ಮುಂಬೈ: ಕಳೆದ ವರ್ಷ `ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಈ ಸಿನಿಮಾ ಖ್ಯಾತಿಯ ಅದಾ ಶರ್ಮಾ (Adah Sharma) ಇದೀಗ ಮುಂಬೈನಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎಂಬ ವದಂತಿಗಳಿವೆ. ಅದೂ ಕೂಡ (Sushant Singh Rajput apartment) ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಫ್ಲಾಟ್ ಎಂದು ವರದಿಯಾಗಿದೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡ ನಂತರ ಅದಾ ಶರ್ಮಾ ಮನೆಯನ್ನು ಖರೀದಿಸಿದ್ದಾರೆ ಎನ್ನುವ ವದಂತಿ ಇತ್ತು. ಈ ಬಗ್ಗೆ ಅದಾ ಶರ್ಮಾ ಮಾತನಾಡಿದ್ದಾರೆ.
ಮುಂಬೈನ ಮೋಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ನಿಧನ ಹೊಂದಿದರು. ಇದಾದ ಬಳಿಕ ಈ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಳ್ಳಲು ಯಾರೊಬ್ಬರು ಬಂದಿಲ್ಲ. ಹೀಗಿರುವಾಗ ಮಾಲೀಕರು ಈ ಅಪಾರ್ಟ್ಮೆಂಟ್ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಅವರನ್ನು ಇದನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅದಾ ಮಾತನಾಡಿ “ಸದ್ಯ ನಾನು ಎಲ್ಲರ ಹೃದಯದಲ್ಲಿ ಇದ್ದೇನೆ ಎಂದು ಹೇಳಲು ಬಯಸುತ್ತೇನೆ. ಈ ಬಗ್ಗೆ ಮಾತನಾಡಲು ಸರಿಯಾದ ಸಮಯವಿದೆ. ನಾನು ಅಪಾರ್ಟ್ಮೆಂಟ್ ನೋಡಲು ಹೋದಾಗ, ಮಾಧ್ಯಮಗಳ ಗಮನ ನನ್ನ ಮೇಲೆ ಇತ್ತು. ನಾನು ತುಂಬ ಪ್ರೈವೇಟ್ ವ್ಯಕ್ತಿ. ನನ್ನ ಸಿನಿಮಾಗಳಿಗಾಗಿ ಸಾರ್ವಜನಿಕರ ಕಣ್ಣಿಗೆ ಬೀಳಲು ನಾನು ಇಷ್ಟಪಡುತ್ತೇನೆ, ಆದರೆ ನಾನು ಯಾವಾಗಲೂ ನನ್ನ ವೈಯಕ್ತಿಕ ವಿಚಾರ ಎಂದು ಬಂದರೆ ಅದು ಖಾಸಗಿಯಾಗಿರಬೇಕು ಎಂದು ಬಯಸುತ್ತೇನೆʼʼಎಂದರು.
ಇದನ್ನೂ ಓದಿ: Bastar The Naxal Story: ನಕ್ಸಲ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಬಸ್ತಾರ್’ ಚಿತ್ರದ ಟೀಸರ್ ಔಟ್
ʻʻನಟ ಸುಶಾಂತ್ ಅವರು ತುಂಬ ಗೌರವಯುತ ನಟ. ಜನರು ಅವರ ಬಗ್ಗೆ ಬೆಕ್ಕಾಬಿಟ್ಟಿಯಾಗಿ ಕಮೆಂಟ್ ಮಾಡುವುದು ನನಗೆ ಇಷ್ಟವಿಲ್ಲ. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದೆಲ್ಲ ಹೇಳಿದ್ದರು. ಇದೆಲ್ಲ ಇಷ್ಟ ಆಗಲ್ಲ. ನೀವು ನನ್ನನ್ನು ಟ್ರೋಲ್ ಮಾಡಬಹುದು. ಆದರೆ, ಜಗತ್ತಿನಲ್ಲಿ ಇಲ್ಲದ ಆ ವ್ಯಕ್ತಿ ಬಗ್ಗೆ ಮಾತನಾಡಬೇಡಿ. ನಾನು ಲಕ್ಷಾಂತರ ಜನರ ಹೃದಯದಲ್ಲಿ ಬಾಡಿಗೆಯಿಲ್ಲದೆ ವಾಸಿಸುತ್ತಿದ್ದೇನೆ. ಮುಂದೆ ಈ ಬಗ್ಗೆ ಅಪ್ಡೇಟ್ ಕೊಡುತ್ತೇನೆʼ ಎಂದಿದ್ದಾರೆ. ವರದಿಗಳ ಪ್ರಕಾರ ಈಗಾಗಲೇ ಅದಾ ಈ ಮೆನಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಸುಶಾಂತ್ ಡಿಸೆಂಬರ್ 2019ರಲ್ಲಿ ತಿಂಗಳಿಗೆ 4.5 ಲಕ್ಷ ರೂ.ಗೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಡ್ಯುಪ್ಲೆಕ್ಸ್ ಆಗಿದೆ. 3,600-ಚದರ ಅಡಿಗಳಷ್ಟು ವಿಸ್ತಾರವಾಗಿದೆ, ಕೆಳಗಿನ ಮಹಡಿಯಲ್ಲಿ ವಿಶಾಲವಾದ ಹಾಲ್ ಮತ್ತು ಮೇಲಿನ ಮಹಡಿಯಲ್ಲಿ ಮೂರು ಮಲಗುವ ಕೋಣೆಗಳಿವೆ.