ಬೆಂಗಳೂರು: ಬಾಲಿವುಡ್ ನಟಿ ಆರತಿ ಛಾಬ್ರಿಯಾ (Aarti Chabria) 2000ರ ದಶಕದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ʻಲಜ್ಜಾʼ, ʻಹೇ ಬೇಬಿʼ, ʻಪಾರ್ಟ್‌ನರ್ʼ ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಮಾತ್ರವಲ್ಲ ‘ಅಹಂ ಪ್ರೇಮಾಸ್ಮಿ’ (aham premasmi) ಚಿತ್ರದ ಮೂಲಕ ಆರತಿ ಛಾಬ್ರಿಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ‘ಸಂತ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡರು. ‘ಹಾರ್ಟ್ ಅನ್ನೋ ಅಡ್ಡಾದಲ್ಲಿ’ ಎಂದು ಕುಣಿದಿದ್ದರು. ಇದೀಗ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ಫೋಟೊಶೂಟ್ ಮೂಲಕ ಪ್ರೆಗ್ನೆನ್ಸಿ ವಿಚಾರವನ್ನು ಆರತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2019ರಂದು ಆರತಿ ಛಾಬ್ರಿಯಾ ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬೀಡಸ್ಸಿ ಅವರೊಂದಿಗೆ ಮದುವೆಯಾದರು. ಇದೀಗ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ, ಆರತಿ ಛಾಬ್ರಿಯಾ ಬೇಬಿ ಬಂಪ್ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Vijay Deverakonda: ಕೆಟ್ಟ ಬೈಗುಳಕ್ಕೆ ಸೆನ್ಸಾರ್ ಕತ್ತರಿ; ವಿಜಯ್-ಮೃಣಾಲ್ ಸಿನಿಮಾಗೆ ‘ಯು/ಎ’ ಸರ್ಟಿಫಿಕೇಟ್!
ಇದೀಗ ನಟಿಗೆ ಫ್ಯಾನ್ಸ್, ಫಾಲೋವರ್ಸ್ ಹಾಗೇ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ನೀಲ್ ನಿತಿನ್ ಮುಖೇಶ್ ಅವರು ʻಅಭಿನಂದನೆಗಳು” ಎಂದು ಬರೆದಿದ್ದಾರೆ.
ಆರತಿ ಛಾಬ್ರಿಯಾ ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಫ್ಯಾಷನ್ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. . 2001ರಲ್ಲಿ ‘ಲಜ್ಜಾ’ ಚಿತ್ರದಲ್ಲಿ ಆರತಿ ಛಾಬ್ರಿಯಾ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ‘ತುಮ್ ಸೆ ಅಚ್ಚಾ ಕೌನ್ ಹೈ’, ‘ಅವರಾ ಪಾಗಲ್ ದೀವಾನಾ’, ‘ಶಾದಿ ನಂ. 1’, ‘ಶೂಟೌಟ್ ಅಟ್ ಲೋಖಂಡವಾಲಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚಿದ್ದರು.