿಯಾ (Aarti Chabria) 2000ರ ದಶಕದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ʻಲಜ್ಜಾʼ, ʻಹೇ ಬೇಬಿʼ, ʻಪಾರ್ಟ್‌ನರ್ʼ ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಮಾತ್ರವಲ್ಲ ‘ಅಹಂ ಪ್ರೇಮಾಸ್ಮಿ’ (aham premasmi) ಚಿತ್ರದ ಮೂಲಕ ಆರತಿ ಛಾಬ್ರಿಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ‘ಸಂತ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡರು. ‘ಹಾರ್ಟ್ ಅನ್ನೋ ಅಡ್ಡಾದಲ್ಲಿ’ ಎಂದು ಕುಣಿದಿದ್ದರು. ನಟಿ ಕೆಲವು ದಿನಗಳ ಹಿಂದೆ ತಾವು ಪ್ರೆಗ್ನೆಂಟ್ ಎಂದು ಘೋಷಿಸಿದ್ದರು. ಆದರೀಗ ನಟಿ ಸಂದರ್ಶನವೊಂದರಲ್ಲಿ ʻʻಒಂದು ತಿಂಗಳ ಹಿಂದೆ ಅಂದರೆ ಮಾರ್ಚ್ 4ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ʻಯುವನ್ʼ ಎಂದು ಹೆಸರಿಟ್ಟಿದ್ದೇವೆʼʼಎಂದು ಹೇಳಿಕೊಂಡಿದ್ದಾರೆ.
2019ರಂದು ಆರತಿ ಛಾಬ್ರಿಯಾ ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬೀಡಸ್ಸಿ ಅವರೊಂದಿಗೆ ಮದುವೆಯಾದರು. ಮದುವೆಯಾದ ಐದು ವರ್ಷಗಳ ನಂತರ ನಟಿ ತಾಯಿಯಾಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ತಾಯಿಯಾಗುವ ಜರ್ನಿ ಕುರಿತು ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Aarti Chabria: ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಅಹಂ ಪ್ರೇಮಾಸ್ಮಿ’ ಚಿತ್ರದ ನಟಿ!
ʻಯುವನ್ʼ ಹುಟ್ಟುವ ಮೊದಲು ತನಗೆ ಗರ್ಭಪಾತವಾಗಿತ್ತು ಎಂದು ಚಾಬ್ರಿಯಾ ಬಹಿರಂಗಪಡಿಸಿದ್ದಾರೆ. ʻʻ41ನೇ ವಯಸ್ಸಿನಲ್ಲಿ ಹೆರಿಗೆ ಮಾಡಿಕೊಂಡದ್ದು, 20 ಅಥವಾ 30ರ ವಯಸ್ಸಿನಷ್ಟು ಸುಲಭವಲ್ಲ. ಮಗುವನ್ನು ಹೊಂದಲು ಮಹಿಳೆಯರ ಮೇಲೆ ಒತ್ತಡ ಹೇರುತ್ತಲೇ ಇರುತ್ತಾರೆ. ಆದರೆ ನನಗೆ ಹಲವು ಬಾರಿ ಗರ್ಭಪಾತವಾಯ್ತು. ಇದೀಗ ಮಗ ಹುಟ್ಟಿದ್ದಾನೆʼʼಎಂದು ಹೇಳಿಕೊಂಡಿದ್ದಾರೆ.
ಆರತಿ ಛಾಬ್ರಿಯಾ ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಫ್ಯಾಷನ್ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. . 2001ರಲ್ಲಿ ‘ಲಜ್ಜಾ’ ಚಿತ್ರದಲ್ಲಿ ಆರತಿ ಛಾಬ್ರಿಯಾ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ‘ತುಮ್ ಸೆ ಅಚ್ಚಾ ಕೌನ್ ಹೈ’, ‘ಅವರಾ ಪಾಗಲ್ ದೀವಾನಾ’, ‘ಶಾದಿ ನಂ. 1’, ‘ಶೂಟೌಟ್ ಅಟ್ ಲೋಖಂಡವಾಲಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚಿದ್ದರು.