ಬೆಂಗಳೂರು: ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai ) ನಡುವಿನ ವಿಚ್ಛೇದನದ ವದಂತಿಗಳ ನಡುವೆ, ಹಳೆಯವಿಡಿಯೊವೊಂದು ನಿರಂತರವಾಗಿ ವೈರಲ್ ಆಗುತ್ತಿದೆ. ಖುದ್ದು ಅಭಿಷೇಕ್ ಬಚ್ಚನ್ ನಾನು ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಐಶ್ವರ್ಯಾ ರೈ ಬಚ್ಚನ್ ಬಚ್ಚನ್ ಕುಟುಂಬದ ಜತೆ ಬಂದಿರಲಿಲ್ಲ. ಮಗಳ ಜತೆ ಮಾತ್ರ ಬಂದು ಹೋಗಿದ್ದರು. ಅಲ್ಲಿಂದ ವಿಚ್ಛೇದನದ ವದಂತಿ ಹಬ್ಬಿದೆ.
ಇದೀಗ ವೈರಲ್ ಆದ ವಿಡಿಯೊದಲ್ಲಿ ಅಭಿಷೇಕ್ ಬಚ್ಚನ್ ಅವರು “ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ” ಎಂದು ಹೇಳುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಬಗ್ಗೆ ಪ್ರಸ್ತಾಪಿಸುವುದನ್ನು ಸಹ ಕೇಳಬಹುದು. ಆದರೆ ಕೆಲವರು ಈ ವಿಡಿಯೊ ಫೇಕ್ ಎಂದು ಹೇಳುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಇಬ್ಬರೂ ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೌನವಾಗಿಯೇ ಉಳಿದಿದ್ದಾರೆ.
ಈ ವಿಡಿಯೊ ವೈರಲ್ ಆದ ಕೂಡಲೇ ಕೆಲವರು ಅಭಿಷೇಕ್ ಬಚ್ಚನ್ ಅವರ ಲಿಪ್ ಸಿಂಕ್ ಆಗದ ಕಾರಣ ಇದು ಡೀಪ್‌ಫೇಕ್ ವೀಡಿಯೊವಾಗಿದೆ. AI ತಂತ್ರಜ್ಞಾನ ಬಳಸಿಕೊಂಡು ವಿಡಿಯೊ ಹರಿ ಬಿಟ್ಟಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಹೀಗಿರುವಾಗ ಅಸಲಿಗೆ ತಂತ್ರಜ್ಞಾನದ ನೆರವು ಪಡೆದು, ಕಿಡಿಗೇಡಿಗಳು ಅಭಿಷೇಕ್ ಬಚ್ಚನ್ ಅವರ ವಿಡಿಯೋ ಹರಿ ಬಿಟ್ಟಿದ್ದಾರೆ. ಎಐ ತಂತ್ರಜ್ಞಾನ ಅಥವಾ ಆನ್ ಲೈನ್ ಪರಿಕರಗಳನ್ನು ಬಳಸಿ ಈ ವಿಡಿಯೋ ತೇಲಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Aishwarya Rai : ಡಿವೋರ್ಸ್ ವದಂತಿ ಮಧ್ಯೆ ಒಬ್ಬರೇ ಮಗಳ ಜತೆ ನ್ಯೂಯಾರ್ಕ್ ವಕೇಶನ್ ಎಂಜಾಯ್ ಮಾಡಿ ಬಂದ ಐಶ್ವರ್ಯಾ ರೈ!
ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಜೋಡಿಯ ಬಗ್ಗೆ ಯಾವುದೇ ಹೇಳಿಕೆ ಈವರೆಗೂ ಕೊಟ್ಟಿಲ್ಲ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಏಪ್ರಿಲ್ 2007 ರಲ್ಲಿ ವಿವಾಹವಾದರು. ಅವರು ನವೆಂಬರ್ 2011 ರಲ್ಲಿ ಆರಾಧ್ಯ ಬಚ್ಚನ್ ಜನಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ (Anant Ambani Wedding) ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದಿತ್ತು. ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಇತರರು ಒಟ್ಟಾಗಿ ಮದುವೆಗೆ ಆಗಮಿಸಿದ್ದರು. ಆದರೆ, ಈ ವೇಳೆ ಐಶ್ವರ್ಯಾ ಇರಲಿಲ್ಲ. ಮದುವೆಗೆ ಹಾಜರಾಗುತ್ತಿಲ್ಲವೇನೋ ಎಂದು ಕೆಲವರು ಭಾವಿಸಿದ್ದರು. ಬಳಿಕ ಅವರು ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಆ ಬಳಿಕ ಐಶ್ವರ್ಯಾ ರೈ ಅವರು ಮಗಳ ಜತೆ ಪೋಸ್ ಕೊಟ್ಟಿದ್ದರು. ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬದ ಜತೆ ಕಿರಿಕ್ ಮಾಡಿಕೊಂಡಿರುವುದು ನಿಜ ಎಂದು ಅನೇಕರು ಮಾತನಾಡಿಕೊಂಡಿದ್ದರು. ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್-ಜಯಾ ಬಚ್ಚನ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇತ್ತು.